ಬಜೆಟ್ ನಲ್ಲಿ ಯಶಸ್ವಿನಿ ಆರೋಗ್ಯ ಯೋಜನೆ ಮರು ಜಾರಿ: ಸಿಎಂ ಎಚ್. ಡಿ. ಕುಮಾರಸ್ವಾಮಿ

ರೈತರ ಅರೋಗ್ಯ ಕಾಪಾಡುವ ಉದ್ದೇಶದಿಂದ ಇದೆ 8 ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್ ನಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Published: 02nd February 2019 12:00 PM  |   Last Updated: 06th February 2019 07:44 AM   |  A+A-


CMHDKumaraswamy

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ

Posted By : ABN ABN
Source : UNI
ಮೈಸೂರು: ರೈತರ ಅರೋಗ್ಯ ಕಾಪಾಡುವ  ಉದ್ದೇಶದಿಂದ ಇದೆ 8 ರಂದು ಮಂಡನೆಯಾಗಲಿರುವ  ರಾಜ್ಯ ಬಜೆಟ್ ನಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರು  ಜಾರಿಗೆ ತರುವುದಾಗಿ   ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸುತ್ತೂರು ಗ್ರಾಮದಲ್ಲಿ ಹೊಸ ಹೈಟೆಕ್ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ಕಾರಣಗಳಿಂದಾಗಿ ಕಳೆದ ವರ್ಷ ಮುಂದುವರೆಸಲು ಸಾಧ್ಯವಾಗದ ಯೋಜನೆಗಳನ್ನು ಹೊಸ ಬಜೆಟ್ ನಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು. ಈ ಯೋಜನೆಯು ಸಹಕಾರಿ  ವಲಯದ  ರೈತರಿಗೆ ಬಹಳ ಪ್ರಯೋಜನವಾಗಲಿದೆ ಎಂದರು.

ಆರೋಗ್ಯ ಯೋಜನೆಗೆ ಕೇಂದ್ರ ಸರಕಾರ ಪ್ರಧಾನಿ ಹೆಸರನ್ನಿಟ್ಟು ಆರೋಗ್ಯ ಯೋಜನೆಗಳನ್ನು ಪ್ರಕಟ ಮಾಡಿದೆ. ಆದರೆ ಕೇಂದ್ರ ಸರಕಾರಕ್ಕಿಂತ ರಾಜ್ಯ ಸರ್ಕಾರ ಈ ವಲಯದಲ್ಲಿ  ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ ಎಂದರು.

'ಅಯುಷ್ಮಾನ್ ಭಾರತ್ ಆರೋಗ್ಯ ಯೋಜನೆ'ಗೆ ಉಲ್ಲೇಖಿಸಿ. ರಾಜ್ಯ ಸರ್ಕಾರವು ಇದಕ್ಕಿಂತ ಹೆಚ್ಚು ಹಣ ಖರ್ಚು ಮಾಡುತ್ತಿದೆ ಆದರೆ ದೇಶದ ಜನರನ್ನು ದಾರಿತಪ್ಪಿಸುವ ರೀತಿಯಲ್ಲಿ ಕೇಂದ್ರ ಆರೋಗ್ಯ ಯೋಜನೆಗಳಿಗೆ ಹೆಚ್ಚಿನ ಹಣ ವೆಚ್ಚಮಾಡಲಾಗುತ್ತಿದೆ ಎಂದು ಪ್ರಚಾರ ಮಾಡಲಾಗುತ್ತಿದೆ.    

ನಿನ್ನೆ ಮಂಡಿಸಿದ ಕೇಂದ್ರ ಬಜೆಟ್, ಎನ್ ಡಿಎ ಸರಕಾರ ಮರಳಿ ಅಧಿಕಾರಕ್ಕೆ ಮರಳಲಿದೆ ಎಂಬ ಭಾವನೆಯಿಂದ ಹೊಂದಿದೆ. ಆದರೆ ದೇಶದ ಜನರು ಹೆಚ್ಚಿದನ್ನು ನಿರೀಕ್ಷಿಸಿದ್ದರು ಆದರೆ ಅವರಿಗೆಲ್ಲ ನಿರಾಶೆಯಾಗಿದೆ ಎಂದು ಹೇಳಿದರು.
Stay up to date on all the latest ಕರ್ನಾಟಕ ಬಜೆಟ್ news with The Kannadaprabha App. Download now
facebook twitter whatsapp