ಬಜೆಟ್ ಮಂಡನೆ ಬಳಿಕವಷ್ಟೇ ಸದಸ್ಯರಿಗೆ ಬಜೆಟ್ ಪ್ರತಿ, ಸಿಎಂ ನಿರ್ಣಯಕ್ಕೆ ಬಿಜೆಪಿ ತೀವ್ರ ವಿರೋಧ!

ಹಾಲಿ ದೋಸ್ತಿ ಸರ್ಕಾರದ ಸಿಎಂ ಕುಮಾರಸ್ವಾಮಿ ತಮ್ಮ 2ನೇ ಬಜೆಟ್ ಮಂಡನೆಗೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದು, ಬಜೆಟ್ ಗೆ ಸಂಬಂಧಿಸಿದಂತೆ ಸಿಎಂ ಎಚ್ ಡಿಕೆ ತೆಗೆದುಕೊಂಡಿರುವ ನಿರ್ಧಾರವೊಂದು ಪ್ರತಿಪಕ್ಷ ಬಿಜೆಪಿಯ ತೀವ್ರ ವಿರೋಧಕ್ಕೆ ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಹಾಲಿ ದೋಸ್ತಿ ಸರ್ಕಾರದ ಸಿಎಂ ಕುಮಾರಸ್ವಾಮಿ ತಮ್ಮ 2ನೇ ಬಜೆಟ್ ಮಂಡನೆಗೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದು, ಬಜೆಟ್ ಗೆ ಸಂಬಂಧಿಸಿದಂತೆ ಸಿಎಂ ಎಚ್ ಡಿಕೆ ತೆಗೆದುಕೊಂಡಿರುವ ನಿರ್ಧಾರವೊಂದು ಪ್ರತಿಪಕ್ಷ ಬಿಜೆಪಿಯ ತೀವ್ರ ವಿರೋಧಕ್ಕೆ ಕಾರಣವಾಗಿದೆ.
ಮೂಲಗಳ ಪ್ರಕಾರ ಬಜೆಟ್ ಭಾಷಣ ಆರಂಭಕ್ಕೂ ಮುನ್ನ ಎಲ್ಲಾ ಸದಸ್ಯರಿಗೂ ಬಜೆಟ್ ಪ್ರತಿ ನೀಡುವುದು ಸಂಪ್ರದಾಯ. ಆದರೆ ಈ ಬಾರಿ ಸಂಪ್ರದಾಯವನ್ನು ಮುರಿಯುವ ನಿರ್ಣಯವನ್ನು ಸಿಎಂ ಎಚ್‌ಡಿಕೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೇ ವಿಷಯವನ್ನೇ ಇಟ್ಟುಕೊಂಡು ಬಿಜೆಪಿ ಪ್ರತಿಭಟನೆಗೆ ಹೋಗಲು ನಿರ್ಧರಿಸಿದೆ ಎನ್ನಲಾಗಿದೆ.
ಹೀಗಾಗಿ ಸಿಎಂ ಎಚ್​​.ಡಿ ಕುಮಾರಸ್ವಾಮಿಯವರು ಬಜೆಟ್ ಭಾಷಣ ಆರಂಭಿಸುವ ಮುನ್ನವೇ ಸದನದಲ್ಲಿ ಬಿಜೆಪಿ ಗದ್ದಲ ಎಬ್ಬಿಸಲು ನಿರ್ಧರಿಸಿದೆ ಎನ್ನಲಾಗತ್ತಿದೆ. ಪ್ರತಿಸಲ ಮಂಡನೆಗೆ ಮುನ್ನವೇ ಬಜೆಟ್​​ ಪ್ರತಿ ಸಿಗುತ್ತಿತ್ತು, ಆದರೆ, ಈ ಬಾರಿ ಸಂಪೂರ್ಣ ಮಂಡನೆಯಾಗುವವರೆಗೂ ಸಿಎಂ ಬಜೆಟ್​​ ಪ್ರತಿ ನೀಡುವುದಿಲ್ಲ ಎಂದಿದ್ದಾರೆ. ಹೀಗಾಗಿ ಬಜೆಟ್ ಪ್ರತಿಗಳನ್ನು ಮುಂಚೆಯೇ ನೀಡುವೆ ಎಂದಿದ್ದ ಎಚ್‌ಡಿಕೆ ಈಗ ನಿರ್ಣಯ ಬದಲಿಸಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಎಂದು ಬಿಜೆಪಿ ಪ್ರತಿಭಟಿಸಲು ಮುಂದಾಗಿದೆ. 
ಅಲ್ಲದೇ ಬಜೆಟ್‌ಗೆ ಮುನ್ನವೇ ಪ್ರತಿಗಳನ್ನು ನೀಡಬೇಕೆಂದು ಈಗಾಗಲೇ ಯಡಿಯೂರಪ್ಪ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಜೆಟ್ ಪ್ರತಿಗಳು ಭಾಷಣಕ್ಕೆ ಮುನ್ನವೇ ವಿತರಣೆ ಆಗಬೇಕು. ಇಲ್ಲವಾದಲ್ಲಿ ಬಿಜೆಪಿ ಗದ್ದಲ ಎಬ್ಬಿಸಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com