'ರೈತ ಸಿರಿ'-ರೈತ ಪರ ಬಜೆಟ್: 'ನೇಗಿಲ ಯೋಗಿ' ಕೈ ಬಲಪಡಿಸಿದ ಸಿಎಂ ಕುಮಾರಸ್ವಾಮಿ

ಹಲವು ರಾಜಕೀಯ ಏರಿಳಿತಗಳ ನಡುವೆಯೇ ರಾಜ್ಯ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಮ್ಮ 2ನೇ ಬಜೆಟ್ ಮಂಡಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಹಲವು ರಾಜಕೀಯ ಏರಿಳಿತಗಳ ನಡುವೆಯೇ ರಾಜ್ಯ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಮ್ಮ 2ನೇ ಬಜೆಟ್ ಮಂಡಿಸಿದ್ದಾರೆ.
2019-20ನೇ ಸಾಲಿನ ಬಜೆಟ್ ನಲ್ಲಿ ರೈತರಿಗೆ ಆದ್ಯತೆ ನೀಡಲಾಗಿದೆ.  
ಸಿರಿ ಧಾನ್ಯಗಳ ವಿಸ್ತೀರ್ಣ ಹೆಚ್ಚಿಸುವ ಸಲವಾಗಿ ‘ರೈತ ಸಿರಿ’ ಹೆಸರಿನ ನೂತನ ಯೋಜನೆಯನ್ನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಇದಕ್ಕಾಗಿ 10 ಕೋಟಿ ರೂಪಾಯಿ ಮೀಸಲಿರಿಸಿರುವುದಾಗಿ ತಿಳಿಸಿದ್ದಾರೆ.  
ಕೃಷಿ ಭಾಗ್ಯ, ಸಾವಯವ ಕೃಷಿ, ಶೂನ್ಯ ಬಂಡವಾಳ , ಕೃಷಿ ಹಾಗೂ ಇಸ್ರೇಲ್ ಮಾದರಿ ಕಿರು ನಿರಾವರಿ ಕಾರ್ಯಕ್ರಮಗಳಿಗೆ ಒಟ್ಟು 472 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಎಲ್ಲಾ ವರ್ಗದ ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಶೇ. 90ರಷ್ಟು ಪ್ರೋತ್ಸಾಹ ಧನ ವಿತರಿಸಲು ಸರ್ಕಾರ ನಿರ್ಧರಿಸಿದ್ದು, 368 ಕೋಟಿ ರೂ. ಅನುದಾನ ಮೀಸಲಿರಿಸಿದೆ.
ಕೃಷಿ ಹೊಂಡ ನಿರ್ಮಾಣಕ್ಕೆ 250 ಕೋಟಿ,  ಬರಪೀಡಿತ ಮತ್ತ ಅತಿಹೆಚ್ಚು ಅಂತರ್ಜಾಲ ಕುಸಿತವಿರುವ 100 ತಾಲೂಕುಗಳಲ್ಲಿ ಬರ ನಿರೋಧಕ ಜಲಾನಯನ ಚಟುವಟಿಕೆಗಳ ಅನುಷ್ಠಾನಕ್ಕೆ  100 ಕೋಟಿ ರೂ. ಘೋಷಣೆಯಾಗಿದೆ.
500 ಸಂಯುಕ್ತ ಸಹಕಾರ ಸಂಘ ಸ್ಥಾಪನೆಗೆ 5 ಕೋಟಿ ರೂಪಾಯಿ ಅನುದಾನ ಮೀಸಲಿರಿಸಿರುವ ಸಿಎಂ. ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆ ಜಾರಿಗೊಳಿಸಿದ್ದಾರೆ. ರೈತ ಮಹಿಳೆಯರ ಚಿನ್ನದ ಮೇಲೆ ಶೇ.3ರಷ್ಟು ಬಡ್ಡಿದರದಲ್ಲಿ ಸಾಲ ನೀಡಲು ನಿರ್ಧರಿಸಿದ್ದಾರೆ. 
ಈರುಳ್ಳಿ, ಆಲೂಗಡ್ಡೆ  ಸೇರಿದಂತೆ 12 ಬೆಳೆಗಳಿಗೆ ಪ್ರೋತ್ಸಾಹ ಧನ ನೀಡುವ ರೈತ ಕೃಷಿ ಕಣಜ ಯೋಜನೆಗಾಗಿ 510 ಕೋಟಿ ರು ಮೀಸಲಿಡಲಾಗಿದೆ.
ಧಾರವಾಡದಲ್ಲಿ ಮಾವು ಉತ್ಪಾದಕಾ ಘಟಕ ಸ್ಥಾಪನೆ ಹಾಗೂ ಕೋಲಾರದಲ್ಲಿ ಟೊಮಾಟೋ ಉತ್ಪಾದನಾ ಘಟಕ ಸ್ಥಾಪನೆ, ಜೇನು ಕೃಷಿ ಉತ್ತೇಜನಕ್ಕೆ 5 ಕೋಟಿ ಮತ್ತು ಮಿಡಿ ಸೌತೆ ಬೆಳೆಯಲು ಉತ್ತೇಜನ ನೀಡುವ ಸಲುವಾಗಿ 6 ಕೋಟಿ ರು.ಅನುದಾನ ನಿಗದಿ ಪಡಿಸಲಾಗುವುದು.
ತೆರಿಗೆದಾರರ ಹಣ ಪೋಲಾಗದಂತೆ ರೈತರ ಸಾಲಮನ್ನಾ ಮಾಡಲಾಗಿದೆ. 12 ಲಕ್ಷ ಖಾತೆಗೆ 5 ಸಾವಿರದ 400 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದ 156 ತಾಲೂಕುಗಳು ಬರ  ಪರಿಸ್ಥಿತಿ ಬಂದಿದೆ. ಬರ ಪರಿಸ್ಥಿತಿ ನಿರ್ವಹಿಸಲು ಸರ್ಕಾರ ಸಮರ್ಥವಾಗಿದ್ದು, ರೈತರಿಗೆ ಪ್ರತಿ ಹೆಕ್ಟೇರ್ ಗೆ 7,500 ರೂಪಾಯಿ ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com