ಕರ್ನಾಟಕ ಬಜೆಟ್ 2019ನಲ್ಲಿ ಪ್ರಸ್ತಾಪವಾಗದ ವಲಯಗಳು

ಕರ್ನಾಟಕದ ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ಪ್ರಾಥಮಿಕ...
ಬಜೆಟ್ ಮಂಡನೆಗೆ ಮುನ್ನ ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ ಜಿ ಪರಮೇಶ್ವರ್ ಮತ್ತು ಸಚಿವ ಡಿ ಕೆ ಶಿವಕುಮಾರ್
ಬಜೆಟ್ ಮಂಡನೆಗೆ ಮುನ್ನ ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ ಜಿ ಪರಮೇಶ್ವರ್ ಮತ್ತು ಸಚಿವ ಡಿ ಕೆ ಶಿವಕುಮಾರ್

ಬೆಂಗಳೂರು: ಕರ್ನಾಟಕದ ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಆದರೆ ಉನ್ನತ ಶಿಕ್ಷಣ ಬಗ್ಗೆ ಅಷ್ಟೊಂದು ಯೋಜನೆ, ರೂಪುರೇಷೆಗಳು, ಪ್ರಕಟಣೆಗಳು ಕಂಡುಬಂದಿಲ್ಲ.

ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಮುಂದಿನ ತಲೆಮಾರಿನ ಕಲಿಕಾ ಕೇಂದ್ರ ಸ್ಥಾಪನೆ ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಬಲವರ್ಧಿಸಲು ಪ್ರಯೋಗಾಲಯಗಳ ಸೌಕರ್ಯಕ್ಕೆ 10 ಕೋಟಿ ರೂಪಾಯಿ ಮೀಸಲು ಬಿಟ್ಟರೆ ಬೇರಾವುದೇ ಹೊಸ ಘೋಷಣೆಗಳನ್ನು ಸರ್ಕಾರ ಮಾಡಿಲ್ಲ.

ಉನ್ನತ ಶಿಕ್ಷಣಕ್ಕೆ ಬಜೆಟ್ ನಲ್ಲಿ ಒತ್ತು ನೀಡದಿರುವುದಕ್ಕೆ ಶಿಕ್ಷಣ ತಜ್ಞರು ಟೀಕಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ ಎಂಎಸ್ ತಿಮ್ಮಪ್ಪ, ಯೋಜನೆಗಳನ್ನು ಘೋಷಿಸುವುದು ಸುಲಭ. ಆದರೆ ಅಂತಹ ಚಟುವಟಿಕೆಗಳನ್ನು ನಡೆಸಲು ಸಂಪನ್ಮೂಲ ವ್ಯಕ್ತಿಗಳು ಎಲ್ಲಿದ್ದಾರೆ? ಇಂತಹ ಯೋಜನೆಗಳ ಬದಲಿಗೆ ಉನ್ನತ ಶಿಕ್ಷಣದಲ್ಲಿ ಬೋಧನೆಗೆ ಗುಣಟ್ಟದ ಶಿಕ್ಷಕರನ್ನು ನೇಮಕಾತಿ ಮಾಡುವ ಬಗ್ಗೆ ಸಿಎಂ ಕುಮಾರಸ್ವಾಮಿ ಗಮನ ಹರಿಸಬೇಕಿತ್ತು ಎಂದರು.

ಐಟಿ / ಬಿಟಿ ಉದ್ಯಮ: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳನ್ನು ಸಿಎಂ ಕುಮಾರಸ್ವಾಮಿ ನಿರ್ಲಕ್ಷಿಸಿದ್ದಾರೆ. ದ್ವಿತೀಯ ಮತ್ತು ತೃತೀಯ ದರ್ಜೆಯ ನಗರಗಳಲ್ಲಿ ಸಂಶೋಧನಾ ಪ್ರೋತ್ಸಾಹಕ ನೀತಿಗಳನ್ನು ಈ ವಲಯಗಳಲ್ಲಿ ಕೈಗಾರಿಕಾ ತಜ್ಞರು ಸ್ವಾಗತಿಸಿದರೆ ಐಟಿ/ಬಿಟಿ ವಲಯಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ ಎನ್ನುತ್ತಾರೆ.

ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಚಿತ್ರೋದ್ಯಮದೊಂದಿಗೆ ಗುರುತಿಸಿಕೊಂಡಿದ್ದರೂ ಕೂಡ ಮನರಂಜನಾ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ ನಲ್ಲಿ ಆದ್ಯತೆ ಸಿಕ್ಕಿಲ್ಲ. ತಿಪಟೂರಿನಲ್ಲಿ ನರಸಿಂಹರಾಜು ಸಮ್ಮೇಳನ ಸಭಾಂಗಣಕ್ಕೆ 2 ಕೋಟಿ ರೂಪಾಯಿ ಹಾಗೂ ಕೊಡವ ಮತ್ತು ತುಳು ಭಾಷೆಗೆ 1 ಕೋಟಿ ರೂಪಾಯಿ ಮೀಸಲಿಟ್ಟಿರುವುದು ಬಿಟ್ಟರೆ ಬೇರಾವುದೇ ಹೊಸದು ಯೋಜನೆಗಳು ಬಜೆಟ್ ನಲ್ಲಿ ಪ್ರಕಟವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com