Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Supreme Court

ಅತೃಪ್ತ ಶಾಸಕರಿಗೆ ರಿಲೀಫ್: ರಾಜಿನಾಮೆ ಬಗ್ಗೆ ನಿರ್ದಿಷ್ಟ ಸಮಯದಲ್ಲಿ ನಿರ್ಧರಿಸುವ ವಿವೇಚನೆ ಸ್ಪೀಕರ್ ಗೆ ಬಿಟ್ಟದ್ದು; ಸುಪ್ರೀಂ ಕೋರ್ಟ್

Hafiz Saeed, Mumbai Attacks Mastermind, Arrested, Sent To Jail: Pakistan Media

ಉಗ್ರ ಹಫೀಜ್ ಸಯ್ಯೀದ್ ಬಂಧನ, ನ್ಯಾಯಾಂಗ ವಶಕ್ಕೆ: ಪಾಕ್ ಮಾಧ್ಯಮಗಳ ವರದಿ

File photo of rebel legislators

ನಾಳೆ ವಿಶ್ವಾಸ ಮತ ಯಾಚನೆಗೆ ಹಾಜರಾಗುವುದಿಲ್ಲ, ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ: ಅತೃಪ್ತ ಶಾಸಕರು

ಆಂಬ್ಯುಲೆನ್ಸ್ ಮತ್ತು ಟೆಂಪೊ ನಡುವೆ ಢಿಕ್ಕಿ, ಮಹಿಳೆ ಮೃತ್ಯು, ಮೂವರಿಗೆ ಗಾಯ

ಪುತ್ತೂರು: ಆಂಬ್ಯುಲೆನ್ಸ್ ಮತ್ತು ಟೆಂಪೊ ನಡುವೆ ಢಿಕ್ಕಿ, ಮಹಿಳೆ ಮೃತ್ಯು, ಮೂವರಿಗೆ ಗಾಯ

RBI

ರಿಸರ್ವ್ ಬ್ಯಾಂಕ್ ಹೆಚ್ಚುವರಿ ಹಣವನ್ನು ಸರ್ಕಾರಕ್ಕೆ ವರ್ಗಾಯಿಸಬೇಕು: ಜಲಾನ್ ಸಮಿತಿ

Russia to deliver S-400 system by April 2023: Govt

2023ರ ಏಪ್ರಿಲ್ ನಲ್ಲಿ ಭಾರತೀಯ ಸೇನೆಯ ಬತ್ತಳಿಕೆ ಸೇರಲಿದೆ ರಷ್ಯಾದ ಅತ್ಯಂತ ವಿಧ್ವಂಸಕ S-400 ಕ್ಷಿಪಣಿ ವ್ಯವಸ್ಥೆ!

189 new rail lines under construction: Government

ರೈಲ್ವೆ ಇಲಾಖೆಯಿಂದ ಏಪ್ರಿಲ್ 1 ರ ವೇಳೆಗೆ 189 ಹೊಸ ಮಾರ್ಗ ಯೋಜನೆ

ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್

ಇಂಡೋನೇಷಿಯಾ ಓಪನ್: ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್ ಶುಭಾರಂಭ

BCCI to announce Indian team for West Indies tour soon

ಜುಲೈ 19 ರಂದು ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಭವಿಷ್ಯ ನಿರ್ಧಾರ

20-year-old murder case against Yogi Adityanath dismissed

20 ವರ್ಷ ಹಳೆ ಕೊಲೆ ಪ್ರಕರಣ: ಯೋಗಿ ಆದಿತ್ಯನಾಥ್ ನೆ ಕ್ಲೀನ್ ಚಿಟ್

Next Team India head coach should be below 60 and have minimum two-year international experience

ವಿಶ್ವಕಪ್ ಬೆನ್ನಲ್ಲೇ ಟೀಂ ಇಂಡಿಯಾಗೆ ನೂತನ ಕೋಚ್ ಹುಡುಕಾಟ, 60 ವರ್ಷಕ್ಕಿಂತ ಕಡಿಮೆ ವಯಸ್ಸು, ಕನಿಷ್ಠ 2 ವರ್ಷ ಅನುಭವ!

HD Kumaraswamy offers prayers at Sri Sringeri Shankara Mutt in Shankarapuram

ತಾಯಿ ,ಶಾರದಾಂಬೆ ಕಾಪಾಡಮ್ಮ! ಶಂಕರಪುರಂ ನ ಶೃಂಗೇರಿ ಮಠಕ್ಕೆ ಸಿಎಂ ಕುಮಾರಸ್ವಾಮಿ ಭೇಟಿ

Shivaraj Singh Chauhan

ಶ್ರೀಲಂಕಾದಲ್ಲಿ ಸೀತೆಯ ಅಪಹರಣವಾಗಿತ್ತೋ ಇಲ್ಲವೋ ಎಂದು ಸರ್ಕಾರ ಏಕೆ ಪರೀಕ್ಷೆ ಮಾಡುವುದು?:ಶಿವರಾಜ್ ಸಿಂಗ್ ಚೌಹಾಣ್

ಮುಖಪುಟ >> ಬಜೆಟ್-2019 >> ಕರ್ನಾಟಕ ಬಜೆಟ್

ಕರ್ನಾಟಕ ಬಜೆಟ್ 2019: ಗ್ರಾಮೀಣಾಭಿವೃದ್ಧಿಗೆ ವಿಶೇಷ ಅನುದಾನ ಘೋಷಣೆ

Collective Photo

ಸಂಗ್ರಹ ಚಿತ್ರ

ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇಂದು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿ ಇಲಾಖೆಗೆ ಈ ಬಾರಿ ವಿಶೇಷ ಅನುದಾನಗಳನ್ನು ಘೋಷಿಸಲಾಗಿದೆ.

2019ನ್ನು ಜಲವರ್ಷ ಎಂದು ಘೋಷಿಸಲಾಗಿದ್ದು, ಜಲಾಮೃತ ಯೋಜನೆಯಡಿ 20 ಸಾವಿರ ಜಲ ಸಂರಕ್ಷಣಾ ಕಾಮಗಾರಿಗಳನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಡಿ ನಿರ್ವಹಿಸಲು 500 ಕೋಟಿ ರೂ. ಅನುದಾನ ಘೋಷಿಸಲಾಗಿದೆ.

ಇನ್ನು ರಾಯಚೂರು, ವಿಜಯಪುರ, ಮಂಡ್ಯ, ಮತ್ತು ಕೋಲಾರ ಜಿಲ್ಲೆಗಳಲ್ಲಿ 4 ಸಾವಿರ ಕೋಟಿ ರೂ. ವೆಚ್ಚದಲ್ಲಿ ಜಲಧಾರೆಯ ಮೊದಲ ಹಂತದ ಯೋಜನೆ ಪ್ರಾರಂಭಿಸಲು ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಾಗಿದೆ.

ನರೇಗಾ ಯೋಜನೆಯಡಿ 12 ಕೋಟಿ ಮಾನವ ದಿನಗಳ ಸೃಜನೆಯ ಗುರಿಯನ್ನು ಸರ್ಕಾರ ಹೊಂದಿರುವುದು ಹೇಳಿದ ಮುಖ್ಯಮಂತ್ರಿ, ಸುಭದ್ರ ಶಾಲೆ ಯೋಜನೆಯಡಿ ರಾಜ್ಯದ 6825 ಗ್ರಾಮೀಣ ಶಾಲೆಗಳಿಗೆ ನರೇಗಾ ಯೋಜನೆಯಡಿ 90 ಕೋಟಿ ರೂ. ವೆಚ್ಚದಲ್ಲಿ ಕಾಂಪೌಂಡ್ ತಡೆಗೋಡೆಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

1 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿಗಳಾಗಿ ಒಣ ಮತ್ತು ಹಸಿ ತ್ಯಾಜ್ಯವನ್ನು ವಿಂಗಡಿಸಿ ಒಣ ಕಸ ಮರುಬಳಕೆ ಹಾಗೂ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಸ್ವಚ್ಛ ಮೇವ ಜಯತೆ ಆಂದೋಲನವನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ.

ಅಲ್ಲದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳ ಡಿಜಿಟಲೀಕರಣ ಯೋಜನೆ ಹಾಗೂ ತೆರಿಗೆ ವ್ಯಾಪ್ತಿಯ ಹೊರಗೆ ಉಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೊ ಬಜೆಟ್ ನಲ್ಲಿ  ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲಾ ಪಂಚಾಯಿತಿಯ ಅನಿರ್ಬಂಧಿತ ಅಭಿವೃದ್ಧಿ ಅನುದಾನವನ್ನು ಗರಿಷ್ಠ 8 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದ್ದು, ಇದಕ್ಕಾಗಿ 172 ಕೋಟಿ ರೂ. ಅನುದಾನವನ್ನು ಘೋಷಿಸಲಾಗಿದೆ.  ತಾಲೂಕು ಪಂಚಾಯಿತಿಯ ಅನಿರ್ಬಂಧಿತ ಅಭಿವೃದ್ಧಿ ಅನುದಾನವನ್ನು ಗರಿಷ್ಠ 2 ಕೋಟಿ ರೂ. ಗೆ. ಹೆಚ್ಚಿಸಲಾಗಿದ್ದು, ಇದಕ್ಕಾಗಿ 372 ಕೋಟಿ ರೂ. ಅನುದಾನವನ್ನು ಘೋಷಿಸಲಾಗಿದೆ.

ಮಹಾತ್ಮ ಗಾಂಧೀಜಿ ಅವರ 150 ನೇ ಜಯಂತಿ ಅಂಗವಾಗಿ ಗ್ರಾಮ ಪಂಚಾಯಿತಿಗಳ ಆಡಳಿತದಲ್ಲಿ ಪಾರದರ್ಶತೆ ಬಿಂಬಿಸಲು ಮತ್ತು ಸಾರ್ವಜನಿಕರ ಮಾಹಿತಿಗಾಗಿ ಗ್ರಾಮ ಪಂಚಾಯಿತಿ ಆಯವ್ಯಯ ಕಿರು ಪುಸ್ತಕ ಪ್ರಕಟಣೆ ಮಾಡುವ ಬಗ್ಗೆಯೂ ಸಿಎಂ ಕುಮಾರಸ್ವಾಮಿ ತಮ್ಮ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.

Posted by: ABN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Karnataka Budget 2019, CM Kumaraswamy, RDPR, Allocations ಕರ್ನಾಟಕ ಬಜೆಟ್ 2019, ಮುಖ್ಯಮಂತ್ರಿ ಕುಮಾರಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಅನುದಾನಗಳು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS