ಇನ್ನು ಎರಡು ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಂಪೂರ್ಣ ಆಟೋಮ್ಯಾಟಿಕ್!

ಇನ್ನು 2 ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಅಂದಾಜು, ಪರಿಶೀಲನೆ ಪ್ರಕ್ರಿಯೆ ಸಂಪೂರ್ಣವಾಗಿ ಯಂತ್ರಚಾಲಿತವಾಗಿರಲಿದೆ ಎಂದು ಕೇಂದ್ರ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಘೊಷಿಸಿದ್ದಾರೆ.
ಇನ್ನು ಎರಡು ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಂಪೂರ್ಣ ಆಟೋಮ್ಯಾಟಿಕ್!
ಇನ್ನು ಎರಡು ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಂಪೂರ್ಣ ಆಟೋಮ್ಯಾಟಿಕ್!
ನವದೆಹಲಿ: ಇನ್ನು 2 ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಅಂದಾಜು,  ಪರಿಶೀಲನೆ ಪ್ರಕ್ರಿಯೆ ಸಂಪೂರ್ಣವಾಗಿ ಯಂತ್ರಚಾಲಿತವಾಗಿರಲಿದೆ ಎಂದು ಕೇಂದ್ರ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಘೊಷಿಸಿದ್ದಾರೆ. 
ಫೆ.1 ರಂದು ಕೇಂದ್ರ ಆಯ-ವ್ಯಯ ಮಂಡಿಸಿರುವ ಪಿಯೂಷ್ ಗೋಯಲ್, ಆದಾಯ ತೆರಿಗೆ ಸಂಗ್ರಹ ದ್ವಿಗುಣವಾಗಿದೆ. 12 ಲಕ್ಷ ಕೋಟಿಗೂ ಮೀರಿದ ತೆರಿಗೆ ಸಂಗ್ರಹ. 2013-14 ರಲ್ಲಿ 6.38 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗುತ್ತಿತ್ತು. ಈ ವರ್ಷ ಶೇ.99.94 ರಷ್ಟು ಆದಾಯ ತೆರಿಗೆ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ. 
ಇದೇ ವೇಳೆ ಅಂದಾಜು ಮತ್ತು ಪಾವತಿ ಪ್ರಕ್ರಿಯೆಗಳನ್ನು ಯಂತ್ರಚಾಲಿತವನ್ನಾಗಿಸಲಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ಎರಡು ವರ್ಷಗಳಲ್ಲಿ ಆದಾಯ ತೆರಿಗೆ ಸಲ್ಲಿಸುವ  ಪ್ರಕ್ರಿಯೆಗಳು ಸಂಪೂರ್ಣ ಯಂತ್ರಚಾಲಿತವಾಗಲಿದ್ದು 24 ಗಂಟೆಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com