ಕೇಂದ್ರ ಬಜೆಟ್ 2019ರ ಮೇಲಿನ ನಿರೀಕ್ಷೆ; ಸೆನ್ಸೆಕ್ಸ್ 150ಕ್ಕೂ ಹೆಚ್ಚು ಅಂಕಗಳ ಏರಿಕೆ

ಹಾಲಿ ಎನ್ ಡಿಎ ಸರ್ಕಾರ ಕೊನೆಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಭಾರತೀಯ ಷೇರುಮಾರುಕಟ್ಟೆ ಮೇಲೆ ಬಜೆಟ್ ಸಕಾರಾತ್ಮಕ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ 160 ಅಂಕಗಳ ಏರಿಕೆ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಹಾಲಿ ಎನ್ ಡಿಎ ಸರ್ಕಾರ ಕೊನೆಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಭಾರತೀಯ ಷೇರುಮಾರುಕಟ್ಟೆ ಮೇಲೆ ಬಜೆಟ್ ಸಕಾರಾತ್ಮಕ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ 160 ಅಂಕಗಳ ಏರಿಕೆ ಕಂಡಿದೆ.
ಇಂದು ಷೇರುಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಭಾರತೀಯ ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಪರಿಣಾಮ ಸೆನ್ಸೆಕ್ಸ್ 160 ಅಂಕಗಳ ಏರಿಕೆಯೊಂದಿಗೆ 36,448.30 ಗಳಿಗೆ ಏರಿಕೆಯಾಗಿದೆ. ಅಂತೆಯೇ ನಿಫ್ಟಿ ಕೂಡ 57 ಅಂಕಗಳ ಏರಿಕೆ ಕಂಡಿದ್ದು, 10,869 ಅಂಕಗಳಿಗೆ ಏರಿಕೆಯಾಗಿದೆ.
ಇನ್ನು ಇಂದಿನ ವಹಿವಾಟಿನಲ್ಲಿ ದೇಶೀಯ ಷೇರುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಪರಿಣಾಮ ಭಾರತೀಯ ಷೇರುಗಳ ಮೌಲ್ಯ ಕೂಡ ಹೆಚ್ಚಾಗಿದೆ. ಇನ್ನು ಮಾರುಕಟ್ಟೆ ಚೇತರಿಕೆ ಕಾಣುವ ಮೂಲಕ ಕಳೆದ ನಾಲ್ಕು ತಿಂಗಳಲ್ಲೇ ಸೂಚ್ಯಂಕ ಗರಿಷ್ಠ ಮಟ್ಟಕ್ಕೆ ತಲುಪಿದೆ. 
ಆಟೋ, ಎಫ್ಎಂಸಿಜಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳ ಷೇರುಗಳಿಗೆ ಹೆಚ್ಚಾಗಿ ಬೇಡಿಕೆ ಕಂಡುಬಂದಿದೆ. ಇನ್ನು ಕಂಪನಿಗಳ ಸಾಲಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಹೆಚ್ ಡಿಎಫ್ ಸಿ, ಇನ್ಫೋಸಿಸ್, ಹೆಚ್ ಡಿಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಸಂಸ್ಛೆಗಳು ಹೆಚ್ಚಿನ ಲಾಭಾಂಶ ಗಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com