ಕೇಂದ್ರ ಮಧ್ಯಂತರ ಬಜೆಟ್ ನಲ್ಲಿ ಕರ್ನಾಟಕದ ರೈಲ್ವೆ ವಲಯಕ್ಕೆ 1,828 ಕೋಟಿ ರೂ.

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ ನೈರುತ್ಯ ವಿಭಾಗದ ರೈಲ್ವೆಗೆ 2019-20ನೇ ಸಾಲಿನಲ್ಲಿ 1,828...
ಕೇಂದ್ರ ಸಚಿವ ಪಿಯೂಷ್ ಗೋಯಲ್ ರಿಂದ ಬಜೆಟ್ ಮಂಡನೆ
ಕೇಂದ್ರ ಸಚಿವ ಪಿಯೂಷ್ ಗೋಯಲ್ ರಿಂದ ಬಜೆಟ್ ಮಂಡನೆ

ಬೆಂಗಳೂರು: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ ನೈರುತ್ಯ ವಿಭಾಗದ ರೈಲ್ವೆಗೆ 2019-20ನೇ ಸಾಲಿನಲ್ಲಿ 1,828 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಕಳೆದ ವರ್ಷಕ್ಕಿಂತ ಈ ಮೊತ್ತ ಶೇಕಡಾ 20ರಷ್ಟು ಹೆಚ್ಚಾಗಿದೆ.

ನೈರುತ್ಯ ರೈಲ್ವೆಗೆ ಈ ವರ್ಷದ ಮಧ್ಯಂತರ ಬಜೆಟ್ ನಲ್ಲಿ ಯಾವುದೇ ಹೊಸ ಯೋಜನೆಯಾಗಲಿ, ಹೊಸ ರೈಲನ್ನು ಪ್ರಕಟಿಸಿಲ್ಲ. ಈಗಾಗಲೇ ಘೋಷಣೆಯಾಗಿರುವ ಯೋಜನೆಗಳನ್ನು ಪೂರ್ಣಗೊಳಿಸುವುದು ಮತ್ತು ಯೋಜನೆಗಳನ್ನು ತ್ವರಿತಗೊಳಿಸುವುದು ಆಗಿದೆ.

ಬೆಂಗಳೂರು ನಗರದ ಉದ್ದೇಶಿತ ಉಪನಗರ ರೈಲು ಕಾರಿಡಾರ್ ಗೆ 23 ಸಾವಿರ ಕೋಟಿ ರೂಪಾಯಿಗಳ ಪ್ರಸ್ತಾವನೆಗೆ 10 ಕೋಟಿ ರೂಪಾಯಿ ಘೋಷಿಸಲಾಗಿದೆ. ರೈಲ್ವೆ ಹೊಸ ಮಾರ್ಗಕ್ಕೆ 243 ಕೋಟಿ ರೂಪಾಯಿ, ರೋಲಿಂಗ್ ಸ್ಟಾಕ್ ಗಳಿಗೆ 38 ಕೋಟಿ ರೂಪಾಯಿ, ಬಂಡವಾಳದ ಘಟಕ 389 ಕೋಟಿ ರೂಪಾಯಿ, ಪ್ರಯಾಣಿಕರ ಸೌಲಭ್ಯಗಳಿಗೆ 187 ಕೋಟಿ ರೂಪಾಯಿ, ಕಾರ್ಯಾಗಾರಗಳು187 ಕೋಟಿ ರೂಪಾಯಿ ಮತ್ತು ಇತರ ಕೆಲಸಗಳಿಗೆ 36 ಕೋಟಿ ರೂಪಾಯಿ ನೀಡಲಾಗಿದೆ.

ಮುಂಬರುವ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ಸೌಕರ್ಯಗಳಿಗೆ 171 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಬೆಂಗಳೂರು ರೈಲ್ವೆ ವಲಯದ ಬೆಂಗಳೂರು ಕಂಟೋನ್ಮೆಂಟ್, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಿಲ್ದಾಣ, ಬಾಣಸವಾಡಿ, ಕೃಷ್ಣರಾಜಪುರ, ಮಂಡ್ಯ ಮತ್ತು ಹಾಸನ ರೈಲು ನಿಲ್ದಾಣಗಳಲ್ಲಿ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ಮೈಸೂರು ವಿಭಾಗದ ಮೈಸೂರು, ದಾವಣಗೆರೆ ಮತ್ತು ಹಾಸನ ರೈಲು ನಿಲ್ದಾಣಗಳಿಗೆ ಫೇಸ್ ಲಿಫ್ಟ್, ಧಾರವಾಡ, ಹೊಸಪೇಟೆ, ವಾಸ್ಕೊ ಡ ಗಾಮ, ಬಳ್ಳಾರಿ ರೈಲು ನಿಲ್ದಾಣಗಳ ಅಭಿವೃದ್ಧಿಯು ಈ ಸಾಲಿನ ಬಜೆಟ್ ನಲ್ಲಿ ಸೇರಿಕೊಂಡಿದೆ. ಹುಬ್ಬಳ್ಳಿ ವಿಭಾಗದಲ್ಲಿ ಒಟ್ಟು 83 ಪ್ಲಾಟ್ ಫಾರ್ಮ್ ಗಳನ್ನು ಉನ್ನತ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುತ್ತದೆ.

ಈಗಾಗಲೇ ಮುಂದುವರಿದಿರುವ ಯೋಜನೆಗಳಾದ ಹುಬ್ಬಳ್ಳಿ-ಅಂಕೋಲಾ(255 ಕೋಟಿ), ರಾಯದುರ್ಗ-ತುಮಕೂರು ಕಲ್ಯಾಣದುರ್ಗ ಮಾರ್ಗವಾಗಿ 135 ಕೋಟಿ ರೂಪಾಯಿ, ಬಾಗಲಕೋಟೆ-ಕುಡಚಿ 20 ಕೋಟಿ ರೂ, ತುಮಕೂರು-ಚಿತ್ರದುರ್ಗ-ದಾವಣಗೆರೆ 100 ಕೋಟಿ ರೂ ಮತ್ತು ಗದಗ-ವಾಡಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ನೆರವೇರಲಿದೆ.

ರೈಲ್ವೆ ಮಾರ್ಗ ದಿಗುಣಕ್ಕೆ ಈಗಾಗಲೇ ಅನುದಾನ ಸಿಕ್ಕಿರುವ ಯಶವಂತಪುರ-ಚನ್ನಸಂದ್ರ, ಬೈಯಪ್ಪನಹಳ್ಳಿ-ಹೊಸೂರು, ಹೊಸಪೇಟೆ-ಹುಬ್ಬಳ್ಳಿ-ಲೊಂಡಾ-ಟಿನೈಗಾಟ್-ವಾಸ್ಕೊ ಡ ಗಾಮ, ಹೊಟ್ಗಿ-ಕುಡ್ಗಿ-ಗದಗ್, ಯಲಹಂಕ-ಪೆನುಕೊಂಡ, ಹುಬ್ಬಳ್ಳಿ-ಚಿಕ್ಕಜಾಜೂರು ಮತ್ತು ಅರಸೀಕೆರೆ-ತುಮಕೂರು ರೈಲು ಮಾರ್ಗಗಳ ಕಾಮಗಾರಿ ಮುಂದುವರಿಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com