ಕೇಂದ್ರ ಬಜೆಟ್ ನಲ್ಲಿ ನವೋದ್ಯಮಕ್ಕೆ ಉತ್ತೇಜನ: ಏಂಜಲ್ ಟ್ಯಾಕ್ಸ್ ರದ್ದು

ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಅದರಲ್ಲಿಯೂ ನವೋದ್ಯಮ (ಸ್ಟಾರ್ಟ್ ಅಪ್) ಗಳಿಗೆ ತಲೆನೋವಾಗಿದ್ದ ಏಂಜಲ್ ಟ್ಯಾಕ್ಸ್ ಅನ್ನು ರದ್ದು ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನವದೆಹಲಿ: ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಅದರಲ್ಲಿಯೂ ನವೋದ್ಯಮ (ಸ್ಟಾರ್ಟ್ ಅಪ್) ಗಳಿಗೆ ತಲೆನೋವಾಗಿದ್ದ ಏಂಜಲ್ ಟ್ಯಾಕ್ಸ್ ಅನ್ನು ರದ್ದು ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಶುಕ್ರವಾರ ಕೇಂದ್ರ ಬಜೆಟ್ ಮಂಡನೆ ಮಾಡಿರುವ ಹಣಕಾಸು ಸಚಿವೆ ಸ್ಟಾರ್ಟ್ ಅಪ್ ಉದ್ಯಮಗಳಿಗೆ ಹೆಚ್ಚು ಉತ್ತೇಜನ ನೀಡುವ ಕುರಿತು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದು ಏಂಜಲ್ ಟ್ಯಾಕ್ಸ್ ರದ್ದು ಮಾಡಿದ್ದಾರೆ.
ಈ ಮುನ್ನ ರಾಹುಲ್ ಗಾಂಧಿ ಸಹ ಏಂಜಲ್ ಟ್ಯಾಕ್ಸ್ ತೆಗೆದು ಹಾಕಬೇಕೆಂದು ಒತ್ತಾಯಿಸಿದ್ದರು. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿಯೂ ಸಹ ಇದರ ಪ್ರಸ್ತಾಪವಿತ್ತು.
ಈ ಸಾಲಿನ ಬಜೆಟ್ ನಲ್ಲಿ ಏಂಜಲ್ ಟ್ಯಾಕ್ಸ್ ತೆಗೆದು ಹಾಕಿರುವುದಲ್ಲದೆ ನವೋದ್ಯಮ ಸ್ಥಾಪಿಸುವವರಿಗೆ ತೆರಿಗೆ ಅಧಿಕಾರಿಗಳ ತನಿಖೆಯಿಂದಲೂ ವಿನಾಯಿತಿ ಪ್ರಕಟಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com