ಮಾಧ್ಯಮ ಮತ್ತು ವಾಯುಯಾನ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆ ಹೆಚ್ಚಿಸಲು ಸರ್ಕಾರ ಚಿಂತನೆ: ನಿರ್ಮಲಾ ಸೀತಾರಾಮನ್

ಮಾಧ್ಯಮ ಮತ್ತು ವಾಯುಯಾನ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆಯನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹಣಕಾಸು ಸಚಿವೆ ...
ನವದೆಹಲಿ: ಮಾಧ್ಯಮ ಮತ್ತು ವಾಯುಯಾನ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆಯನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸಂಸತ್ತಿನಲ್ಲಿ ಇಂದು ಬಜೆಟ್ ಮಂಡಿಸಿದ ಸಚಿವೆ, ವಿಮಾ ಮಧ್ಯವರ್ತಿಗಳಿಗೆ ಶೇಕಡಾ 100ರಷ್ಟು ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡಲಾಗುವುದು ಎಂದರು.
2018ರಲ್ಲಿ ಜಾಗತಿಕ ವಿದೇಶಿ ನೇರ ಹೂಡಿಕೆ ಹರಿವು ಶೇಕಡಾ 13ರಷ್ಟು ಕಡಿಮೆಯಾಗಿ 1.3 ಟ್ರಿಲಿಯನ್ ಡಾಲರ್ ಗೆ ತಲುಪಿತ್ತು. ಅದಕ್ಕಿಂತ ಹಿಂದಿನ ವರ್ಷ ವಿದೇಶಿ ನೇರ ಹೂಡಿಕೆ ಹರಿವು ಮೊತ್ತ 1.5 ಟ್ರಿಲಿಯನ್ ನಷ್ಟಾಗಿತ್ತು. ಆದರೂ ಭಾರತದ ಎಫ್ ಡಿಐ 2018-19ರಲ್ಲಿ ಬಲಿಷ್ಠವಾಗಿ ಉಳಿದಿದ್ದು 54.2 ಬಿಲಿಯನ್ ಡಾಲರ್ ನಲ್ಲಿ ಉಳಿದುಕೊಂಡಿದೆ, ಕಳೆದ ವರ್ಷಕ್ಕಿಂತ ಶೇಕಡಾ 6ಕ್ಕಿಂತ ಹೆಚ್ಚಾಗಿದೆ ಎಂದರು.
ವಿಮಾನಯಾನ, ಮಾಧ್ಯಮ, ಆನಿಮೇಷನ್ ಎವಿಜಿಸಿ ಮತ್ತು ವಿಮಾ ವಲಯಗಳಲ್ಲಿ ಷೇರುದಾರರ ಜೊತೆ ಸಮಾಲೋಚನೆ ನಡೆಸಿ ಮತ್ತಷ್ಟು ಎಫ್ ಡಿಐ ತೆರೆಯಲು ಸರ್ಕಾರ ಸಲಹೆಗಳನ್ನು ಆಹ್ವಾನಿಸಲಿದೆ. ವಿಮಾ ಮಧ್ಯವರ್ತಿಗಳಿಗೆ ಶೇಕಡಾ 100ರಷ್ಟು ವಿದೇಶಿ ನೇರ ಹೂಡಿಕೆಗೆ ಅನುವು ಮಾಡಿಕೊಡಲಾಗುವುದು ಎಂದರು.
ಸಿಂಗಲ್ ಬ್ರಾಂಡ್ ರಿಟೈಲ್ ವಲಯದಲ್ಲಿ ಹೂಡಿಕೆದಾರರನ್ನು ಉತ್ತೇಜಿಸಲು ಎಫ್ ಡಿಐಗೆ ಸ್ಥಳೀಯ ಮೂಲ ನಿಯಮಗಳನ್ನು ಸರಳಗೊಳಿಸಲಾಗುವುದು. 
ಕೈಗಾರಿಕೋದ್ಯಮಿಗಳು, ಕಾರ್ಪೊರೇಟ್ ನಾಯಕರುಗಳು ಮತ್ತು ಕಾರ್ಪೊರೇಟ್ ಸ್ವಾಯತ್ತತೆ ಮತ್ತು ಸಾಹಸೋದ್ಯಮ ನಿಧಿಗಳನ್ನು ರಾಷ್ಟ್ರೀಯ ಹೂಡಿಕೆ ಮತ್ತು ಮೂಲಭೂತಸೌಕರ್ಯ ನಿಧಿಯಡಿ ತರಲು ವಾರ್ಷಿಕ ಜಾಗತಿಕ ಸಭೆ ಆಯೋಜಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com