ಕೇಂದ್ರ ಬಜೆಟ್ ನಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಸಿಕ್ಕ ಯೋಜನೆ ಇದು, ಫಲಾನುಭವಿಗಳಾಗಲು ಮಾಡಬೇಕಿರುವುದೇನು?

ಕೇಂದ್ರ ಬಜೆಟ್ ನಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಪ್ರಯೋಜನವಾಗುವ ಯೋಜನೆಯನ್ನು ಘೋಷಿಸಲಾಗಿದೆ. ಪ್ರಧಾನಮಂತ್ರಿ ಕರ್ಮ ಯೋಗಿ ಮಾನ್ ಧನ್ ಯೋಜನೆಯನ್ನು ಈ ಬಜೆಟ್ ನಲ್ಲಿ ಚಿಲ್ಲರೇ ವ್ಯಾಪಾರಿಗಳಿಗೂ
ನವದೆಹಲಿ: ಕೇಂದ್ರ ಬಜೆಟ್ ನಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಪ್ರಯೋಜನವಾಗುವ ಯೋಜನೆಯನ್ನು ಘೋಷಿಸಲಾಗಿದೆ. ಪ್ರಧಾನಮಂತ್ರಿ ಕರ್ಮ ಯೋಗಿ ಮಾನ್ ಧನ್ ಯೋಜನೆಯನ್ನು ಈ ಬಜೆಟ್ ನಲ್ಲಿ ಚಿಲ್ಲರೇ ವ್ಯಾಪಾರಿಗಳಿಗೂ ವಿಸ್ತರಿಸಲಾಗಿದೆ. 
ಈ ಯೋಜನೆ ವಾರ್ಷಿಕ 1.5 ಕೋಟಿಗಿಂತಲೂ ಕಡಿಮೆ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಅನ್ವಯವಾಗಲಿದ್ದು, 3 ಕೋಟಿ ವ್ಯಾಪಾರಿಗಳಿಗೆ ಈ ಯೋಜನೆಯ ಪ್ರಯೋಜನ ದೊರೆಯಲಿದೆ.  
ಈ ಯೋಜನೆಯಿಂದಾಗಿ 60 ವರ್ಷ ವಯಸ್ಸಿನ ವ್ಯಾಪಾರಿಗಳಿಗೆ ತಿಂಗಳಿಗೆ 3,000 ರೂಪಾಯಿ ಪಿಂಚಣಿ ದೊರೆಯಲಿದೆ. ಬ್ಯಾಂಕ್ ಖಾತೆಯ ವಿವರ ಹಾಗೂ 12 ಸಂಖ್ಯೆಗಳ ಆಧಾರ್ ಕಾರ್ಡ್ ನ್ನು ನೀಡುವ ಮೂಲಕ ಈ ಯೋಜನೆಯ ಫಲಾನುಭವಿಗಳಾಗಬಹುದಾಗಿದೆ.  
ಫಲಾನುಭವಿಗಳು ಹೂಡಿಕೆ ಮಾಡಿದ್ದ ಹಣದಷ್ಟೇ ಮೊತ್ತವನ್ನು ಕೇಂದ್ರ ಸರ್ಕಾರ ಸಹ ನೀಡಲಿದ್ದು 50:50 ಅನುಪಾತದಲ್ಲಿ ಪಿಂಚಣಿ ಮೊತ್ತ ದೊರೆಯಲಿದೆ. ಮುಂದಿನ ಮೂರು ವರ್ಷಗಳಲ್ಲಿ 5 ಕೋಟಿ ಹೊಸ ವ್ಯಾಪಾರಿಗಳು ಈ ಯೋಜನೆಯ ಭಾಗವಾಗುವ ನಿರೀಕ್ಷೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com