ಬಾಗಲಕೋಟೆ: ಕೃಷ್ಣೆಯ ಮಕ್ಕಳ ಬಜೆಟ್ ನಿರೀಕ್ಷೆಗಳಿಗೆಲ್ಲಾ ಎಳ್ಳು ನೀರು!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್ ಕುರಿತಂತೆ ಕೃಷ್ಣೆಯ ಮಕ್ಕಳು ಇಟ್ಟಿದ್ದ ನಿರೀಕ್ಷೆಗಳೆಲ್ಲ ಕೃಷ್ಣಾರ‍್ಪಣಗೊಂಡಿವೆ.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬಾಗಲಕೋಟೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್ ಕುರಿತಂತೆ ಕೃಷ್ಣೆಯ ಮಕ್ಕಳು ಇಟ್ಟಿದ್ದ ನಿರೀಕ್ಷೆಗಳೆಲ್ಲ ಕೃಷ್ಣರ‍್ಪಣಗೊಂಡಿವೆ.

ಒಂದು ಲಕ್ಷ ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗಳಿಗಾಗಿ ಪ್ರತ್ಯೇಕ ಹಣವನ್ನು ಬಜೆಟ್‌ನಲ್ಲಿ ಮೀಸಲು ಇಟ್ಟಿಲ್ಲ. ಇಡೀ ರಾಜ್ಯದ ನೀರಾವರಿ ಯೋಜನೆಗಳಿಗಾಗಿ ೨೧ ೩೦೮ ಕೋಟಿ ರೂ.ಗಳನ್ನು ಇಟ್ಟಿದ್ದಾರೆ. ಯುಕೆಪಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡುವುದಾಗಿ ಸಿಎಂ ಬಿಎಸ್‌ವೈ, ಡಿಸಿಎಂ ಗೋವಿಂದ ಕಾರಜೋಳ ಸೇರಿದಂತೆ ಮುಖಂಡರೆಲ್ಲ ಹೇಳುತ್ತಲೇ ಬಂದರಾದರೂ ಬಜೆಟ್‌ನಲ್ಲಿ ಆ ಬಗ್ಗೆ ಪ್ರಸ್ತಾಪವೇ ಇಲ್ಲ.

ಬಜೆಟ್ ಪರ‍್ವದಲ್ಲೇ ಡಿಸಿಎಂ ಕಾರಜೋಳ ಅವರು ಯುಕೆಪಿ ವ್ಯಾಪ್ತಿಯ ಜನಪ್ರತಿನಿಧಿಗಳು ಅಧಿಕಾರಿಗಳ ಸಭೆ ನಡೆಸಿ ಈ ಬಾರಿಯ ಬಜೆಟ್‌ನಲ್ಲಿ ರ‍್ಕಾರ ಕನಿಷ್ಠ ೨೦ ಸಾವಿರ ಕೋಟಿ ರೂ.ಗಳನ್ನು ಮೀಸಲಿಡಬೇಕು. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದಿಂದಾಗಿ ಮುಳುಗಡೆ ಆಗುವ ಗ್ರಾಮಗಳ ಸ್ಥಳಾಂತರ, ಮುಳುಗಡೆಗೊಳ್ಳಲಿರುವ ಜಮೀನುಗಳ ಸ್ವಾದೀನಕ್ಕಾಗಿ ಆದ್ಯತೆ ನೀಡುವಂತೆ ಮನವಿ ಮಾಡಿದ್ದರು. ಡಿಸಿಎಂ ಅವರು ೨೦ ಸಾವಿರ ಕೋಟಿ ರೂ.ಗಳ ಮನವಿಗೆ ಕ್ಯಾರೇ ಎಂದಿಲ್ಲ. ಯುಕೆಪಿ ಯೋಜನೆ ಕಾಮಗಾರಿಗಳಿಗೆ ೨ ಸಾವಿರ ಕೋಟಿಯನ್ನೂ ಪ್ರತ್ಯೇಕ ಮೀಸಲಿಟ್ಟಿಲ್ಲ. ೧ ಲಕ್ಷ ಎಕರೆ ಜಮೀನು ನೀರಾವರಿ ವ್ಯಾಪ್ತಿಗೆ ಒಳಪಡಿಸುವುದಾಗಿ ಭರವಸೆ ನೀಡಿದ್ದು ಬಿಟ್ಟರೆ ಯುಕೆಪಿ ಬಗ್ಗೆ ಚಕಾರವನ್ನೇ ಎತ್ತಿಲ್ಲ.

ಬಿಜೆಪಿ ಶಾಸಕ ಮುರುಗೇಶ ನಿರಾಣಿ ೧೫೦೦ ಕೋಟಿ ರೂ. ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಅವುಗಳ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಆಗಿಲ್ಲ. ರಾಜ್ಯದಲ್ಲಿನ ನಾನಾ ಏತ ನೀರಾವರಿ ಯೋಜನೆಗಳಿಗಾಗಿ ೫೦೦ ಕೋಟಿ ರೂ. ಮೀಸಲಿಡುವುದಾಗಿ ಭರವಸೆ ನೀಡಿದ್ದಾರೆ. ಇದರಲ್ಲಿ ಜಿಲ್ಲೆಯ ಒಂದಾದರೂ ಏತ ನೀರಾವರಿ ಯೋಜನೆ ಸರ‍್ಪಡೆ ಆಗುತ್ತದೋ ಹೇಗೆ ಎನ್ನುವುದು ಸ್ಪಷ್ಟವಾಗಬೇಕಿದೆ. ಜಿಲ್ಲೆಯಿಂದ ಬಜೆಟ್ ಪರ‍್ವ ಸಲ್ಲಿಸಲಾಗಿದ್ದ ಮನವಿಗಳಿಗೆ ಬಿಎಸ್‌ವೈ ಕವಡೆ ಕಾಸಿನ ಕಿಮ್ಮತ್ತೂ ಸಿಕ್ಕಿಲ್ಲ. ಬಾದಾಮಿ ಶಾಸಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ೫೨೦ ಕೋಟಿ ರೂ. ಅಂದಾಜು ವೆಚ್ಚದ ಕೆರೂರು ಏತ ನೀರಾವವರಿ ಯೋಜನೆ ಸೇರಿದಂತೆ ಸಾವಿರಾರು ಕೋಟಿ ರೂ.ಗಳ ನಾನಾ ಅಭಿವೃದ್ಧಿ ಕರ‍್ಯಗಳಿಗೆ ಮಂಜೂರಾತಿ ನೀಡುವಂತೆ ಮನವಿ ಮಾಡಿದ್ದರು. ಬಜೆಟ್‌ನಲ್ಲಿ ಸಿಕ್ಕದ್ದು ಕೇವಲ ೨೫ ಕೋಟಿ ರೂ. ಅದು ಪ್ರವಾಸೋದ್ಯಮ ಅಭಿವೃದ್ದಾಗಿ. ೨೫ ಕೋಟಿ ರೂ.ಗಳಲ್ಲಿ ಬಾದಾಮಿಯ ಒಂದು ರಸ್ತೆಯನ್ನೂ ಕೂಡ ಅಭಿವೃದ್ಧಿ ಪಡಿಸಲಾಗದು ಎನ್ನುವುದು ಪರಿಸ್ಥಿತಿಯ ವ್ಯಂಗ್ಯ ಎಂದು ವಿಶ್ಲೇಷಿಸಲಾಗುತ್ತಿದೆ.

ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರು ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ನಡುಗಡ್ಡೆ ಪ್ರದೇಶವಾಗಲಿರುವ ನಗರದ ಕಿಲ್ಲಾ ಪ್ರದೇಶ ಸ್ಥಳಾಂತರಿಸಬೇಕು. ಬಾಗಲಕೋಟೆ ನಗರಸಭೆಯನ್ನು ಮಹಾನಗಪಾಲಿಕೆಯಾಗಿ ಮೇಲ್ರ‍್ಜೆಗೆ ಏರಿಸಬೇಕು ಎನ್ನುವುದು ಸೇರಿದಂತೆ ಹತ್ತಾರು ವಿಷಯಗಳ ಮನವಿ ಸಲ್ಲಿಸಿದ್ದರು. ಅದರಲ್ಲೂ ಒಂದನ್ನೂ ಪರಿಗಣಿಸಲಾಗಿಲ್ಲ. 

ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ರ‍್ಕಾರಿ ಮೇಡಿಕಲ್ ಕಾಲೇಜ್ ಆರಂಭಿಸುವಂತೆ ನಾನಾ ಸಂಘಟನೆಗಳು ಪ್ರತಿಭಟನೆ ನಡೆಸಿ ಡಿಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದ್ದರು. ಆ ಬಗೆಗೂ ಸಿಎಂ ಚಕಾರವೆತ್ತಿಲ್ಲ. ಬಾದಾಮಿ ಬಳಿಯ ಖ್ಯಾಡ್‌ನಲ್ಲಿ ಲಲಿತಾ ಕಲಾ ವಿವಿ ಸ್ಥಾಪನೆ ಪ್ರಸ್ತಾವೂ ಆಗಿಲ್ಲ. ಬಿಜೆಪಿ ಪಾಲಿನ ಭದ್ರಕೋಟೆಯೆಂದೇ ರಾಜಕಾರಣದಲ್ಲಿ ಬಣ್ಣಿಸಲಾಗುವ ಬಾಗಲಕೋಟೆಗೆ ಏನೊಂದು ವಿಶೇಷ ಕೊಡುಗೆಯನ್ನು ಬಿಎಸ್ವೆ ಬಜೆಟ್‌ನಲ್ಲಿ ಘೋಷಣೆ ಮಾಡಿಲ್ಲ. ಆಳುವ ಪಕ್ಷದ ಜನಪ್ರತಿನಿಧಿಗಳೇ ಇಟ್ಟಿದ್ದ ನಿರೀಕ್ಷೆಗೆ ಕೊಡಲಿ ಪೆಟ್ಟು ಕೊಟ್ಟಿದ್ದಾರೆ. ಇನ್ನೂ ಜನಸಾಮಾನ್ಯರ ಭರವಸೆ ನಿರೀಕ್ಷೆಗಳಿಗೆ ಎಲ್ಲಿಯ ಬೆಲೆ ಎನ್ನುವಂತಾಗಿದೆ. 

ಕಳೆದ ವರ್ಷ ಆಗಸ್ಟ್ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಉಂಟಾದ ನೆರೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಮುಖ್ಯಮಂತ್ರಿಗಳು ಈಗಾಗಲೇ ನೀಡಿರುವ ನೆರವಿನ ಬಗ್ಗೆ ಹೇಳಿಕೊಳ್ಳುವ ಜತೆಗೆ ರ‍್ಕಾರಿ ಕಟ್ಟಡಗಳ ದುರಸ್ತಿ, ಹೊಸ ಅಂಗನವಾಡಿ ಕಟ್ಟಡಗಳ ಕುರಿತು ಒಂದಿಷ್ಟು ಭರವಸೆ ನೀಡಿದ್ದಾರೆ.  ಭಾಗಶಃ ಹಾಗೂ ಪರ‍್ಣ ಪ್ರಮಾಣದಲ್ಲಿ ಬಿದ್ದ ಮನೆಗಳಿಗೆ ಮೊದಲ ಕಂತಾಗಿ ೧ ಲಕ್ಷ ರೂ. ನೀಡಿದ್ದನ್ನು ಬಿಟ್ಟರೆ ಉಳಿದ ನಾಲ್ಕು ಲಕ್ಷ ರೂ. ಬಿಡುಗಡೆ ಆಗಿಲ್ಲ. ಉಳಿದ ೪ ಲಕ್ಷ ಯಾವಾಗ ಬರುತ್ತದೋ ಎಂದು ಛಾತಕ ಪಕ್ಷಿಯಂತೆ ನೆರೆ ಸಂತ್ರಸ್ತರು ಕಾಯುತ್ತಿದ್ದಾರೆ. ನೆರೆ ಹಾಗೂ ಸತತ ಮಳೆಗೆ ಬಿದ್ದ ಮನೆಗಳ ಎಷ್ಟು ?, ಯಾವ ಪ್ರಮಾಣದಲ್ಲಿ ಬಿದ್ದಿವೆ ಎನ್ನುವ ಕುರಿತು ಅಧಿಕಾರಿಗಳು ಕೆಲ ಕಡೆ ಮೂರು ಬಾರಿ ರ‍್ವೆ ಮಾಡಿದ್ದರೂ ಮನೆಗಳ ರ‍್ವೆ ಕರ‍್ಯ ಸರಿಯಾಗಿಲ್ಲ. ಆಡಳಿತ ಪಕ್ಷದ ಕರ‍್ಯರ‍್ತರಿಗೆ ಅದ್ಯತೆ ನೀಡಿ ಇನ್ನಿತರರನ್ನು ಕಡೆಗಣಿಸಲಾಗಿದೆ ಎನ್ನುವ ದೂರು ಈಗಲೂ ಕೇಳಿಸುತ್ತಲೇ ಇದೆ. ಹಾಗಾಗಿ ರ‍್ಹ ಫಲಾನುಭವಿಗಳಿಗೆಲ್ಲ ಪರಿಹಾರ ಮರಿಚಿಕೆ ಎನ್ನುವಂತಾಗಿದೆ.
 
ಜಿಲ್ಲೆಯ ಪ್ರವಾಸೋದ್ಯಮಕ್ಕೆ ಒತ್ತು ಕೊಡುವಂತೆ ಕೇಳಿಕೊಳ್ಳಲಾಗಿತ್ತಾದರೂ ಇಡೀ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ೫೦೦ ಕೋಟಿ ಮೀಸಲು ಇಡಲಾಗಿದೆ ಎಂದು ಸಿಎಂ ಘೋಷಿಸಿದ್ದಾರೆ. ಇದರಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಿಕ್ಕಷ್ಟು ಸೀರುಂಡೆ ಎನ್ನುವ ಸ್ಥಿತಿ ನರ‍್ಮಾಣವಾಗಿದೆ.  ಪ್ರವಾಸಿ ತಾಣಗಳಲ್ಲಿನ ಮನೆಗಳ ಸ್ಥಳಾಂತರ ಬೇಡಿಕೆ ಕೂಡಾ ಈಡೇರಿಲ್ಲ. ಐಹೊಳೆ ಸ್ಥಳಾಂತರ ಕೂಗು ಈ ಬಾರಿಯೂ ಅರಣ್ಯರೋಧನವಾಗಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com