ಮಾತು ತಪ್ಪಿದ ಸಿಎಂ: ಹುಸಿಯಾದ ರೈತರ ನಿರೀಕ್ಷೆ; ಬೆಳೆ ಸಾಲ ಮನ್ನಾ ಮಾಡದ ಸರ್ಕಾರ

ಇಂದಿನ ಬಜೆಟ್​ ಮೇಲಿನ ಭಾಷಣದಲ್ಲಿ ಸಿಎಂ ಯಡಿಯೂರಪ್ಪ ಎಲ್ಲಿಯೂ ಸಹ ಸಾಲಮನ್ನಾ ಕುರಿತು ತುಟಿ ಬಿಚ್ಚದೆ ಇರುವುದು ನೆರೆ ಹಾಗೂ ಬರದಲ್ಲಿ ಸಿಲುಕಿ ನಲುಗುತ್ತಿರುವ ರೈತರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಬಹು ನಿರೀಕ್ಷಿತ ಬಜೆಟ್ ಪತ್ರವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಮಂಡಿಸಿದ್ದಾರೆ. 

ಇಂದಿನ ಬಜೆಟ್​ ಮೇಲಿನ ಭಾಷಣದಲ್ಲಿ ಸಿಎಂ ಯಡಿಯೂರಪ್ಪ ಎಲ್ಲಿಯೂ ಸಹ ಸಾಲಮನ್ನಾ ಕುರಿತು ತುಟಿ ಬಿಚ್ಚದೆ ಇರುವುದು ನೆರೆ ಹಾಗೂ ಬರದಲ್ಲಿ ಸಿಲುಕಿ ನಲುಗುತ್ತಿರುವ ರೈತರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. 

ಯಡಿಯೂರಪ್ಪ ರೈತರಿಗೆ ಈ  ಹಿಂದೆ ಇದ್ದ ಯೋಜನೆಗಳನ್ನೇ ಪುನರಾವರ್ತಿಸಿದರೇ ವಿನಃ ಸಾಲಮನ್ನಾ ಕುರಿತು ತುಟಿ ಬಿಚ್ಚಲಿಲ್ಲ. ಈ ಮೂಲಕ ರೈತರ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. 

ಯಾವುದೇ ಕಾರಣಕ್ಕೂ ರೈತರ ಬೆಳೆ ಸಾಲ ಮನ್ನಾ ಯೋಜನೆಗೆ ಇತಿಶ್ರೀ ಹಾಡುವುದಿಲ್ಲ. ಎಲ್ಲಾ ರೈತರ ಅಭಿವೃದ್ಧಿ ನಮ್ಮ ಸರ್ಕಾರದ ಹೊಣೆ ಎಂದಿದ್ದರು. ಅಲ್ಲದೆ, ಈ ಹಿಂದೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹಾಗೂ ನಾಲ್ಕು ದಿನದ ಸಿಎಂ ಆಗಿದ್ದ ವೇಳೆಯಲ್ಲಿಯೂ ಸಹ ರೈತರ ಸಂಪೂರ್ಣ ಸಾಲಮನ್ನಾಕ್ಕೆ ತಾವು ಬದ್ಧರಾಗಿರುವುದಾಗಿ ತಿಳಿಸಿದ್ದರು.

ಆದರೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ಸಾಲ ಮನ್ನಾ ಯೋಜನೆ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ರೈತರ ಸಾಲಮನ್ನಾ ಯೋಜನೆಗೆ ತಿಲಾಂಜಲಿ ಇಡುವ ಸಾಧ್ಯತೆಯಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com