ಯಾವುದೇ ಭಾಗ್ಯಗಳಿಲ್ಲದ ಜನಪರ ಕಲ್ಯಾಣ ಯೋಜನೆಗಳ ಬಜೆಟ್

ಮುಖ್ಯಮಂತ್ರಿ ಯಡಿಯೂರಪ್ಪ  ತಮ್ಮ ಬಜೆಟ್ ನಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರ. ಹಿಂದಿನ ಸರ್ಕಾರ ರೂಪಿಸಿದ್ದ ಭಾಗ್ಯಲಕ್ಷ್ಮಿ ಹಗೂ ಬೈಸಿಕಲ್ ಯೋಜನೆಗಳನ್ನು ಮುಂದುವರಿಸಿಸಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ  ತಮ್ಮ ಬಜೆಟ್ ನಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರ. ಹಿಂದಿನ ಸರ್ಕಾರ ರೂಪಿಸಿದ್ದ ಭಾಗ್ಯಲಕ್ಷ್ಮಿ ಹಗೂ ಬೈಸಿಕಲ್ ಯೋಜನೆಗಳನ್ನು ಮುಂದುವರಿಸಿಸಿದ್ದಾರೆ.

ಎಸ್‌ಸಿ / ಎಸ್‌ಟಿಗಳ ಕಲ್ಯಾಣಕ್ಕಾಗಿ ನಿಗದಿಪಡಿಸಿದ 26,930 ಕೋಟಿ ರೂ.ಗಳ ಅನುದಾನವು ನಿಯಮಗಳ ಪ್ರಕಾರ ನೀಡಬೇಕಾದ ಮೊತ್ತಕ್ಕಿಂತ ಹೆಚ್ಚಿನದಾಗಿದೆ. ಇದು ಒಟ್ಟು ಅನುದಾನದಲ್ಲಿ 24.1 ಶೇಕಡಾವನ್ನು 26,131 ಕೋಟಿಗಳಂತೆ ಕಡ್ಡಾಯಗೊಳಿಸುತ್ತದೆ.

ಮುಖ್ಯಮಂತ್ರಿಗಳ,  ಕಲ್ಯಾಣ ಮತ್ತು ಆಂತರಿಕ ಅಭಿೃದ್ಧಿಗೆ 72,093 ಕೋಟಿ ರು ಹಣ ಮೀಸಲಿಟ್ಟಿದ್ದಾರೆ.

ಮಹಿಳೆಯರು, ಮಕ್ಕಳು, ಕಾರ್ಮಿಕ ವರ್ಗ, ವಿಶೇಷವಾಗಿ ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರನ್ನು ಈ ಯೋಜನೆಗಳಿಗೆ ಸೇರಿದ್ದಾರೆ.

ಬಜೆಟ್ ಹಂಚಿಕೆ ಸಾಂಪ್ರದಾಯಿಕದಿಂದ ಕ್ಲಸ್ಟರ್ ಮಾದರಿ ವಿಧಾನಕ್ಕೆ ಬದಲಾಗಿದೆ.ಆರೋಗ್ಯ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಅನೇಕವನ್ನು ಕಲ್ಯಾಣ ಹಂಚಿಕೆಯಡಿ ಸೇರಿಸಲಾಗಿದೆ. ಆದರೆ ಈ ಉಪ ವಲಯಗಳಿಗೆ ದೊಡ್ಡ ಹಂಚಿಕೆ ಮಾಡಲಾಗಿದೆಯೇ ಮತ್ತು ಹಣವು ಅವುಗಳನ್ನು ಹೇಗೆ ತಲುಪುತ್ತದೆ ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com