ಜಿಎಸ್‌ಟಿ ಮೂಲಕ ಗ್ರಾಹಕರಿಗೆ ವಾರ್ಷಿಕ 1 ಲಕ್ಷ ಕೋಟಿ ಲಾಭ ದೊರೆತಿದೆ: ನಿರ್ಮಲಾ ಸೀತಾರಾಮನ್

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯನ್ನು ಉಲ್ಲೇಖಿಸಿ ಅದರ ಬಗೆಗೆ ಶ್ಲಾಘನೆ ವ್ಯಕ್ತಪಡಿಸಿದ ವಿತ್ತ ಸಚಿವೆ  ನಿರ್ಮಲಾ ಸೀತಾರಾಮನ್ , ಹೊಸ ತೆರಿಗೆ ಕ್ರಮವು ಸಾರಿಗೆ ಮತ್ತು ಜಾರಿ ಕ್ಷೇತ್ರದಲ್ಲಿ ದಕ್ಷತೆಯ ಲಾಭವನ್ನು ಗಳಿಸಿದೆ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯನ್ನು ಉಲ್ಲೇಖಿಸಿ ಅದರ ಬಗೆಗೆ ಶ್ಲಾಘನೆ ವ್ಯಕ್ತಪಡಿಸಿದ ವಿತ್ತ ಸಚಿವೆ  ನಿರ್ಮಲಾ ಸೀತಾರಾಮನ್ , ಹೊಸ ತೆರಿಗೆ ಕ್ರಮವು ಸಾರಿಗೆ ಮತ್ತು ಜಾರಿ ಕ್ಷೇತ್ರದಲ್ಲಿ ದಕ್ಷತೆಯ ಲಾಭವನ್ನು ಗಳಿಸಿದೆ ಎಂದು ಹೇಳಿದ್ದಾರೆ."ಜಿಎಸ್ಟಿ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ದಕ್ಷತೆಯ ಲಾಭವನ್ನು ಗಳಿಸಿದೆ. ಇನ್ಸ್ ಪೆಕ್ಟರ್ ರಾಜ್ ಕಣ್ಮರೆಯಾಗಿದೆ. ಇದು ಎಂಎಸ್ಎಂಇಗೆ  ಉಪಯೋಗವಾಗಿ ಕಾಣುತ್ತಿದೆ.ಜಿಎಸ್ಟಿ ಯಿಂದ ಗ್ರಾಹಕರು ವಾರ್ಷಿಕ 1 ಲಕ್ಷ ಕೋಟಿ ರೂ. ಲಾಭ ಪಡೆದಿದ್ದಾರೆ" ಎಂದು ಸೀತಾರಾಮನ್ ಹೇಳಿದ್ದಾರೆ.

ಶನಿವಾರ ಸಚಿವರು ಕೇಂದ್ರ ಬಜೆಟ್ 2020-21ರ ಮಂಡನೆ ಮಾಡಿದ್ದಾರೆ.

2020-21ರ ಬಜೆಟ್ ಜನರ ಆದಾಯವನ್ನು ಹೆಚ್ಚಿಸುವುದು ಮತ್ತು ಅವರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದ ಸಚಿವೆ "ನಮ್ಮ ಜನರು ಲಾಭದಾಯಕವಾಗಿ ಉದ್ಯೋಗ ಪಡೆಯಬೇಕು. ನಮ್ಮ ವ್ಯವಹಾರಗಳು ಆರೋಗ್ಯಕರವಾಗಿರಬೇಕು, ಎಲ್ಲಾ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಎಸ್‌ಸಿ ಮತ್ತು ಎಸ್‌ಟಿ ಜನರಿಗೆ ಈ ಬಜೆಟ್ ಅವರ ಆಕಾಂಕ್ಷೆಗಳನ್ನು ಈಡೇರಿಸುವ ಉದ್ದೇಶವನ್ನು ಹೊಂದಿದೆ. ಹೊಸ ಚೈತನ್ಯದೊಂದಿಗೆ, ಪ್ರಧಾನ ಮಂತ್ರಿಯ ನಾಯಕತ್ವದಲ್ಲಿ, ಭಾರತದ ಜನನಮ್ಮ ಆರ್ಥಿಕ ನೀತಿಯಲ್ಲಿ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ" ಎಂದು ಅವರು ಹೇಳಿದರು

ಈ ವರ್ಷದ ಜನವರಿ ತಿಂಗಳಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವನ್ನು 1,10,828 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ, ಅದರಲ್ಲಿ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) 20,944 ಕೋಟಿ ರೂ., ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) 28,224 ಕೋಟಿ ರೂ ಇದೆ. ಆಮದಿನ ಮೇಲೆ ಸಂಗ್ರಹಿಸಿದ ಇಂಟಿಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ) )  23,481 ಕೋಟಿ ರೂ. ಸೇರಿದಂತೆ  53,013 ಕೋಟಿ ರೂ., ಮತ್ತು ಸೆಸ್ 8,637 ಕೋಟಿ ರೂ. ಸಂಗ್ರಹವಾಗಿದೆ.

ಕೇಂದ್ರ ಹಣಕಾಸು ಸಚಿವಾಲಯದ ಪ್ರಕಾರ, ಹೊಸ ತೆರಿಗೆ ಆಡಳಿತದ ಅನುಷ್ಠಾನದ ನಂತರ ಜನವರಿ 2020 ರ ಜಿಎಸ್‌ಟಿ ಆದಾಯ ಸಂಗ್ರಹವು 2020 ರ ಜನವರಿ ವರೆಗೆ ಸಂಗ್ರಹವಾಗಿರುವ ಎರಡನೇ ಅತಿ ಹೆಚ್ಚು ಮಾಸಿಕ ಸಂಗ್ರಹವಾಗಿದೆಡಿಸೆಂಬರ್ ತಿಂಗಳಿಗೆ ಸಲ್ಲಿಸಲಾದ ಒಟ್ಟು ಜಿಎಸ್‌ಟಿಆರ್ 3 ಬಿ ರಿಟರ್ನ್ಸ್ ಸಂಖ್ಯೆ 83 ಲಕ್ಷ ಎಂದು ಅವರು ಹೇಳಿದ್ದಾರೆ.ದೇಶೀಯ ವಹಿವಾಟಿನಿಂದ 2020 ರ ಜನವರಿಯಲ್ಲಿ ಜಿಎಸ್‌ಟಿ ಆದಾಯವು 2019 ರ ಜನವರಿಯಲ್ಲಿನ ಆದಾಯಕ್ಕಿಂತ ಶೇಕಡಾ 12 ರಷ್ಟು ಅದ್ಭುತ ಬೆಳವಣಿಗೆಯನ್ನು ತೋರಿಸಿದೆ. ಸರಕುಗಳ ಆಮದುಗಳಿಂದ ಸಂಗ್ರಹಿಸಿದ ಐಜಿಎಸ್‌ಟಿಯನ್ನು ಗಣನೆಗೆ ತೆಗೆದುಕೊಂಡು,  ನೋಡಿದರೆ ಕಳೆದ ವರ್ಷಕ್ಕಿಂತ  ಜನವರಿ 2020 ರ ಅವಧಿಯಲ್ಲಿ ಒಟ್ಟು ಆದಾಯವು ಶೇಕಡಾ 8 ರಷ್ಟು ಹೆಚ್ಚಾಗಿದೆ ಜಿಎಸ್‌ಟಿ ಜಾರಿಗೆ ಬಂದ ನಂತರದ ಎರಡನೇ ಬಾರಿಗೆ ಮಾಸಿಕ ಆದಾಯವು 1.1 ಲಕ್ಷ ಕೋಟಿ ರೂ.ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com