ಬಜೆಟ್ ಮಂಡಿಸುತ್ತಿದ್ದ ನಿರ್ಮಲ ಸೀತಾರಮನ್ ಗೆ ಅನಾರೋಗ್ಯ: ಮಧ್ಯದಲ್ಲೇ ಮುಗಿದ ಭಾಷಣ 

2020 ನೇ ಸಾಲಿನ ಬಜೆಟ್ ಮಂಡನೆ ಮಾಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅನಾರೋಗ್ಯದ ಕಾರಣ ಬಜೆಟ್ ಭಾಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದಾರೆ. 
ಬಜೆಟ್ ಮಂಡಿಸುತ್ತಿದ್ದ ನಿರ್ಮಲ ಸೀತಾರಮನ್ ಗೆ ಅನಾರೋಗ್ಯ: ಭಾಷಣ ಅರ್ಧಕ್ಕೇ ಮೊಟಕು
ಬಜೆಟ್ ಮಂಡಿಸುತ್ತಿದ್ದ ನಿರ್ಮಲ ಸೀತಾರಮನ್ ಗೆ ಅನಾರೋಗ್ಯ: ಭಾಷಣ ಅರ್ಧಕ್ಕೇ ಮೊಟಕು

ನವದೆಹಲಿ: 2020 ನೇ ಸಾಲಿನ ಬಜೆಟ್ ಮಂಡನೆ ಮಾಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅನಾರೋಗ್ಯದ ಕಾರಣ ಬಜೆಟ್ ಭಾಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದಾರೆ. 

ದಾಖಲೆಯ 160 ನಿಮಿಷಗಳ ಕಾಲ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದು, ಭಾಷಣ ಮೊಟಕುಗೊಳಿಸುವ ವೇಳೆಗೆ ಬಜೆಟ್ ಪ್ರತಿಯ ಕೊನೆಯ ಎರಡು ಪುಟಗಳಷ್ಟೇ ಬಾಕಿ ಉಳಿದಿತ್ತು. ಆದರೆ ಆಯಾಸಗೊಂಡಂತೆ ಕಂಡುಬಂದ ನಿರ್ಮಲಾ ಸೀತಾರಾಮನ್, ಉಳಿದಿರುವ ಬಜೆಟ್ ನ ಭಾಗವನ್ನು ಓದಿರುವುದಾಗಿ ಪರಿಗಣಿಸಬೇಕೆಂದು ಸಭಾಧ್ಯಕ್ಷರಲ್ಲಿ ವಿನಂತಿಸಿ ಬಜೆಟ್ ಭಾಷಣೆಗೆ ವಿರಾಮ ಘೋಷಿಸಿದರು. 

ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡನೆ ಮಾಡಿರುವ ಬಜೆಟ್ ಭಾಷಣ ಭಾರತದ ಇತಿಹಾಸದಲ್ಲೇ ಸುದೀರ್ಘವಾದದ್ದು ಎಂಬ ದಾಖಲೆ ನಿರ್ಮಿಸಿದೆ. 

2019 ರ ಜುಲೈ ನಲ್ಲಿ 2 ಗಂಟೆ 17 ನಿಮಿಷಗಳ ದಾಖಲೆಯನ್ನು ನಿರ್ಮಿಸಿದ್ದರು. ಈಗ ಈ ಬಜೆಟ್ ನಲ್ಲಿ ತಮ್ಮ ಹಿಂದಿನ ದಾಖಲೆಯನ್ನು ನಿರ್ಮಲಾ ಸೀತಾರಾಮನ್ ಮುರಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com