ಬಜೆಟ್ 2020: ಯಾವುದು ದುಬಾರಿ... ಯಾವುದು ಅಗ್ಗ...?!: ಇಲ್ಲಿದೆ ಮಾಹಿತಿ 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶವಿವಾರ ಸಂಸತ್ತನಲ್ಲಿ ಮಂಡಿಸಿದ 2020-2021ನೇ ಸಾಲಿನ ಬಜೆಟ್ ನಲ್ಲಿ ಕಸ್ಟಮ್ಸ್ ಸುಂಕ ಹೆಚ್ಚಳದಿಂದಾಗಿ ಪೀಠೋಪಕರಣ, ಪಾದರಕ್ಷೆ ಬೆಲೆಗಳು ಏರಿಕೆಯಾಗಲಿವೆ.  
ಬಜೆಟ್ 2020: ಯಾವುದು ದುಬಾರಿ... ಯಾವುದು ಅಗ್ಗ...?!: ಇಲ್ಲಿದೆ ಮಾಹಿತಿ
ಬಜೆಟ್ 2020: ಯಾವುದು ದುಬಾರಿ... ಯಾವುದು ಅಗ್ಗ...?!: ಇಲ್ಲಿದೆ ಮಾಹಿತಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶವಿವಾರ ಸಂಸತ್ತನಲ್ಲಿ ಮಂಡಿಸಿದ 2020-2021ನೇ ಸಾಲಿನ ಬಜೆಟ್ ನಲ್ಲಿ ಕಸ್ಟಮ್ಸ್ ಸುಂಕ ಹೆಚ್ಚಳದಿಂದಾಗಿ ಪೀಠೋಪಕರಣ, ಪಾದರಕ್ಷೆ ಬೆಲೆಗಳು ಏರಿಕೆಯಾಗಲಿವೆ.  

ಅದೇರೀತಿ ಅಬಕಾರಿ ಸುಂಕದ ಹೆಚ್ಚಳದೊಂದಿಗೆ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಬೆಲೆಗಳು ಏರಿಕೆಯಾಗಲಿವೆ. ವೈದ್ಯಕೀಯ ಸಾಧನಗಳ ಮೇಲೆ ಶೇ.5 ರಷ್ಟು ಹೆಲ್ತ್ ಸೆಸ್, ಆಟೋ ಮೊಬೈಲ್ ಬಿಡಿಭಾಗಗಳ ಮೇಲಿನ ಕಸ್ಟಮ್ಸ್ ಸುಂಕ ಹೆಚ್ಚಳಗೊಂಡಿದೆ.  

ವಿದೇಶಗಳಿಂದ ಆಮದು ಮಾಡಿಕೊಂಡ ನ್ಯೂಸ್ ಪ್ರಿಂಟ್ ಮೇಲಿನ ತೆರಿಗೆಯನ್ನು ತಗ್ಗಿಸಲಾಗಿದೆ. ಅದೇ ರೀತಿ ಎಲೆಕ್ಟ್ರಿಕ್ ವಾಹನಗಳು ಮತ್ತು ಮೊಬೈಲ್ ಫೋನ್‌ಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಪ್ಲಾಸ್ಟಿಕ್ ಆಧಾರಿತ ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ಸ್ ತೆರಿಗೆ ಇಳಿಸಲಾಗಿದೆ.

ದುಬಾರಿಯಾಗಲಿರುವ ಪದಾರ್ಥಗಳು 
ಪೀಠೋಪಕರಣಗಳು
ಸ್ಯಾಂಡಲ್
ಸಿಗರೇಟ್
ತಂಬಾಕು ಉತ್ಪನ್ನಗಳು, ವೈದ್ಯಕೀಯ ಉಪಕರಣಗಳು
ಅಡುಗೆಮನೆಯಲ್ಲಿ ಬಳಸುವ ವಸ್ತುಗಳು
ಕ್ಲೇ ಐರನ್
ಸ್ಟೀಲ್
ಕಾಪರ್
ಸೋಯಾ ಫೈಬರ್, ಸೋಯಾ ಪ್ರೋಟೀನ್
ವಾಣಿಜ್ಯ ವಾಹನಗಳಿಗೆ ಬಿಡಿಭಾಗಗಳು
ವಾಲ್ ಪ್ಯಾನ್ ಗಳು 

ಅಗ್ಗವಾಗಲಿರುವ  ಪದಾರ್ಥಗಳು 
ವಿದೇಶದಿಂದ ಆಮದು ಮಾಡಿಕೊಂಡ  ನ್ಯೂಸ್  ಪ್ರಿಂಟ್  
ಎಲೆಕ್ಟ್ರಿಕ್ ವಾಹನಗಳು
ಮೊಬೈಲ್ ಫೋನ್‌ಗಳಿಗಾಗಿ ಬಿಡಿಭಾಗಗಳು
ಪ್ಲಾಸ್ಟಿಕ್ ಆಧಾರಿತ ಕಚ್ಚಾ ಸರಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com