ಬಜೆಟ್ ಬರೆ: ಮ್ಯೂಚುವಲ್ ಫಂಡ್ ಆದಾಯದ ಮೇಲೆ ಶೇ.10 ಟಿಡಿಎಸ್

ಮ್ಯೂಚುವಲ್ ಫಂಡ್ ನಂತರ ತೆರಿಗೆ ರಹಿತ ಹೂಡಿಕೆ ಯೋಜನೆಗಳಲ್ಲಿ ತಮ್ಮ ಉಳಿತಾಯದ ಹಣವನ್ನು ಹೂಡಿ ನೆಮ್ಮದಿಯಾಗಿರಬಹುದು ಎಂಬ ಗ್ರಾಹಕರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದ್ದು, ಮ್ಯೂಚುವಲ್ ಫಂಡ್ ಗಳ ಮೇಲೂ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್) ವಿಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮ್ಯೂಚುವಲ್ ಫಂಡ್ ನಂತರ ತೆರಿಗೆ ರಹಿತ ಹೂಡಿಕೆ ಯೋಜನೆಗಳಲ್ಲಿ ತಮ್ಮ ಉಳಿತಾಯದ ಹಣವನ್ನು ಹೂಡಿ ನೆಮ್ಮದಿಯಾಗಿರಬಹುದು ಎಂಬ ಗ್ರಾಹಕರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದ್ದು, ಮ್ಯೂಚುವಲ್ ಫಂಡ್ ಗಳ ಮೇಲೂ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್) ವಿಧಿಸಿದೆ.

ಹೌದು..ಉಳಿತಾಯ ಯೋಜನೆಗಳಲ್ಲಿ ಪ್ರಮುಖವಾದ ಮ್ಯೂಚುವಲ್ ಫಂಡ್ ನಂತರ ಜನಪ್ರಿಯ ಯೋಜನೆಗಳ ಮೇಲೆ ಕೇಂದ್ರ ಸರ್ಕಾರ ತೆರಿಗೆ ವಿಧಿಸಿದ್ದು, ಶೇ.10ರಷ್ಚು ಟಿಡಿಎಸ್ ವಿಧಿಸಿದೆ. ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹಣ ತೊಡಗಿಸಿ ಅದನ್ನು ಹಿಂಪಡೆಯುವಾಗ ಈ ಶೇ.10ರಷ್ಟು ಟಿಡಿಎಸ್ ಅನ್ವಯವಾಗಲಿದೆ ಎಂದು ಹೇಳಲಾಗಿದೆ. ಬ್ಯಾಂಕ್ ಗಳಲ್ಲಿನ ಎಫ್ ಡಿ ಖಾತೆಗಳಲ್ಲಿರುವಂತೆಯೇ ಮ್ಯೂಚುವಲ್ ಫಂಡ್ ಯೋಜನೆ ಮೇಲೂ ಶೇ.10ರಷ್ಟು ತೆರಿಗೆ ವಿಧಿಸಿರುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚುತ್ತಿದ್ದು, ದೀರ್ಘಾವಧಿ ಹೂಡಿಕೆಗೆ ಜನರು ಮುಂದಾಗುತ್ತಿದ್ದಾರೆ.  ಹೂಡಿಕೆ ವೃದ್ಧಿಯಲ್ಲಿ ವಾರ್ಷಿಕ 1 ಲಕ್ಷ ರೂ ಗೂ ಅಧಿಕ ಹಿಂಪಡೆಯುವುದಾದರೆ ಶೇ 10ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಇದರಿಂದಾಗಿ ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ ಹೂಡಿಕೆಗಳಿಂದ ಹಿಮ್ಮುಖವಾಗುವ ಭೀತಿ ಇದೆ. ತೆರಿಗೆ ಕಡಿತಕ್ಕಾಗಿಯೇ ಹತ್ತಾರು ರೀತಿಯ ಹೂಡಿಕೆಗಳು, ಇನ್ಶುರೆನ್ಸ್‌, ಮ್ಯೂಚುವಲ್‌ ಫಂಡ್‌ ಖರೀದಿಸುವವರ ಸಂಖ್ಯೆ ಹೊಸ ತೆರಿಗೆ ಪದ್ಧತಿಯಿಂದ ಕಡಿಮೆಯಾಗುವ ಸಾಧ್ಯತೆ ಇದೆ. ಯಾವುದೇ ವಿನಾಯಿತಿ ಪಡೆಯದೆ ಕಡಿಮೆ ತೆರಿಗೆ ಆಯ್ಕೆ ಮಾಡಿಕೊಳ್ಳುವುದು ಸುಲಭ ಮತ್ತು ಸರಳವಾಗಿ ತೋರುತ್ತಿದೆ. ಹೀಗಾಗಿ ಉಳಿತಾಯ ಯೋಜನೆಗಳತ್ತ ಮುಖ ಮಾಡುವುದೂ ಕಡಿಮೆಯಾಗಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಉಳಿತಾಯ ಯೋಜನೆಗಳಲ್ಲಿ ಬಡ್ಡಿ ದರ ವರ್ಷದಿಂದ ವರ್ಷಕ್ಕೆ ಕಡಿತಗೊಂಡಿರುವುದು ಸಹ ಉಳಿತಾಯದಿಂದ ದೂರ ಉಳಿಯುವಂತೆ ಮಾಡಿವೆ. 2018–19ರಲ್ಲಿ ಕುಟುಂಬದ ಉಳಿತಾಯ ಪ್ರಮಾಣ ಶೇ 21.4ಕ್ಕೆ ಇಳಿಕೆಯಾಗಿದೆ. ಉಳಿತಾಯ ಮಾಡಿದರೂ ಹೆಚ್ಚು ಬಡ್ಡಿ ಸಿಗುವುದಿಲ್ಲ, ಹೂಡಿಕೆ ಮಾಡಿದರೆ ಹೆಚ್ಚುವರಿ ತೆರಿಗೆ ಬೀಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉಳಿತಾಯ ಮತ್ತು ಹೂಡಿಕೆ ಯೋಜನೆಗಳಿಂದ ಹೂಡಿಕೆದಾರರು ವಿಮುಖರಾಗುವ ಸಾಧ್ಯತೆ ಇವೆ.

ಅನೇಕ ತೆರಿಗೆದಾರರು ಜೀವ ವಿಮೆ ಯೋಜನೆಗಳನ್ನು ಪಡೆಯುವುದೇ ತೆರಿಗೆ ಕಾರಣಗಳಿಂದಾಗಿ. ಈ ಬಜೆಟ್‌ ಘೋಷಣೆಯು ವಿಮಾ ಕಂಪನಿಗಳ ಮೇಲೆ ಪರಿಣಾಮ ಬೀರಬಹುದಾಗಿದೆ. ಷೇರುಪೇಟೆ ಆಧಾರಿತ ಉಳಿತಾಯ ಯೋಜನೆಗಳು, ಸಾಂಪ್ರದಾಯಿಕ ಹೂಡಿಕೆಗಳಾದ ಪಿಪಿಎಫ್‌ (ಪಬ್ಲಿಕ್ ಪ್ರಾವಿಡೆಂಟ್‌ ಫಂಡ್‌) ಬೇಡಿಕೆಯೂ ಕುಸಿಯಬಹುದು ಎಂದು ಖ್ಯಾತ ತೆರಿಗೆ ತಜ್ಞೆ ಶಾಲಿನಿ ಜೈನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com