ತೆರಿಗೆ ಕಡಿತ, ಮೂಲಸೌಕರ್ಯ ವೆಚ್ಚ ಹೆಚ್ಚಿಸುವ ಬಜೆಟ್ ಬಗ್ಗೆ ಹೇಗೆ, ನಿರ್ಮಲಾ ಜಿ?

ಮುಂಬರುವ ಬಜೆಟ್ ನಲ್ಲಿ  ತೆರಿಗೆಗಳನ್ನು ಕಡಿತಗೊಳಿಸುವ , ಮೂಲಸೌಕರ್ಯ ವೆಚ್ಚವನ್ನು ಹೆಚ್ಚಿಸುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದು ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Published: 19th January 2020 08:12 AM  |   Last Updated: 30th January 2020 01:52 PM   |  A+A-


NirmalaSitharaman1

ನಿರ್ಮಲಾ ಸೀತಾರಾಮನ್

Posted By : Nagaraja AB
Source : The New Indian Express

ನವದೆಹಲಿ: ಮುಂಬರುವ ಬಜೆಟ್ ನಲ್ಲಿ  ತೆರಿಗೆಗಳನ್ನು ಕಡಿತಗೊಳಿಸುವ , ಮೂಲಸೌಕರ್ಯ ವೆಚ್ಚವನ್ನು ಹೆಚ್ಚಿಸುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದು ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. 

ಭಾರತದ ಮುಂದೆ ಕಠಿಣ ಆಯ್ಕೆಗಳಿವೆ. ಬೃಹತ್ ಆದಾಯದ ಕೊರತೆಯನ್ನು ಗಮನಿಸುತ್ತಿದ್ದಂತೆಯೇ ವೈಯಕ್ತಿಕ ಆದಾಯ ತೆರಿಗೆಯನ್ನು ಕಡಿಮೆ ಮಾಡಬೇಕೇ? ಅಥವಾ ಮೂಲಸೌಕರ್ಯ ಖರ್ಚು ಹೆಚ್ಚಿಸಿ ಮತ್ತು ಬೇಡಿಕೆ ಮತ್ತು ಹೂಡಿಕೆಯನ್ನು ಪುನರುಜ್ಜೀವನಗೊಳಿಸಲು ಹಣಕಾಸಿನ ಕೊರತೆಯ ಗುರಿಯನ್ನು ಉಲ್ಲಂಘಿಸುವುದೇ? ಅಥವಾ ಎರಡನ್ನೂ ಹಣಕಾಸು ಸಚಿವರು ಮಾಡ್ತಾರಾ? ಎಂಬ ಪ್ರಶ್ನೆ ಉದ್ಬವಿಸಿದೆ. 

ಮೇಲ್ನೋಟಕ್ಕೆ  ಆರ್ಥಿಕತೆಯು ಅಷ್ಟು  ಪ್ರಬಲವಾಗಿಲ್ಲ, ಬೇಡಿಕೆ ಮತ್ತು ಪೂರೈಕೆ ಎರಡು ರೀತಿಯಲ್ಲೂ ಸಮಸ್ಯೆ ಎದುರಿಸುತ್ತಿದೆ. 

ಇಲ್ಲಿಯವರೆಗೆ, ನಾವು ಎಲ್ಲಾ ರೀತಿಯ ಏರಿಳಿತಗಳನ್ನು  ನೋಡಿದ್ದೇವೆ - ಆರ್ಥಿಕತೆ ( ತೆರಿಗೆ ಕಡಿತಗಳು) ವಿತ್ತೀಯ ( ಮೂಲಸೌಕರ್ಯಕ್ಕಾಗಿ  102 ಲಕ್ಷ ಕೋಟಿ ಹೂಡಿಕೆ)  ಮತ್ತು ಆರ್ಥಿಕ (ಕಾರ್ಪೊರೇಟ್ ತೆರಿಗೆ ಕಡಿತ). ಪರಿಣಾಮವು ತಕ್ಷಣವೇ ಆಗುವುದಿಲ್ಲ, ಆದರೆ ನಮಗೆ ತ್ವರಿತ ಬೇಡಿಕೆ ವರ್ಧಕ ಬೇಕಾಗಿರುವುದರಿಂದ, ವೈಯಕ್ತಿಕ ಆದಾಯ ತೆರಿಗೆ ಕಡಿತವನ್ನು ಆರ್ಥಿಕತೆಯನ್ನು ಸರಿಪಡಿಸುವ ಸಾಧನವಾಗಿ ನೋಡಬೇಕಾಗುತ್ತದೆ. 

ಆದರೆ ಅದು ಬೆಳವಣಿಗೆಯನ್ನು ಹೇಗೆ ನಿಖರವಾಗಿ ಪ್ರೋತ್ಸಾಹಿಸುತ್ತದೆ ? ಕಡಿಮೆ ಮತ್ತು ಮಧ್ಯಮ-ಆದಾಯದ ಕುಟುಂಬಗಳು ಮನೆ ಮತ್ತಿತರ ಬಳಕೆಯ ಉದ್ದೇಶಕ್ಕಾಗಿ ತೆರಿಗೆ ಉಳಿತಾಯವನ್ನು ಬಳಸುತ್ತಾರೆ. 

ಕೇವಲ ಆದಾಯ ತೆರಿಗೆ ಕಡಿತ ಮಾತ್ರವಲ್ಲ, ಬಂಡವಾಳ ಲಾಭದ ತೆರಿಗೆ ಕಡಿತವೂ ಇರಬೇಕು, ಏಕೆಂದರೆ ಇದು ಹೂಡಿಕೆದಾರರೊಂದಿಗೆ ಹೆಚ್ಚಿನ ಹಣವನ್ನು ಬಿಡುತ್ತದೆ ಮತ್ತು ಈ  ಪ್ರಕ್ರಿಯೆಯಲ್ಲಿ ಬೇಡಿಕೆ ಮತ್ತು ವಸತಿ ಮತ್ತು ರಿಯಲ್ ಎಸ್ಟೇಟ್ ಬೆಲೆಗಳನ್ನು ಹೆಚ್ಚಿಸುತ್ತಾರೆ.

ಕೆಳ- ಮಧ್ಯಮ ವರ್ಗ ಒಂದು ಬಾರಿ ವೆಚ್ಚ ಮಾಡಿದರೆ, ಕಟ್ಟಡ ಕಂಪನಿಗಳಿಗೆ  ಉತ್ತೇಜಕಗಳ ಬದಲಿಗೆ ಮನೆ ಖರೀದಿಗೆ ತೆರಿಗೆ ಕಡಿತವು ಉತ್ತೇಜಿಸುತ್ತದೆ ಎಂದು ಪ್ರೊಫೆಸರ್ ಅನಿಲ್ ಕೆ ಸೂದ್ ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

Stay up to date on all the latest ಕೇಂದ್ರ ಬಜೆಟ್ news with The Kannadaprabha App. Download now
facebook twitter whatsapp