ಕೇಂದ್ರ ಬಜೆಟ್: 2014ರಿಂದ ಮೋದಿ ಸರ್ಕಾರ ತಂದ 7 ಪ್ರಮುಖ ಬದಲಾವಣೆಗಳು 

ಆರ್ಥಿಕ ಕುಸಿತ, ನಿರುದ್ಯೋಗ ಸಮಸ್ಯೆ, ದೇಶಾದ್ಯಂತ ಹಲವು ಭಾಗಗಳಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಇಂತಹ ಪರಿಸ್ಥಿತಿ ಮಧ್ಯೆ ನಾಳೆ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಯಾವ ರೀತಿಯ ಬಜೆಟ್ ಮಂಡಿಸಲಿದ್ದಾರೆ ಎಂಬ ಕುತೂಹಲ ಸಾಮಾನ್ಯ ಜನತೆಯಲ್ಲಿದೆ.
ಕೇಂದ್ರ ಬಜೆಟ್: 2014ರಿಂದ ಮೋದಿ ಸರ್ಕಾರ ತಂದ 7 ಪ್ರಮುಖ ಬದಲಾವಣೆಗಳು 

ನವದೆಹಲಿ: ಆರ್ಥಿಕ ಕುಸಿತ, ನಿರುದ್ಯೋಗ ಸಮಸ್ಯೆ, ದೇಶಾದ್ಯಂತ ಹಲವು ಭಾಗಗಳಲ್ಲಿ ಸಿಎಎ ವಿರುದ್ಧ ಪ್ರತಿಭಟನೆ, ಹಿಂಸಾಚಾರ ಇಂತಹ ಪರಿಸ್ಥಿತಿ ಮಧ್ಯೆ ನಾಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯಾವ ರೀತಿಯ ಬಜೆಟ್ ಮಂಡಿಸಲಿದ್ದಾರೆ ಎಂಬ ಕುತೂಹಲ ಸಾಮಾನ್ಯ ಜನತೆಯಲ್ಲಿದೆ.


ಕಳೆದ ವರ್ಷ ಚೊಚ್ಚಲ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ನಂತರ ಬಜೆಟ್ ಮಂಡಿಸುತ್ತಿರುವ ಎರಡನೇ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. 2017ರವರೆಗೆ ಸಾಮಾನ್ಯವಾಗಿ ವಾರ್ಷಿಕ ಕೇಂದ್ರ ಬಜೆಟ್ ನ್ನು ಫೆಬ್ರವರಿ ತಿಂಗಳ ಕೊನೆ ದಿನ ಮಂಡಿಸಲಾಗುತ್ತಿತ್ತು. ಆದರೆ ಮೂರು ವರ್ಷಗಳಿಂದೀಚೆಗೆ ಫೆಬ್ರವರಿ 1ರಂದು ಕೇಂದ್ರ ಸರ್ಕಾರ ಬಜೆಟ್ ಮಂಡಿಸುತ್ತಿದೆ. ಹಾಗಾದರೆ ಎನ್ ಡಿಎ ಸರ್ಕಾರ ಬಂದ ಮೇಲೆ ಬಜೆಟ್ ಮಂಡನೆಯಲ್ಲಿ ಆದ ಕೆಲವು ಬದಲಾವಣೆಗಳೇನು ಎಂಬುದನ್ನು ನೋಡೋಣ ಬನ್ನಿ.


ಬ್ರೀಫ್ ಕೇಸ್: ವಿತ್ತ ಖಾತೆ ಸಚಿವರು ಬಜೆಟ್ ಮಂಡನೆಗೆ ಬ್ರೀಫ್ ಕೇಸ್ ಅಥವಾ ಸೂಟ್ ಕೇಸ್ ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತಂದು ಸಂಸತ್ತಿಗೆ ಪ್ರವೇಶಿಸುವ ಮುನ್ನ ಆವರಣದಲ್ಲಿ ನಿಂತ ಸುದ್ದಿಗಾರರು, ಫೋಟೋಗ್ರಾಫರ್ ಗಳತ್ತ ಬ್ರೀಫ್ ಕೇಸ್ ತೋರಿಸಿ ನಗೆ ಬೀರುತ್ತಾರೆ. ಕಳೆದ ವರ್ಷ ಬಜೆಟ್ ಮಂಡನೆ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಶಕಗಳ ಕಾಲದ ಸಂಪ್ರದಾಯಕ್ಕೆ ಕೊನೆ ಹಾಡಿ ಬಜೆಟ್ ಪ್ರತಿಗಳನ್ನು ಕೆಂಪು ಬಟ್ಟೆ ಸುತ್ತಿದ ಫೋಲ್ಡರ್ ನಲ್ಲಿ ಲೋಕಸಭೆಗೆ ಬಂದರು. ಬ್ರಿಟಿಷರ ಗುಲಾಮದಿಂದ ಹೊರಬಂದು ನಮ್ಮ ಭಾರತೀಯ ಸಂಸ್ಕೃತಿಗೆ ನಿರ್ಮಲಾ ಸೀತಾರಾಮನ್ ಅವರು ನಾಂದಿ ಹಾಡಲು ಹೀಗೆ ಮಾಡಿದ್ದಾರೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ ಸುಬ್ರಹ್ಮಣ್ಯನ್ ಆಗ ಹೇಳಿದ್ದರು.

ಕೇಂದ್ರ ಮತ್ತು ರೈಲ್ವೆ ಬಜೆಟ್ ಗಳ ಸೇರ್ಪಡೆ: 2017ರವರೆಗೆ ಪ್ರತ್ಯೇಕ ರೈಲ್ವೆ ಬಜೆಟ್ ಗಳನ್ನು ಮಂಡಿಸಲಾಗುತ್ತಿತ್ತು. ಎನ್ ಡಿಎ ಸರ್ಕಾರ ಆ ಸಂಪ್ರದಾಯಕ್ಕೆ ಕೊನೆ ಹಾಡಿ 2017ರ ಸೆಪ್ಟೆಂಬರ್ 21ರಂದು ರೈಲ್ವೆ ಮತ್ತು ಆರ್ಥಿಕ ಬಜೆಟ್ ನ್ನು ಒಟ್ಟು ಸೇರಿಸಿದರು. 


ಆದಾಯ ತೆರಿಗೆ ಮಿತಿ: 2014ರಲ್ಲಿ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು 2 ಲಕ್ಷಗಳಿಂದ ಎರಡೂವರೆ ಲಕ್ಷಗಳಿಗೆ ಏರಿಕೆ ಮಾಡಿದ್ದರು. ಹಿರಿಯ ನಾಗರಿಕರಿಗೆ ಅದು ಎರಡೂವರೆ ಲಕ್ಷಗಳಿಂದ ಮೂರು ಲಕ್ಷಗಳಿಗೆ ಏರಿಕೆಯಾಗಿದೆ.


ಅತಿ ಶ್ರೀಮಂತರ ಮೇಲೆ ಹೆಚ್ಚುವರಿ ಶುಲ್ಕ: 2016ರ ಕೇಂದ್ರ ಬಜೆಟ್ ನಲ್ಲಿ ಮೋದಿ ಸರ್ಕಾರ ವರ್ಷಕ್ಕೆ 1 ಕೋಟಿ ರೂಪಾಯಿಗೂ ಅಧಿಕ ಆದಾಯ ಹೊಂದಿದವರಿಗೆ ಹೆಚ್ಚುವರಿ ಶುಲ್ಕವನ್ನು ಶೇಕಡಾ 12ರಿಂದ ಶೇಕಡಾ 15ಕ್ಕೆ ಹೆಚ್ಚಿಸಿತ್ತು. 2017ರಲ್ಲಿ ಎನ್ ಡಿಎ ಸರ್ಕಾರ ಶೇಕಡಾ 10ರಷ್ಟು ಹೆಚ್ಚುವರಿ ಶುಲ್ಕವನ್ನು ವರ್ಷಕ್ಕೆ 50 ಲಕ್ಷದಿಂದ 1 ಕೋಟಿಯೊಳಗೆ ಆದಾಯ ಹೊಂದಿರುವವರಿಗೆ ವಿಧಿಸಿತು. 2019ರಲ್ಲಿ 2 ಕೋಟಿಯಿಂದ 5 ಕೋಟಿಯೊಳಗೆ ವಾರ್ಷಿಕ ಆದಾಯ ಹೊಂದಿರುವವರಿಗೆ ಹೆಚ್ಚುವರಿ ಶುಲ್ಕವನ್ನು ಶೇಕಡಾ 15ರಿಂದ ಶೇಕಡಾ 25ಕ್ಕೆ ಹೆಚ್ಚಿಸಿತು.ವರ್ಷಕ್ಕೆ 5 ಕೋಟಿಗೂ ಅಧಿಕ ಆದಾಯ ಹೊಂದಿರುವವರಿಗೆ ಶೇಕಡಾ 22ರಿಂದ ಶೇಕಡಾ 37ಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ.


ತೆರಿಗೆ ದರ ಕಡಿತ: 2017ರಲ್ಲಿ ಮೋದಿ ಸರ್ಕಾರ ತೆರಿಗೆ ಕಡಿತ ಮಾಡಿದೆ. ವಾರ್ಷಿಕ ಆದಾಯ ಎರಡೂವರೆ ಲಕ್ಷದಿಂದ 5 ಲಕ್ಷದೊಳಗೆ ಇರುವವರಿಗೆ ಮೋದಿ ಸರ್ಕಾರ ಶೇಕಡಾ 10ರಿಂದ ಶೇಕಡಾ 5ಕ್ಕೆ ತೆರಿಗೆ ಕಡಿತವನ್ನು ಇಳಿಕೆ ಮಾಡಿದೆ.


ಸಂಪತ್ತು ತೆರಿಗೆ ರದ್ದು: ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಾಗದಿದ್ದರೂ ಸಹ ಸಂಪತ್ತು ಅಥವಾ ಆಸ್ತಿ ತೆರಿಗೆ ರದ್ದು ವಾರ್ಷಿಕವಾಗಿ 1 ಕೋಟಿ ರೂಪಾಯಿಗೂ ಅಧಿಕ ಆದಾಯ ಹೊಂದಿರುವವರ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಿರುವುದು ಅದಕ್ಕೆ ಬದಲಿಯಾಗಿದೆ. ಆರೋಗ್ಯ ವಿಮೆ ಪ್ರೀಮಿಯಮ್ ಮತ್ತು ಸಾರಿಗೆ ಭತ್ಯೆ ವಿನಾಯ್ತಿ ಮೇಲೆ ಇಳಿಕೆ ಮಿತಿಯನ್ನು ಅಂದು ಅರುಣ್ ಜೇಟ್ಲಿ ಹೆಚ್ಚಳ ಮಾಡಿದ್ದರು. ರಾಷ್ಟ್ರೀಯ ಪಿಂಚಣಿ ಯೋಜನೆಯಡಿ 50 ಸಾವಿರ ಹೆಚ್ಚುವರಿ ಇಳಿಕೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com