ಈ ಬಾರಿ ಎಲ್ಲರ ಹಿತ ಕಾಯುವ, ಬಡವರಿಗೆ ಅಧಿಕಾರ ನೀಡುವ ಬಜೆಟ್: ಪಿಎಂ ಮೋದಿ

"ಈ ಅಧಿವೇಶನದಲ್ಲಿ ಭಾರತಕ್ಕೆ ಬಲವಾದ ಅಡಿಪಾಯವನ್ನು ನಾವು ಹಾಕುವವರಿದ್ದೇವೆ ಎಂದು ನಾವೆಲ್ಲರೂ ಖಾತ್ರಿಪಡಿಸಿಕೊಳ್ಲಬೇಕು. ಈ ಅಧಿವೇಶನವು ಮುಖ್ಯವಾಗಿ ಆರ್ಥಿಕ ವಿಷಯಗಳ ಮೇಲೆ ಕೇಂದ್ರೀಕರಿಸಲ್ಪಡುತ್ತದೆ. ಎರಡೂ ಸದನಗಳಲ್ಲಿ ಈ ವಿಷಯಗಳ ಬಗ್ಗೆ ಉತ್ತಮ ಚರ್ಚೆಗಳು ನಡೆಯಬೇಕೆಂದು ನಾನು ಬಯಸುತ್ತೇನೆ. ಇದು ಈ ದಶಕದ ಮೊದಲ ಅಧಿವೇಶನ  ಈ ಬಜೆಟ್ ಎಲ್ಲರನ್ನೂ ಒಳಗೊಂಡಿರಲಿದೆ  ಮತ್ತು
ಪಿಎಂ ಮೋದಿ
ಪಿಎಂ ಮೋದಿ

ಈ ಅಧಿವೇಶನದಲ್ಲಿ ಭಾರತಕ್ಕೆ ಬಲವಾದ ಅಡಿಪಾಯವನ್ನು ನಾವು ಹಾಕುವವರಿದ್ದೇವೆ ಎಂದು ನಾವೆಲ್ಲರೂ ಖಾತ್ರಿಪಡಿಸಿಕೊಳ್ಲಬೇಕು. ಈ ಅಧಿವೇಶನವು ಮುಖ್ಯವಾಗಿ ಆರ್ಥಿಕ ವಿಷಯಗಳ ಮೇಲೆ ಕೇಂದ್ರೀಕರಿಸಲ್ಪಡುತ್ತದೆ. ಎರಡೂ ಸದನಗಳಲ್ಲಿ ಈ ವಿಷಯಗಳ ಬಗ್ಗೆ ಉತ್ತಮ ಚರ್ಚೆಗಳು ನಡೆಯಬೇಕೆಂದು ನಾನು ಬಯಸುತ್ತೇನೆ. ಇದು ಈ ದಶಕದ ಮೊದಲ ಅಧಿವೇಶನ  ಈ ಬಜೆಟ್ ಎಲ್ಲರನ್ನೂ ಒಳಗೊಂಡಿರಲಿದೆ  ಮತ್ತು ಬಡವರಿಗೆ ಬದುಕುವ ಅಧಿಕಾರ ನೀಡಲಿದೆ" ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಬಜೆಟ್ ಅಧಿವೇಶನ ಆರಂಭವಾಗಲಿರುವ  ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸಂಸತ್ತಿನ ಹೊರಗೆ ಮಾತನಾಡಿದ್ದಾರೆ.

ಸಂಸತ್ತಿನ ಎರಡು ಸದನಗಳ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದಾರೆ.ಬೆಳಿಗ್ಗೆ 11 ಗಂಟೆಗೆ ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ಕೋವಿಂದ್ ಭಾಷಣ ನಡೆಯಲಿದೆ.ಉಪರಾಷ್ಟ್ರಪತಿ  ವೆಂಕಯ್ಯ ನಾಯ್ಡು ಅವರು ಇಂದು ತಮ್ಮ ನಿವಾಸದಲ್ಲಿ ರಾಜ್ಯಸಭೆಯ ನಾಯಕರ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2020-21 ಅನ್ನು ಮಂಡಿಸುವ ಒಂದು ದಿನ ಮೊದಲು ಜನವರಿ 31 ರಂದು ಸರ್ಕಾರವು 2019-2020ರ ಆರ್ಥಿಕ ಸಮೀಕ್ಷೆಯನ್ನು ಬಿಡುಗಡೆ ಮಾಡುತ್ತದೆ.ಎಲ್ಲರ ಕಣ್ಣುಗಳು ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ಸಮೀಕ್ಷೆಯ ಮೇಲೆ ಇರುತ್ತವೆ, ಇದು ವರ್ಷದುದ್ದಕ್ಕೂ ಆರ್ಥಿಕ ಸಾಧನೆ ಕುರಿತು ವಿವರವಾದ ವರದಿಯಾಗಿರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com