ಕರ್ನಾಟಕ ಬಜೆಟ್: ಮದ್ಯ ಮತ್ತು ಬಿಯರ್ ಮೇಲೆ ತೆರಿಗೆ ಹೆಚ್ಚಳ ಇಲ್ಲ!

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿನ್ನೆ ಮಂಡಿಸಿದ ಬಜೆಟ್ ನಲ್ಲಿ ಮದ್ಯ ಮತ್ತು ಬಿಯರ್ ಮೇಲೆ ಯಾವುದೇ ತೆರಿಗೆಯನ್ನು ಹೆಚ್ಚಿಸಿಲ್ಲ. ಇದರಿಂದಾಗಿ ಫುಡ್ ಅಂಡ್ ಬೆವರಿಜ್ ಉದ್ಯಮಕ್ಕೆ ಬಜೆಟ್ ನಲ್ಲಿ ಸ್ವಲ್ವ ಉದಾರತೆ ತೋರಲಾಗಿದೆ.

Published: 09th March 2021 01:11 PM  |   Last Updated: 09th March 2021 02:46 PM   |  A+A-


Casual_Photos1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿನ್ನೆ ಮಂಡಿಸಿದ ಬಜೆಟ್ ನಲ್ಲಿ ಮದ್ಯ ಮತ್ತು ಬಿಯರ್ ಮೇಲೆ ಯಾವುದೇ ತೆರಿಗೆಯನ್ನು ಹೆಚ್ಚಿಸಿಲ್ಲ. ಇದರಿಂದಾಗಿ ಫುಡ್ ಅಂಡ್ ಬೆವರಿಜ್ ಉದ್ಯಮಕ್ಕೆ ಬಜೆಟ್ ನಲ್ಲಿ ಸ್ವಲ್ವ ಉದಾರತೆ ತೋರಲಾಗಿದೆ.

ಸರ್ಕಾರ ಸ್ವದೇಶಿ ಮದ್ಯ ಮತ್ತು ಬಿಯರ್ ಮೇಲೆ  ಯಾವುದೇ ಅಬಕಾರಿ ಸುಂಕವನ್ನು ಏರಿಸುವುದಿಲ್ಲ ಎಂದು ಫೆಬ್ರವರಿ ತಿಂಗಳಲ್ಲೇ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿತ್ತು. 2021-22ರಲ್ಲಿ ಸ್ವದೇಶಿ ಮದ್ಯ ಮತ್ತು ಬಿಯರ್ ಮೇಲಿನ ಅಬಕಾರಿ ಸುಂಕದಿಂದ 24,580 ಕೋಟಿ ಆದಾಯ ಸಂಗ್ರಹದ ಗುರಿ ಹೊಂದಲಾಗಿದೆ. ರಾಜ್ಯ ಅಬಕಾರಿ ಇಲಾಖೆ ಫೆಬ್ರವರಿಯವರೆಗೂ 20,900 ಕೋಟಿ ಆದಾಯವನ್ನು ಸಂಗ್ರಹಿಸಿದೆ. 

 ಅಬಕಾರಿ ಸುಂಕದ ಬಗ್ಗೆ ಮಾತನಾಡಿದ ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಮಾರ್ ಪರಸಾ, ಬಜೆಟ್ ನಲ್ಲಿ ಗ್ರಾಹಕರಿಗೆ ಹೆಚ್ಚಿನ ಹೊರೆ ಹಾಕದಿರುವುದು ಅತ್ಯುತ್ತಮವಾಗಿದೆ. ಆದರೆ, ಸ್ಲಾಬ್ ಪರಿಷ್ಕರಣೆ ಮಾಡದೆ ಮತ್ತೊಮ್ಮೆ ನಿರಾಸೆ ಮಾಡಿದೆ. ಅದನ್ನು ಐದು ವರ್ಷಗಳ ಹಿಂದೆ ಮಾಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಉತ್ಪನ್ನ ವೆಚ್ಚಗಳು ಹೆಚ್ಚುತ್ತಾ ಸಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ.


Stay up to date on all the latest ರಾಜ್ಯ ಬಜೆಟ್ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp