ಕೇಂದ್ರ ಬಜೆಟ್ 2021: 32 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಯೋಜನೆ!
ಕೇಂದ್ರ ಸರ್ಕಾರದ ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಯೋಜನೆ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನಗೊಂಡಿದ್ದು, 69 ಕೋಟಿ ಫಲಾನುಭಗಳನ್ನು ತಲುಪಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.
Published: 01st February 2021 02:07 PM | Last Updated: 01st February 2021 02:32 PM | A+A A-

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ: ಕೇಂದ್ರ ಸರ್ಕಾರದ ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಯೋಜನೆ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನಗೊಂಡಿದ್ದು, 69 ಕೋಟಿ ಫಲಾನುಭಗಳನ್ನು ತಲುಪಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.
ಈ ಯೋಜನೆಯಡಿ ಫಲಾನುಭವಿಗಳು ದೇಶದ ಯಾವುದೇ ಭಾಗದಲ್ಲಿಯಾದರೂ ಪಡಿತರ ಪಡೆಯಬಹುದು. ವಲಸೆ ಕಾರ್ಮಿಕರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಕುಟುಂಬದಿಂದ ಬೇರೆ ಕಡೆ ವಾಸಿಸುತ್ತಿರುವವರು ತಾವು ನೆಲೆಸಿರುವ ಸ್ಥಳದಲ್ಲಿಯೇ ಪಡಿತರ ಪಡೆಯಬಹುದಾಗಿದೆ ಎಂದು ಸೀತಾರಾಮನ್ ಬಜೆಟ್ ಭಾಷಣದ ವೇಳೆ ತಿಳಿಸಿದರು.
ಈ ಯೋಜನೆ ಶೇ. 86 ರಷ್ಟು ಫಲಾನುಭವಿಗಳನ್ನು ಹೊಂದಿದ್ದು, ಉಳಿದ ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಂದಿನ ತಿಂಗಳಲ್ಲಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಸೇರಿದಂತೆ ಮತ್ತಿತರ ಪ್ರಚಲಿತ ಮಾಹಿತಿಯನ್ನು ಸಂಗ್ರಹಿಸುವ ಪೋರ್ಟಲ್ ವೊಂದನ್ನು ತೆರೆಯಲು ಉದ್ದೇಶಿಸಲಾಗಿದೆ. ಇದರಿಂದ ಆರೋಗ್ಯ, ಮನೆ, ಕೌಶಲ್ಯ. ವಿಮೆ, ಸಾಲ ಮತ್ತು ಆಹಾರ ಯೋಜನೆಗಳನ್ನು ಎಲ್ಲಾ ವಲಸಿಗ ಕಾರ್ಮಿಕರಿಗೆ ನೀಡಲು ನೆರವಾಗಲಿದೆ ಎಂದರು.
ಕನಿಷ್ಠ ಕೂಲಿ ನಿಯಮ ಎಲ್ಲಾ ವರ್ಗದ ಕಾರ್ಮಿಕರಿಗೂ ಅನ್ವಯವಾಗಲಿದೆ. ಇದರಲ್ಲಿರಾಜ್ಯ ವಿಮೆ ನಿಗಮದ ನೌಕರರ ಕೂಡಾ ಸೇರಲಿದ್ದಾರೆ. ಮಹಿಳೆಯರು ಎಲ್ಲಾ ವರ್ಗದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸೂಕ್ತ ರಕ್ಷಣೆಯೊಂದಿಗೆ ರಾತ್ರಿ ಪಾಳಿಯಲ್ಲೂ ಮಹಿಳೆಯರು ಕೆಲಸ ಮಾಡಬಹುದಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.