ಕೇಂದ್ರ ಬಜೆಟ್ 2021-22 ಪ್ರಸ್ತಾಪಗಳು 6 ಸ್ತಂಭಗಳ ಮೇಲೆ ನಿಂತಿವೆ: ವಿತ್ತ ಸಚಿವೆ ಸೀತಾರಾಮನ್
ಕೊರೋನಾ ಸಾಂಕ್ರಾಮಿಕ ರೋಗದ ಬಳಿಕ ಭಾರತದಲ್ಲಿ ಹೊಸ ಯುಗ ಪ್ರಾರಂಭವಾಗಿದೆ ಎಂದು ಹೇಳಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇಂದು ಮಂಡನೆ ಮಾಡಿದ ಬಜೆಟ್'ನ 6 ಆಧಾರ ಸ್ತಂಭಗಳನ್ನು ಹೆಸರಿಸಿದ್ದಾರೆ.
Published: 01st February 2021 01:10 PM | Last Updated: 01st February 2021 02:09 PM | A+A A-

ನಿರ್ಮಲಾ ಸೀತಾರಾಮನ್
ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗದ ಬಳಿಕ ಭಾರತದಲ್ಲಿ ಹೊಸ ಯುಗ ಪ್ರಾರಂಭವಾಗಿದೆ ಎಂದು ಹೇಳಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇಂದು ಮಂಡನೆ ಮಾಡಿದ ಬಜೆಟ್'ನ 6 ಆಧಾರ ಸ್ತಂಭಗಳನ್ನು ಹೆಸರಿಸಿದ್ದಾರೆ.
ಆರು ಸ್ತಂಭಗಳು ಇಂತಿವೆ...
- ಆರೋಗ್ಯ ಮತ್ತು ಯೋಗಕ್ಷೇಮ,
- ಭೌತಿಕ ಮತ್ತು ಆರ್ಥಿಕ ಬಂಡವಾಳ ಮತ್ತು ಮೂಲಸೌಕರ್ಯ
- ಒಟ್ಟಾರೆ ಅಭಿವೃದ್ಧಿ
- ಮಾನನ ಬಂಡವಾಳ
- ನಾವೀನ್ಯತೆ ಮತ್ತು ಆರ್ & ಡಿ (ರೀಸರ್ಚ್ ಅಂಡ್ ಡೆವಲಪ್ಮೆಂಟ್)
- ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ
ಬಜೆಟ್ನ ಮೊದಲ ಆಧಾರ ಸ್ತಂಭವಾಗಿರುವ ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಹಣಕಾಸು ಸಚಿವರು ಹೆಚ್ಚಿನ ಒತ್ತು ನೀಡಿದ್ದು, ಬಹಳಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ.