ಪಿಎಸ್ ಬಿ ಗಳಿಗೆ 20,000 ಕೋಟಿ ರೂಪಾಯಿ ಮರು ಬಂಡವಾಳ ಹೂಡಿಕೆ
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಹಣಕಾಸು ಆರೋಗ್ಯವನ್ನು ಉತ್ತಮಗೊಳಿಸುವುದಕ್ಕಾಗಿ 2021-22 ನೇ ಸಾಲಿನಲ್ಲಿ 20,000 ಕೋಟಿ ರೂಪಾಯಿ ಮರು ಬಂಡವಾಳ ಹೂಡಿಕೆಯನ್ನು ಬಜೆಟ್ ನಲ್ಲಿ ಪ್ರಕಟಿಸಲಾಗಿದೆ.
Published: 01st February 2021 02:32 PM | Last Updated: 01st February 2021 02:42 PM | A+A A-

ಕೇಂದ್ರ ಹಣಕಾಸು ಸಚಿವೆ ನಿರ್ಲಮಾ ಸೀತಾರಾಮನ್ (ಸಂಗ್ರಹ ಚಿತ್ರ)
ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಹಣಕಾಸು ಆರೋಗ್ಯವನ್ನು ಉತ್ತಮಗೊಳಿಸುವುದಕ್ಕಾಗಿ 2021-22 ನೇ ಸಾಲಿನಲ್ಲಿ 20,000 ಕೋಟಿ ರೂಪಾಯಿ ಮರು ಬಂಡವಾಳ ಹೂಡಿಕೆಯನ್ನು ಬಜೆಟ್ ನಲ್ಲಿ ಪ್ರಕಟಿಸಲಾಗಿದೆ.
ಫೆ.1 ರಂದು ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡಿರುವ ನಿರ್ಮಲಾ ಸೀತಾರಾಮನ್, ಬ್ಯಾಂಕ್ ಗಳಿಗೆ ಮರು ಬಂಡವಾಳ ಹೂಡಿಕೆಯನ್ನು ಘೋಷಿಸಿದ್ದಾರೆ.
2019-20 ರಲ್ಲಿ ಸರ್ಕಾರ ಪಿಎಸ್ ಬಿ ಗಳಿಗೆ ಬರೊಬ್ಬರಿ 70,000 ಕೋಟಿ ರೂಪಾಯಿಗಳ ಮರು ಬಂಡವಾಳ ಹೂಡಿಕೆಯನ್ನು ಘೋಷಿಸಿತ್ತು. 2020-21 ರ ಬಜೆಟ್ ನಲ್ಲಿ ಈ ರೀತಿ ಯಾವುದೇ ಮರುಬಂಡವಾಳ ಹೂಡಿಕೆ ಮಾಡುವುದರಿಂದ ಸರ್ಕಾರ ಹಿಂದೆ ಸರಿದಿತ್ತು. ಆದರೆ ಸೆಪ್ಟೆಂಬರ್ 2020 ರಲ್ಲಿ ಬ್ಯಾಂಕ್ ಗಳಿಗೆ 20,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲು ಸರ್ಕಾರ ಸಂಸತ್ ನ ಅನುಮೋದನೆ ಪಡೆದಿತ್ತು.
ಅಷ್ಟೇ ಅಲ್ಲದೇ 2020 ರ ನವೆಂಬರ್ ನಲ್ಲಿ ಪಂಜಾಬ್ ಹಾಗೂ ಸಿಂದ್ ಬ್ಯಾಂಕ್ ಗಳಿಗೆ 5,500 ಕೋಟಿ ರೂಪಾಯಿಗಳಷ್ಟು ಮರುಬಂಡವಾಳ ಹೂಡಿಕೆ ಮಾಡಿತ್ತು. 2018-19 ರಲ್ಲಿ 1.06 ಲಕ್ಷ ಕೋಟಿ ಹಾಗೂ 2017-18 ರಲ್ಲಿ 90,000 ಕೋಟಿ ರೂಪಾಯಿಗಳನ್ನು ಸರ್ಕಾರ ಬ್ಯಾಂಕ್ ಗಳಿಗೆ ಮರು ಬಂಡವಾಳ ಹೂಡಿಕೆ ಮಾಡಿತ್ತು.