ಈ ಸಾಲಿನ ಕೇಂದ್ರ ಬಜೆಟ್ ಭಾರತದ ಅಭೂತಪೂರ್ವ ಯಶಸ್ಸಿಗೆ ಅಡಿಗಲ್ಲು: ನಳಿನ್ ಕುಮಾರ್ ಕಟೀಲ್
ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2021ನೇ ಸಾಲಿನ ಕೇಂದ್ರ ಬಜೆಟ್ ಭಾರತದ ಅಭೂತಪೂರ್ವ ಯಶಸ್ಸಿಗೆ ಅಡಿಗಲ್ಲಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
Published: 01st February 2021 02:49 PM | Last Updated: 01st February 2021 03:15 PM | A+A A-

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಬೆಂಗಳೂರು: ಕೇಂದ್ರ ಸರ್ಕಾರ ಭಾರತದ ಸರ್ವತೋಮುಖ ಅಭಿವೃದ್ಧಿಗೆ ಸರ್ವ ರೀತಿಯಲ್ಲಿಯೂ ಸನ್ನಧವಾಗಿದೆ. ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2021ನೇ ಸಾಲಿನ ಕೇಂದ್ರ ಬಜೆಟ್ ಭಾರತದ ಅಭೂತಪೂರ್ವ ಯಶಸ್ಸಿಗೆ ಅಡಿಗಲ್ಲಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
2021-22ರಲ್ಲಿ ಕೋವಿಡ್ ಲಸಿಕೆಗೆ 35 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದು, ಅಗತ್ಯ ಬಿದ್ದರೆ ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ಅನುದಾನ ನೀಡಲು ಬದ್ಧವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿರುವುದು ಭಾರತೀಯರ ಆರೋಗ್ಯ ಎಲ್ಲಕ್ಕಿಂತ ಮೊದಲು ಎಂಬುದು ಸ್ಪಷ್ಟವಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
2021-22 ರಲ್ಲಿ 35,000 ಕೋಟಿ ರೂಗಳು ಕೋವಿಡ್ ಲಸಿಕೆಗೆ ಮೀಸಲು. ಅಗತ್ಯ ಬಿದ್ದರೆ ಕೇಂದ್ರ ಸರಕಾರ ಇನ್ನೂ ಹೆಚ್ಚಿನ ಅನುದಾನ ನೀಡಲು ಬದ್ಧವಾಗಿದೆ ಎಂದ ಮಾನ್ಯ ಕೇಂದ್ರ ಹಣಕಾಸು ಸಚಿವರು @nsitharaman ಭಾರತೀಯರ ಆರೋಗ್ಯ ಎಲ್ಲಕ್ಕಿಂತ ಮೊದಲು ಎಂಬುದು ಸ್ಪಷ್ಟವಾಗಿದೆ. #Budget2021
— Nalinkumar Kateel (@nalinkateel) February 1, 2021
ಎನ್ ಜಿಒ, ಖಾಸಗಿ ಮತ್ತು ರಾಜ್ಯಗಳ ಜೊತೆಗೆ ಸೇರಿ ನೂರು ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸಲು ಪ್ರಸ್ತಾಪ ಮಾಡಲಾಗಿದೆ. ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್ ನಲ್ಲಿ ದೇಶದ ಭದ್ರತೆ, ಆರೋಗ್ಯ ಮತ್ತು ಆರ್ಥಿಕತೆಗೆ ಹೆಚ್ಚಿನ ಒತ್ತು ಕೊಟ್ಟಿರುವುದು ಗಮನಾರ್ಹವಾದ ವಿಚಾರವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.