2022 ರಾಜ್ಯ ಬಜೆಟ್: ಜೇನು ಕೃಷಿಗೆ ಪ್ರೋತ್ಸಾಹ; ಕಾಫಿ ಬೆಳೆಗಾರರ ಬೇಡಿಕೆ ನಿರ್ಲಕ್ಷ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಜೀನು ಕೃಷಿಗೆ ಹಣ ಮೀಸಲಿಡುವುದರೊಂದಿಗೆ ಮಡಿಕೇರಿ ಜಿಲ್ಲೆಗೆ ದೊಡ್ಡ ಕೊಡುಗೆ ನೀಡಿದ್ದು, ಒಟ್ಟಾರೇ ಬಜೆಟ್  ಅಭಿವೃದ್ಧಿ ಮತ್ತು ರೈತರ ಪರವಾಗಿದೆ ಎಂದು ಶಾಸಕ ಅಪ್ಪಚು ರಂಜನ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಡಿಕೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಜೀನು ಕೃಷಿಗೆ ಹಣ ಮೀಸಲಿಡುವುದರೊಂದಿಗೆ ಮಡಿಕೇರಿ ಜಿಲ್ಲೆಗೆ ದೊಡ್ಡ ಕೊಡುಗೆ ನೀಡಿದ್ದು, ಒಟ್ಟಾರೇ ಬಜೆಟ್  ಅಭಿವೃದ್ಧಿ ಮತ್ತು ರೈತರ ಪರವಾಗಿದೆ ಎಂದು ಶಾಸಕ ಅಪ್ಪಚು ರಂಜನ್ ಹೇಳಿದ್ದಾರೆ.

ಆದರೆ, ಕಾಫಿ ಬೆಳೆಗಾರರ ಕೆಲವು ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಕೊಡಗಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಡಗು ಮತ್ತು ಜಾಂಬೋಟಿ ಜೀನು ಕೃಷಿ ಪ್ರೋತ್ಸಾಹಕ್ಕಾಗಿ ರೂ. 5 ಕೋಟಿಯನ್ನು ರಾಜ್ಯ ಬಜೆಟ್ ನಲ್ಲಿ ಮೀಸಲಿಡಲಾಗಿದೆ. ಕೊಡವರಲ್ಲದೇ, ಜಿಲ್ಲೆಯಲ್ಲಿ ಅರೆಭಾಷೆ ಸಮುದಾಯದ ಜನರು ಹೆಚ್ಚಾಗುತ್ತಿದ್ದು, ಅವರಿಗೆ ಮಂಗಳೂರು ವಿವಿಯಲ್ಲಿ ಸಂಶೋಧನಾ ಕೇಂದ್ರವೊಂದನ್ನು ಮಂಜೂರು ಮಾಡಲಾಗಿದೆ. 

ಕೊಡವ ಸಮುದಾಯದ ಅಭಿವೃದ್ಧಿಗಾಗಿ 10 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಆನೆಗಳು ಮತ್ತು ಮಾನವ ಸಂಘರ್ಘ ತಪ್ಪಿಸಲು  ರೈಲ್ವೆ ತಂತಿ ಬೇಲಿ ಅಳವಡಿಕೆಗೆ 100 ಕೋಟಿ ರೂ.ಮೀಸಲಿಡಲಾಗಿದೆ.  ಆದಾಗ್ಯೂ, ರಾಜ್ಯ ಬಜೆಟ್ ನಲ್ಲಿ ಕಾಫಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ ಎಂದು ಕೆಲ ಕಾಫಿ ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕಾಫಿ ಎಸ್ಟೇಟ್ ನಲ್ಲಿ 10 ಹೆಚ್ ಪಿ ಪಂಪ್ ಸೆಟ್ ಗಳವರೆಗೂ ಉಚಿತ ವಿದ್ಯುತ್ ಪೂರೈಕೆ ಘೋಷಣೆ ಮಾಡುವ ವಿಶ್ವಾಸದಲ್ಲಿದ್ದೇವು. ಆದರೆ, ಅನೇಕ ಮನವಿಗಳ ಹೊರತಾಗಿಯೂ ಈ ಘೋಷಣೆ ಮಾಡಿಲ್ಲ, ಕೊಡವ ಅಭಿವೃದ್ಧಿ ಮಂಡಳಿ ಸ್ಥಾಪನೆ ಬಗ್ಗೆ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಕಾಫಿ ಬೋರ್ಡ್ ಮಾಜಿ ಅಧ್ಯಕ್ಷ ಡಾ.ಎಸ್. ಕಾವೇರಪ್ಪ ಹೇಳಿದ್ದಾರೆ.

ಕೊಡಗು ನಿವಾಸಿಗಳು ಬಜೆಟ್ ಬಗ್ಗೆ ನಿರಾಸೆಗೊಂಡಿದ್ದಾರೆ. ಕ್ರೀಡಾ ಯೂನಿವರ್ಸಿಟಿ ಮತ್ತು ಕೊಡವ ಅಭಿವೃದ್ಧಿ ಮಂಡಳಿ ಸ್ಥಾಪನೆ ಬಗ್ಗೆ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಜಿಲ್ಲೆಯಲ್ಲಿರುವ ಅನೇಕ ದುರ್ಬಲ ಜನರಿಗೆ ಬಜೆಟ್ ನಲ್ಲಿ ಯಾವುದೇ ನೆರವು ನೀಡಿಲ್ಲ. ಕೊಡವ ಸಮುದಾಯದ ಅಭಿವೃದ್ಧಿಗೆ ಕೊಡವ ಅಭಿವೃದ್ಧಿ ಮಂಡಳಿ ರಚನೆ ಅತ್ಯಂತ ಅಗತ್ಯವಾಗಿದೆ. ಆದರೆ, ಕೊಡಗು ಜನರು ಅನೇಕ ಬೇಡಿಕೆಗಳ ಹೊರತಾಗಿಯೂ ಅವುಗಳನ್ನು ನಿರ್ಲಕ್ಷಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com