ರಾಜ್ಯ ಬಜೆಟ್ 2022-23: ಮೀನುಗಾರರಿಗೆ 5,000 ಮನೆ, ಮಂಗಳೂರು ಬಂದರು ವಿಸ್ತರಣೆಗೆ 350 ಕೋಟಿ ರೂ. ಅನುದಾನ ಘೋಷಣೆ
ರಾಜ್ಯ ಬಜೆಟ್-2022-23 ನ್ನು ಮಂಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ನಿರಾಶ್ರಿತ ಮೀನುಗಾರರಿಗೆ 5,000 ಮನೆಗಳನ್ನು ರಾಜೀವ್ ಗಾಂಧಿ ಆವಾಸ್ ಯೋಜನೆಯಡಿ ಘೋಷಿಸಿದ್ದಾರೆ.
Published: 04th March 2022 07:22 PM | Last Updated: 04th March 2022 07:56 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಬಜೆಟ್-2022-23 ನ್ನು ಮಂಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ನಿರಾಶ್ರಿತ ಮೀನುಗಾರರಿಗೆ 5,000 ಮನೆಗಳನ್ನು ರಾಜೀವ್ ಗಾಂಧಿ ಆವಾಸ್ ಯೋಜನೆಯಡಿ ಘೋಷಿಸಿದ್ದಾರೆ.
ಮೀನುಗಾರರ ಆದಾಯ ಸುಧಾರಣೆಗೆ ಹಾಗೂ ಆಳ ಸಮುದ್ರ ಮೀನುಗಾರಿಕೆಗೆ ಉತ್ತೇಜನ ನೀಡಲು 100 ಆಳ ಸಮುದ್ರ ಮೀನುಗಾರಿಕೆ ಬೋಟ್ ಗಳನ್ನು ಮತ್ಸ್ಯ ಶ್ರೀ ಯೋಜನೆಯಡಿ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಸಹಭಾಗಿತ್ವದಲ್ಲಿ ಸೇರ್ಪಡೆಗೊಳಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ಬಜೆಟ್ 2022: ಕೃಷಿ ಕ್ಷೇತ್ರಕ್ಕೆ ಬಂಪರ್; 33,700 ಕೋಟಿ ಘೋಷಣೆ; ರೈತರಿಗೆ ಏನೆಲ್ಲಾ ಸಿಗಲಿದೆ!
ದೋಣಿಗಳನ್ನು ಸುಗಮವಾಗಿ ಮುನ್ನಡೆಸುವುದಕ್ಕಾಗಿ ಸಂಚರಣೆ ಚಾನಲ್ ಗಳ ಸುಧಾರಣೆಗಾಗಿ ಬಜೆಟ್ ನ್ನು ಘೋಷಿಸಲಾಗಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ಸಮುದ್ರದ ಸವೆತ ತಡೆಗೆ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಸಿಎಂ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.