ಸ್ಟಾರ್ಟ್ ಅಪ್ ಕಂಪೆನಿಗಳಿಗೆ ಕರ್ನಾಟಕ ಬಜೆಟ್-2022ರಲ್ಲಿ ಉತ್ತೇಜನ: 12 ಕೋಟಿ ರೂ. ಮೀಸಲು
ಕರ್ನಾಟಕದಾದ್ಯಂತ ಸ್ಟಾರ್ಟ್ಅಪ್ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಮಂಡಿಸಿರುವ ತಮ್ಮ ಚೊಚ್ಚಲ ಬಜೆಟ್ ಭಾಷಣದಲ್ಲಿ, ಬೆಂಗಳೂರು ಬಿಯಾಂಡ್ ಕ್ಲಸ್ಟರ್ ಸೀಡ್ ಫಂಡ್ ಗಳನ್ನು ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.
Published: 05th March 2022 09:17 AM | Last Updated: 05th March 2022 09:17 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕದಾದ್ಯಂತ ಸ್ಟಾರ್ಟ್ಅಪ್ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಮಂಡಿಸಿರುವ ತಮ್ಮ ಚೊಚ್ಚಲ ಬಜೆಟ್ ಭಾಷಣದಲ್ಲಿ, ಬೆಂಗಳೂರು ಬಿಯಾಂಡ್ ಕ್ಲಸ್ಟರ್ ಸೀಡ್ ಫಂಡ್ ಗಳನ್ನು ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.
ಇವುಗಳು 20 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ನಿರ್ವಹಿಸುವ ಕ್ಲಸ್ಟರ್ ಮಾದರಿಯಲ್ಲಿರುತ್ತವೆ. ಪ್ರಸಕ್ತ ವರ್ಷ ಈ ಯೋಜನೆಗೆ 12 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ಕರ್ನಾಟಕವು ಅನೇಕ ಯುನಿಕಾರ್ನ್ಗಳನ್ನು ($1 ಶತಕೋಟಿ ಮೌಲ್ಯದೊಂದಿಗೆ ಸ್ಟಾರ್ಟ್ಅಪ್) ಉತ್ಪಾದಿಸುತ್ತಿರುವ ಸಮಯದಲ್ಲಿ ಸರ್ಕಾರ ಈ ಘೋಷಣೆ ಮಾಡಿದೆ. ಕರ್ನಾಟಕದ ಸ್ಟಾರ್ಟ್ ಅಪ್ ಗಳು ಪರಿಸರ ಸ್ನೇಹಿಯಾಗಿದ್ದು ಬೆಂಗಳೂರು ನಗರವೊಂದರಲ್ಲಿಯೇ 34 ಸ್ಟಾರ್ಟ್ ಅಪ್ ಗಳು 1 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿದೆ. ರಾಜ್ಯದಲ್ಲಿ 13 ಸಾವಿರಕ್ಕೂ ಅಧಿಕ ತಂತ್ರಜ್ಞಾನ ಸ್ಟಾರ್ಟ್ ಅಪ್ ಗಳಿದ್ದು ಅವುಗಳಲ್ಲಿ ಹಲವು ತಂತ್ರಜ್ಞಾನ ಆಧಾರಿತ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ್ನು ಗುರಿಯಾಗಿಟ್ಟುಕೊಂಡು ಆಗಿವೆ.
ರಾಜ್ಯ ಸರ್ಕಾರವು 200 ಸ್ಟಾರ್ಟಪ್ಗಳಿಗೆ 50 ಲಕ್ಷ ರೂಪಾಯಿಗಳ ನಿಧಿಯನ್ನು ನೀಡುತ್ತದೆ. ಬೆಂಗಳೂರಿನ ಆಚೆಗೆ, KDEM ನ ಉಪಕ್ರಮವು, ಕರ್ನಾಟಕದ ಉದಯೋನ್ಮುಖ ತಂತ್ರಜ್ಞಾನ ಸಮೂಹಗಳಲ್ಲಿ ನೆಲೆಗೊಂಡಿರುವ IT/ITeS, BPO, ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಮ್ಯಾನುಫ್ಯಾಕ್ಚರಿಂಗ್ (ESDM) ಮತ್ತು ಟೆಲಿಕಾಂ ವಲಯದ ಉದ್ಯಮಗಳಲ್ಲಿ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ ನಾರಾಯಣ ಸಿ ಎನ್ ತಿಳಿಸಿದ್ದಾರೆ.