ಬಜೆಟ್ ನಲ್ಲಿ ನೀರಾವರಿ ಯೋಜನೆಗಳಿಗೆ ಅತ್ಯಲ್ಪ ಪ್ರಮಾಣದ ಹಂಚಿಕೆ: ಮೇಕೆದಾಟು ಪಾದಯಾತ್ರೆ ಲಾಭ ಕಾಂಗ್ರೆಸ್ ಗೆ ತಪ್ಪಿಸಲು ಸಿಎಂ ಪ್ಲಾನ್!

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ, ಭದ್ರಾ ಮೇಲ್ದಂಡೆ, ಕಳಸಾ-ಬಂಡೂರಿ, ಮೇಕೆದಾಟು, ಎತ್ತಿನಹೊಳೆ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಅಂದಾಜು ವೆಚ್ಚ ಹಲವು ಲಕ್ಷ ಕೋಟಿ ರೂ.ಗಳಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ, ಭದ್ರಾ ಮೇಲ್ದಂಡೆ, ಕಳಸಾ-ಬಂಡೂರಿ, ಮೇಕೆದಾಟು, ಎತ್ತಿನಹೊಳೆ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಅಂದಾಜು ವೆಚ್ಚ ಹಲವು ಲಕ್ಷ ಕೋಟಿ ರೂ.ಗಳಾಗಿದೆ. ಆದರೆ ಸಿಎಂ ಬಸವರಾಜ್  ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ನಲ್ಲಿ ಅತ್ಯಲ್ಪ ಹಣ ಹಂಚಿಕೆ ಮಾಡಿದ್ದಾರೆ.

ಈ ಯೋಜನೆಗಳಿಗೆ ನೀಡಿರುವ ಹಣವನ್ನು ವಿಶೇಷವಾಗಿ ಕೃಷ್ಣ ಮೇಲ್ದಂಡೆ ಯೋಜನೆ-3, ಮೇಕೆದಾಟು ಮತ್ತು ಕಳಸಾ-ಬಂಡೂರಿಯಂತಹ ಯೋಜನೆಗಳಿಗೆ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾವೇರಿ ನ್ಯಾಯಾಧಿಕರಣದಲ್ಲಿ ತಮಿಳುನಾಡಿನ ಅರ್ಜಿ ವಿಚಾರಣೆಗೆ ಬಾಕಿ ಇದೆ. ಡಿಪಿಆರ್‌ಗೆ ಒಪ್ಪಿಗೆ ನೀಡಿದರೂ ಕೇಂದ್ರ ಪರಿಸರ ಅನುಮತಿ ನೀಡಿದ ನಂತರವೇ ಕಾಮಗಾರಿ ಕೈಗೆತ್ತಿಕೊಳ್ಳಬಹುದು.

ಕಾಂಗ್ರೆಸ್  ಇತ್ತೀಚಿಗೆ ನಡೆಸಿದ ಮೇಕೆದಾಟು ಪಾದಯಾತ್ರೆಯಿಂದ ಯಾವುದೇ  ರೀತಿಯ ಫೇವರ್  ಪಡೆಯುವುದನ್ನು ತಡೆಯಲು, ಸಿಎಂ ಮೇಕೆದಾಟು ಯೋಜನೆಗೆ 1,000 ಕೋಟಿ ರೂ ಹಣ ಹಂಚಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೀರಾವರಿ ಯೋಜನೆಗಳ ಪ್ರಮಾಣ ಮತ್ತು ಅಂದಾಜು ವೆಚ್ಚವನ್ನು ಗಮನಿಸಿದರೆ, ನಿಗದಿಪಡಿಸಿದ ಹಣವು ತೀರಾ ಕಡಿಮೆಯಾಗಿದೆ. ಯುಕೆಪಿ-3 ಯೋಜನೆಗೆ ವಾರ್ಷಿಕವಾಗಿ ಕನಿಷ್ಠ 10,000 ಕೋಟಿ ರೂ.  ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ವಕೀಲ ಮೋಹನ್ ಕಾಟರಕಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com