ಮೊಬೈಲ್ ನಲ್ಲಿ ಕೇಂದ್ರ ಬಜೆಟ್ 2022; ಡೌನ್ ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ...
ಈ ಬಾರಿಯ ಬಜೆಟ್ ಕೂಡ ಡಿಜಿಟಲ್ ಆಗಲಿದ್ದು ಪ್ರತಿ ಬಜೆಟ್ ಮಾಹಿತಿಯೂ ಜನಸಾಮಾನ್ಯರಿಗೆ ಸುಲಭವಾಗಿ ಸಿಗುವಂತೆ ಮಾಡಲು ಸರ್ಕಾರ ಆ್ಯಪ್ ಬಿಡುಗಡೆ ಮಾಡಿದೆ.
Published: 01st February 2022 09:36 AM | Last Updated: 01st February 2022 11:59 AM | A+A A-

ಸಂಗ್ರಹ ಚಿತ್ರ
ನವದೆಹಲಿ: ಈ ಬಾರಿಯ ಬಜೆಟ್ ಕೂಡ ಡಿಜಿಟಲ್ ಆಗಲಿದ್ದು ಪ್ರತಿ ಬಜೆಟ್ ಮಾಹಿತಿಯೂ ಜನಸಾಮಾನ್ಯರಿಗೆ ಸುಲಭವಾಗಿ ಸಿಗುವಂತೆ ಮಾಡಲು ಸರ್ಕಾರ ಆ್ಯಪ್ ಬಿಡುಗಡೆ ಮಾಡಿದೆ.
ಬಜೆಟ್ ಮಾಹಿತಿಯು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರವು ಈ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸಂಪೂರ್ಣ ಬಜೆಟ್ ಅನ್ನು ವೀಕ್ಷಿಸಲು ಈ ಅಪ್ಲಿಕೇಶನ್ ನಿಂದ ಸಾಧ್ಯವಾಗಲಿದೆ.
ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಸಾಮಾನ್ಯ ಬಜೆಟ್ ಅನ್ನು ಬೆಳಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ. ಬಜೆಟ್ ಮಂಡನೆ ಬಳಿಕ ಈ ಆ್ಯಪ್ ಮೂಲಕ ಜನ ಸಾಮಾನ್ಯರು ತಮ್ಮ ಮೊಬೈಲ್ ನಲ್ಲಿ ಅವರದೇ ಭಾಷೆಯಲ್ಲಿ ಓದಬಹುದಾಗಿದೆ. ಮೊಬೈಲ್ ಅಪ್ಲಿಕೇಶನ್‌ನಲ್ಲಿ ಜನರು ಕೇಂದ್ರ ಬಜೆಟ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ದೊರೆಯಲಿದೆ. ಈ ಬಜೆಟ್ ಅನ್ನು ಜನರಿಗೆ ಸುಲಭವಾಗಿ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮಕೈಗೊಂಡಿದೆ.
ಆ್ಯಪ್ ಡೌನ್‌ಲೋಡ್ ಮಾಡುವುದು ಹೇಗೆ?
ಬಳಕೆದಾರರು http://indiabudget.gov.in ನಿಂದ ಡೌನ್‌ಲೋಡ್ ಮಾಡಬಹುದು. ಇದರ ಹೊರತಾಗಿ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಇದರೊಂದಿಗೆ ಡಿಜಿಟಲ್ ಪಾರ್ಲಿಮೆಂಟ್ ಆ್ಯಪ್ ಮೂಲಕ ಮೊಬೈಲ್‌ನಲ್ಲಿ ಬಜೆಟ್ 2022 ಅನ್ನು ಲೈವ್ ಆಗಿ ವೀಕ್ಷಿಸಲು ಸಾಧ್ಯವಾಗಲಿದೆ. ಇದು ಬಜೆಟ್‌ಗೆ ಸಂಬಂಧಿಸಿದ ಮಾಹಿತಿ ನೀಡುವ ಮತ್ತೊಂದು ಅಪ್ಲಿಕೇಶನ್ ಆಗಿದೆ. ಸಂಸತ್ತಿನ ಉಭಯ ಸದನಗಳ ಕಲಾಪಗಳನ್ನು ಡಿಜಿಟಲ್ ಪಾರ್ಲಿಮೆಂಟ್ ಆ್ಯಪ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದ. ಅಂದರೆ, ಈ ಅಪ್ಲಿಕೇಶನ್‌ನಲ್ಲಿ ನೀವು ಸಾಮಾನ್ಯ ಬಜೆಟ್ ಅನ್ನು ಲೈವ್ ಆಗಿ ವೀಕ್ಷಿಸಲು ಸಾಧ್ಯವಾಗಲಿದೆ.