ಕೇಂದ್ರ ಬಜೆಟ್-2022 ಮಂಡನೆಗೆ ಮುನ್ನ ಷೇರುಪೇಟೆ ಸಂವೇದಿ ಸೂಚ್ಯಂಕ ಏರಿಕೆ, ಹೂಡಿಕೆದಾರರಲ್ಲಿ ಭರವಸೆ
ಇಂದು ಫೆಬ್ರವರಿ 1 ಮಂಗಳವಾರ ಕೇಂದ್ರ ಬಜೆಟ್ -2022 ಮಂಡನೆಯಾಗಲಿದೆ. ಕೇಂದ್ರ ಬಜೆಟ್ ಮಂಡನೆಗೆ ಮುಂಚಿತವಾಗಿ ಮುಂಬೈ ಷೇರುಪೇಟೆಯ ಆರಂಭಿಕ ವ್ಯವಹಾರಗಳಲ್ಲಿ ದೇಶೀಯ ಷೇರು ಸಂವೇದಿ ಸೂಚ್ಯಂಕಗಳು ಧನಾತ್ಮಕವಾಗಿ ಏರಿಕೆ ಹಾದಿಯಲ್ಲಿ ಹೆಚ್ಚಿನ ವಹಿವಾಟು ನಡೆಸಿದವು.
Published: 01st February 2022 09:40 AM | Last Updated: 01st February 2022 11:59 AM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಇಂದು ಫೆಬ್ರವರಿ 1 ಮಂಗಳವಾರ ಕೇಂದ್ರ ಬಜೆಟ್ -2022 ಮಂಡನೆಯಾಗಲಿದೆ. ಕೇಂದ್ರ ಬಜೆಟ್ ಮಂಡನೆಗೆ ಮುಂಚಿತವಾಗಿ ಮುಂಬೈ ಷೇರುಪೇಟೆಯ ಆರಂಭಿಕ ವ್ಯವಹಾರಗಳಲ್ಲಿ ದೇಶೀಯ ಷೇರು ಸಂವೇದಿ ಸೂಚ್ಯಂಕಗಳು ಧನಾತ್ಮಕವಾಗಿ ಏರಿಕೆ ಹಾದಿಯಲ್ಲಿ ಹೆಚ್ಚಿನ ವಹಿವಾಟು ನಡೆಸಿದವು.
ಎಸ್‌ಜಿಎಕ್ಸ್ ನಿಫ್ಟಿ ಸಹ ಧನಾತ್ಮಕ ಆರಂಭಿಕವನ್ನು ಕಂಡಿವೆ. SGX ನಿಫ್ಟಿ ಫ್ಯೂಚರ್ಸ್ ಎಂದು ಕರೆಯಲ್ಪಡುವ ಸಿಂಗಾಪುರ್ ಎಕ್ಸ್‌ಚೇಂಜ್‌ನಲ್ಲಿ ನಿಫ್ಟಿ ಫ್ಯೂಚರ್ಸ್ 126.25 ಪಾಯಿಂಟ್‌ಗಳು ಅಂದರೆ 0.73 ಶೇಕಡಾ ಜಿಗಿದು 17,494 ಕ್ಕೆ ತಲುಪಿದೆ. ಇಂದು ಬೆಳಗಿನ ವಹಿವಾಟು ಆರಂಭದಲ್ಲಿ ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್ ಹೆಚ್ಚಿನ ವಹಿವಾಟು ಕಂಡವು.
ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಸೋಮವಾರ ಎಲ್ಲಾ ವಲಯಗಳ ಖರೀದಿಯಲ್ಲಿ ನಿನ್ನೆ ಮುನ್ನಡೆ ಕಂಡವು. 30 ಘಟಕಗಳ ಬಿಎಸ್‌ಇ ಸೂಚ್ಯಂಕವು ಇಂದು 814 ಪಾಯಿಂಟ್ ಗಳು ಅಂದರೆ ಶೇಕಡಾ 1.42ರಷ್ಟು ಏರಿಕೆಯಾಗಿ 58,014ಕ್ಕೆ ಸ್ಥಿರವಾಯಿತು; ಎನ್‌ಎಸ್‌ಇ ನಿಫ್ಟಿ 238 ಪಾಯಿಂಟ್‌ಗಳು ಅಂದರೆ 1.39 ಶೇಕಡಾ ಹೆಚ್ಚಾಗಿ 17,340 ಕ್ಕೆ ತಲುಪಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 9.2 ರಷ್ಟು ಬೆಳವಣಿಗೆಯಾಗಲಿದೆ ಎಂದು ನಿನ್ನೆ ವಿತ್ತ ಸಚಿವೆ ಮಂಡಿಸಿದ್ದ ಆರ್ಥಿಕ ಸಮೀಕ್ಷೆಯು ಅಂದಾಜು ಮಾಡಿರುವುದರಿಂದ ಹೂಡಿಕೆದಾರರಲ್ಲಿ ಆಶಾಭಾವನೆ ವ್ಯಕ್ತವಾಗಿದೆ. ಅದು ಕೂಡ ಇಂದಿನ ಷೇರುಪೇಟೆ ಸಂವೇದಿ ಸೂಚ್ಯಂಕಕ್ಕೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಬಹುದು.
ಕೋವಿಡ್ -19 ಸಾಂಕ್ರಾಮಿಕ ಮತ್ತು ನಂತರದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ಗಳ ಪರಿಣಾಮದಿಂದಾಗಿ 2020-21 ರಲ್ಲಿ ದೇಶದ ಆರ್ಥಿಕತೆಯು ಶೇಕಡಾ 7.3ರಷ್ಟು ಕುಸಿದಿದ್ದವು.
ಬಜೆಟ್ ದಿನದಂದು ದೇಶೀಯ ಸೂಚ್ಯಂಕಗಳು ಏರಿಕೆಯಾಗಬಹುದು ಎಂದು ಷೇರುಮಾರುಕಟ್ಟೆ ವಿಶ್ಲೇಷಕರು ಅಂದಾಜು ಮಾಡಿದ್ದಾರೆ.ಇತ್ತೀಚಿನ ವರದಿಯಂತೆ ಸೆನ್ಸೆಕ್ಸ್ 736 ಪಾಯಿಂಟ್‌ಗಳ ಏರಿಕೆಯೊಂದಿಗೆ ಪ್ರಸ್ತುತ 58,760.24 ನಲ್ಲಿದೆ. ನಿಫ್ಟಿ 195 ಪಾಯಿಂಟ್‌ಗಳ ಏರಿಕೆ, ಪ್ರಸ್ತುತ 17,535 ರಲ್ಲಿದೆ.