ಕೇಂದ್ರ ಬಜೆಟ್ 2022: ಡಿಜಿಟಲ್ ಕರೆನ್ಸಿ ಘೋಷಣೆ; ಈ ವರ್ಷವೇ ಆರ್ ಬಿಐ ನಿಂದ "ಡಿಜಿಟಲ್ ರುಪೀ"; ಡಿಜಿಟಲ್ ಕರೆನ್ಸಿಗೆ ತೆರಿಗೆ!
ಡಿಜಿಟಲ್ ಕರೆನ್ಸಿಯ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಈ ವರೆಗೂ ಇದ್ದ ಗೊಂದಲಗಳಿಗೆ ಫೆ.1 ರಂದು ಮಂಡನೆಯಾದ 2022-23 ನೇ ಸಾಲಿನ ಬಜೆಟ್ ನಲ್ಲಿ ಸ್ಪಷ್ಟತೆ ಸಿಕ್ಕಿದೆ.
Published: 01st February 2022 12:24 PM | Last Updated: 05th November 2022 02:50 PM | A+A A-

ಕ್ರಿಪ್ಟೋ ಕರೆನ್ಸಿ (ಸಾಂಕೇತಿಕ ಚಿತ್ರ)
ನವದೆಹಲಿ: ಡಿಜಿಟಲ್ ಕರೆನ್ಸಿಯ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಈ ವರೆಗೂ ಇದ್ದ ಗೊಂದಲಗಳಿಗೆ ಫೆ.1 ರಂದು ಮಂಡನೆಯಾದ 2022-23 ನೇ ಸಾಲಿನ ಬಜೆಟ್ ನಲ್ಲಿ ಸ್ಪಷ್ಟತೆ ಸಿಕ್ಕಿದೆ.
ಬಜೆಟ್ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಡಿಜಿಟಲ್ ಕರೆನ್ಸಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. 2022 ರಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) "ಡಿಜಿಟಲ್ ರುಪೀ" ಪರಿಚಯಿಸಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬ್ಲಾಕ್ ಚೈನ್ ಆಧಾರಿತ ಬಿಟ್ ಕಾಯಿನ್ ಹ್ಯಾಕ್ ಮಾಡುವುದು ಟ್ವೀಟ್ ಮಾಡಿದಷ್ಟು ಸುಲಭವೇ? (ಹಣಕ್ಲಾಸು)
"ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಆಧರಿಸಿ ಆರ್ ಬಿಐ ಡಿಜಿಟಲ್ ಕರೆನ್ಸಿಯನ್ನು 2022-23 ಆರ್ಥಿಕ ವರ್ಷದಲ್ಲೇ ಪರಿಚಯಿಸಲಿದೆ" ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದೇ ವೇಳೆ ಡಿಜಿಟಲ್ ಆಸ್ತಿ ಅಂದರೆ ಡಿಜಿಟಲ್ ಕರೆನ್ಸಿ ಅಥವಾ ಕ್ರಿಪ್ಟೋ ಕರೆನ್ಸಿ ವರ್ಗಾವಣೆ, ವರ್ಚ್ಯುಯಲ್ ಅಸೆಟ್ ಮೇಲೆ ಶೇ.1 ರಷ್ಟು ಟಿಡಿಎಸ್ ಹಾಗೂ ಡಿಜಿಟಲ್ ಕರೆನ್ಸಿ ವರ್ಗಾವಣೆ, ಆದಾಯದ ಮೇಲೆ ಮೇಲೆ ಶೇ.30 ರಷ್ಟು ತೆರಿಗೆ ವಿಧಿಸಲಾಗುವುದು ಎಂದು ನಿರ್ಮಲಾ ಸೀತಾರಾಮಾನ್ ತಿಳಿಸಿದ್ದಾರೆ. ಡಿಜಿಟಲ್ ಕರೆನ್ಸಿಗೆ ಸಂಬಂಧಿಸಿದಂತೆ ಆದಾಯ ಯಾವುದೇ ಹೊಂದಾಣಿಕೆಗೆ ಅವಕಾಶ ಇಲ್ಲ. ವರ್ಚುವಲ್ ಡಿಜಿಟಲ್ ಅಸೆಟ್ (ಕ್ರಿಪ್ಟೋಕರೆನ್ಸಿ ಮಾದರಿಯ) ಕೊಡುಗೆ ಪಡೆಯುವವರೂ ಸಹ ತೆರಿಗೆ ಪಾವತಿ ಮಾಡಬೇಕಾಗುತ್ತದೆ.