ಬಜೆಟ್ ಅಧಿವೇಶನ: ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರೊಂದಿಗೆ ಬೆರೆತ ಪ್ರಧಾನಿ ಮೋದಿ

ಮಂಗಳವಾರ ಸತತ ನಾಲ್ಕನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ಸದಸ್ಯರತ್ತ ನಡೆದು ಔಪಚಾರಿಕವಾಗಿ
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಮಂಗಳವಾರ ಸತತ ನಾಲ್ಕನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ಸದಸ್ಯರತ್ತ ನಡೆದು ಔಪಚಾರಿಕವಾಗಿ ಮಾತನಾಡಿದರು.

ಬಜೆಟ್ ಬಳಿಕ ಲೋಕಸಭೆ ಕಲಾಪವನ್ನು ನಾಳೆಗೆ ಮುಂದೂಡಿದ ನಂತರ ಸದನದ ಬಾವಿಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರಾದ ಸುದೀಪ್ ಬಂಡೋಪಾಧ್ಯಾಯ ಮತ್ತು ಸೌಗತ ರಾಯ್ ಅವರೊಂದಿಗೆ ಮೋದಿ ಸಂವಾದ ನಡೆಸುತ್ತಿರುವುದು ಕಂಡುಬಂದಿತು.

ಸದಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸಾರ್ವಜನಿಕವಾಗಿ ವಾಗ್ವಾದದಲ್ಲಿ ಭಾಗಿಯಾಗಿರುವ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಪ್ರಧಾನಿ ಮೋದಿಯನ್ನು ಕೋರಿರುವುದಾಗಿ ರಾಯ್ ಹೇಳಿದ್ದಾರೆ.

"ಅದಕ್ಕೆ ನೀವು ನಿವೃತ್ತಿಯಾಗಿ, ನಂತರ ನಾವು ನೋಡುತ್ತೇವೆ" ಎಂದು ಮೋದಿ ಪ್ರತಿಕ್ರಿಯಿಸಿದರು. ಅವರು ಬಹುಶಃ ವಿಷಯಾಂತರ ಮಾಡಲು ಬಯಸಿದ್ದರು" ಎಂದು ರಾಯ್ ತಿಳಿಸಿದ್ದಾರೆ.

ಕೇರಳದ ಕಾಂಗ್ರೆಸ್ ಸದಸ್ಯರಾದ ಕೋಡಿಕುನ್ನಿಲ್ ಸುರೇಶ್ ಮತ್ತು ಗೋವಾದ ಫ್ರಾನ್ಸಿಸ್ಕೊ ಸಾರ್ದಿನ್ಹಾ ಅವರೊಂದಿಗೂ ಮೋದಿ ಮಾತುಕತೆಯಲ್ಲಿ ಮಗ್ನರಾಗಿದ್ದರು. ಡಿಸೆಂಬರ್‌ನಲ್ಲಿ ನಡೆದ ಗೋವಾ ವಿಮೋಚನಾ ದಿನದ ಕಾರ್ಯಕ್ರಮದ ಬಗ್ಗೆ ಪ್ರಧಾನಿ ವಿಚಾರಿಸುತ್ತಿದ್ದರು ಎಂದು ಸರ್ದಿನ್ಹಾ ಅವರು ಹೇಳಿದ್ದಾರೆ.

ಪ್ರಧಾನಿಯವರು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ಮಾಜಿ ಟೆಲಿಕಾಂ ಸಚಿವ ಎ ರಾಜಾ ಅವರೊಂದಿಗೆ ಹಸ್ತಲಾಘವ ಮಾಡಿದರು. ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಡಿಎಂಕೆ ಸದಸ್ಯ ದಯಾನಿಧಿ ಮಾರನ್ ಮತ್ತು ಆರ್‌ಎಸ್‌ಪಿ ಸದಸ್ಯ ಎನ್‌ಕೆ ಪ್ರೇಮಚಂದ್ರನ್ ಅವರೊಂದಿಗೂ ಶುಭಾಶಯ ವಿನಿಮಯ ಮಾಡಿಕೊಂಡರು.

ಬಜೆಟ್ ಮಂಡನೆ ಮುಕ್ತಾಯವಾದ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯಿಂದ ಹೊರನಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com