ಮುಂದಿನ ವರ್ಷದ ಐಟಿ ರಿಟರ್ನ್ ಸಲ್ಲಿಸಲು ಕ್ರಿಪ್ಟೋ ಕರೆನ್ಸಿ ಆದಾಯಕ್ಕೆ ಪ್ರತ್ಯೇಕ ಕಾಲಮ್ ಇರುತ್ತದೆ: ಕೇಂದ್ರ
ಮುಂದಿನ ವರ್ಷದಿಂದ ಆದಾಯ ತೆರಿಗೆ ರಿಟರ್ನ್ಸ್ ಫಾರ್ಮ್ಗಳಲ್ಲಿ ಕ್ರಿಪ್ಟೋ ಕರೆನ್ಸಿ ಹೂಡಿಕೆಯಿಂದ ಬಂದ ಆದಾಯವನ್ನು ಬಹಿರಂಗಪಡಿಸಲು ಮತ್ತು ತೆರಿಗೆ ಪಾವತಿಸಲು ಪ್ರತ್ಯೇಕ ಕಾಲಮ್ ಹೊಂದಿರುತ್ತದೆ...
Published: 02nd February 2022 07:16 PM | Last Updated: 02nd February 2022 07:18 PM | A+A A-

ಕ್ರಿಪ್ಟೋ ಕರೆನ್ಸಿ (ಸಾಂಕೇತಿಕ ಚಿತ್ರ)
ನವದೆಹಲಿ: ಮುಂದಿನ ವರ್ಷದಿಂದ ಆದಾಯ ತೆರಿಗೆ ರಿಟರ್ನ್ಸ್ ಫಾರ್ಮ್ಗಳಲ್ಲಿ ಕ್ರಿಪ್ಟೋ ಕರೆನ್ಸಿ ಹೂಡಿಕೆಯಿಂದ ಬಂದ ಆದಾಯವನ್ನು ಬಹಿರಂಗಪಡಿಸಲು ಮತ್ತು ತೆರಿಗೆ ಪಾವತಿಸಲು ಪ್ರತ್ಯೇಕ ಕಾಲಮ್ ಹೊಂದಿರುತ್ತದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಅವರು ಬುಧವಾರ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ 2022-23ನೇ ಸಾಲಿನ ಬಜೆಟ್ ನಲ್ಲಿ ಕ್ರಿಪ್ಟೋಕರೆನ್ಸಿ ಹೂಡಿಕೆದಾರರಿಗೆ ಹೊಸ ತೆರಿಗೆ ಚೌಕಟ್ಟನ್ನು ಘೋಷಿಸಿದ್ದು, ಏಪ್ರಿಲ್ 1 ರಿಂದ ಅಂತಹ ವ್ಯವಹಾರಗಳ ಮೇಲೆ ಶೇ. 30 ರಷ್ಟು ತೆರಿಗೆ ಮತ್ತು ಸೆಸ್ ಹಾಗೂ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುತ್ತಿದೆ.
ಇದನ್ನು ಓದಿ: ಕೇಂದ್ರ ಬಜೆಟ್ 2022: ಬಡವರು, ಮಧ್ಯಮ ವರ್ಗ, ಯುವಕರಿಗೆ ಮೂಲಭೂತ ಸೌಕರ್ಯ ಒದಗಿಸಲು ಬಜೆಟ್ನಲ್ಲಿ ಒತ್ತು- ಪ್ರಧಾನಿ ಮೋದಿ
ಕ್ರಿಪ್ಟೋಕರೆನ್ಸಿ ಆದಾಯ ಯಾವಾಗಲೂ ತೆರಿಗೆಗೆ ಒಳಪಡುತ್ತದೆ. ಬಜೆಟ್ ಪ್ರಸ್ತಾಪಿಸಿರುವುದು ಹೊಸ ತೆರಿಗೆಯಲ್ಲ. ಆದರೆ ಈ ಸಮಸ್ಯೆಯ ಬಗ್ಗೆ ಸ್ಪಷ್ಟತೆ ನೀಡಲಾಗಿದೆ ಎಂದು ಬಜಾಜ್ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕ್ರಿಪ್ಟೋಕರೆನ್ಸಿಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿಗೆ ತರುವ ಬಗ್ಗೆ ಯೋಚಿಸುತ್ತಿದೆ. ಆದರೆ ಈ ಸಂಬಂಧ ಯಾವುದೇ ಕರಡು ಇನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿಲ್ಲ ಎಂದಿದ್ದಾರೆ.
ಯಾವುದೇ ವರ್ಚುವಲ್ ಅಥವಾ ಕ್ರಿಪ್ಟೋಕರೆನ್ಸಿ ಆಸ್ತಿಯ ವರ್ಗಾವಣೆಗೆ ಶೇ. 30 ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಕೇಂದ್ರ ಬಜೆಟ್ 2022 ರಲ್ಲಿ ಪ್ರಸ್ತಾಪಿಸಲಾಗಿದೆ.