ರಾಜ್ಯಕ್ಕೆ ಯೋಜನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ- ಡಿಕೆಶಿ: ಕೇಂದ್ರ ಬಜೆಟ್ ಬಗ್ಗೆ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ

ಮೋದಿ ಅವರ ಅವಧಿಯಲ್ಲಿ ದೇಶ ಸಾಲದ ಸುಳಿಗೆ ಸಿಲುಕುತ್ತಿದೆ. 9ಲಕ್ಷದ 40 ಸಾವಿರ ಕೋಟಿ ವಾರ್ಷಿಕ ಬಡ್ಡಿ ಕಟ್ಟ ಬೇಕಾಗುತ್ತದೆ. ಉದ್ಯೋಗ ಖಾತ್ರಿ ಯೋಜನೆಗೆ 38 ಸಾವಿರ ಕೋಟಿ ಕಡಿಮೆ ಹಣ ಇಟ್ಟಿದ್ದಾರೆ
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್

ಬೆಂಗಳೂರು/ಮೈಸೂರು:  ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನರ ನಿರೀಕ್ಷೆಗೆ ಸ್ಪಂದಿಸುವ ಮತ್ತು ಪ್ರಗತಿಗೆ ಪೂರಕವಾದ ಬಜೆಟ್ ಅಲ್ಲ. ರೈತರ, ಮಹಿಳೆಯರ ನಿರೀಕ್ಷೆಗಳನ್ನು ಬಜೆಟ್ ಈಡೇರಿಸಿಲ್ಲ ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಬಜೆಟ್ ಬಗ್ಗೆ ನಾನು ತುಂಬಾ ನಿರೀಕ್ಷೆ ಇಟ್ಟು ಕೊಂಡಿರಲಿಲ್ಲ. ಜನ ಸಾಮಾನ್ಯರು ತುಂಬ ನಿರೀಕ್ಷೆ ಇಟ್ಟುಕೊಂಡಿದ್ದರು, ಅವರ ನಿರೀಕ್ಷೆ ಈಡೇರಿಲ್ಲ. 34 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಕಳೆದ ವರ್ಷ ಮಂಡಿಸಿದ್ದರು. ಈ ವರ್ಷ 39 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿದ್ದಾರೆ. 4 ಲಕ್ಷದ 61 ಸಾವಿರ ಕೋಟಿ ರೂಪಾಯಿ ಹೆಚ್ಚಳದ ಬಜೆಟ್ ಮಂಡಿಸಿದ್ದಾರೆ ಎಂದು ಹೇಳಿದ್ದಾರೆ.

11 ಲಕ್ಷದ 87ಸಾವಿರ 180 ಕೋಟಿ ಸಾಲ ಮಾಡುತ್ತಿದ್ದಾರೆ. ಕಳೆದ ವರ್ಷ 135 ಲಕ್ಷ 87 ಸಾವಿರ ಕೋಟಿ ರೂಪಾಯಿ ಸಾಲ ಇತ್ತು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ 53 ಲಕ್ಷ 11 ಸಾವಿರ ಕೋಟಿ ಸಾಲ ಇತ್ತು. ಈಗ ಮಾಡುವ ಸಾಲ ಸೇರಿದರೆ 8 ವರ್ಷದಲ್ಲಿ 93ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ ಎಂದು ಬಜೆಟ್ ಕುರಿತಾಗಿ ವ್ಯಂಗ್ಯವಾಡಿದ್ದಾರೆ. ವಾರ್ಷಿಕ 9.40 ಲಕ್ಷ ಕೋಟಿ ಬಡ್ಡಿ ಪಾವತಿಸುತ್ತಿದೆ ಎಂದಿದೆ.

ಮೋದಿ ಅವರ ಅವಧಿಯಲ್ಲಿ ದೇಶ ಸಾಲದ ಸುಳಿಗೆ ಸಿಲುಕುತ್ತಿದೆ. 9ಲಕ್ಷದ 40 ಸಾವಿರ ಕೋಟಿ ವಾರ್ಷಿಕ ಬಡ್ಡಿ ಕಟ್ಟ ಬೇಕಾಗುತ್ತದೆ. ಉದ್ಯೋಗ ಖಾತ್ರಿ ಯೋಜನೆಗೆ 38ಸಾವಿರ ಕೋಟಿ ಕಡಿಮೆ ಹಣ ಇಟ್ಟಿದ್ದಾರೆ. ಕೊರೊನಾ ಸಂದರ್ಭದಲ್ಲಿ ಉದ್ಯೋಗ ಖಾತ್ರಿಗೆ ಹೆಚ್ಚು ಹಣ ಇಡಬೇಕಿತ್ತು. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿಲ್ಲ. ಕೋವಿಡ್ ಇರುವ ವೇಳೆ ಈ ಕ್ಷೇತ್ರಕ್ಕೆ ಹೆಚ್ಚು ಹಣ ಕೊಡಬೇಕಿತ್ತು. ಮೋದಿ ಕಾಲದಲ್ಲಿ ದೇಶ ಸುಭಿಕ್ಷವಾಗಿದೆ ಎಂದು ಬಿಜೆಪಿ ಹೇಳುತ್ತಿರುವುದು ಸುಳ್ಳು ಎಂದು ಆಡಳಿತ ಪಕ್ಷದ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.

ರಸಗೊಬ್ಬರದ ಸಬ್ಸಿಡಿಯನ್ನೆ ಕಡಿಮೆ ಮಾಡಿದ್ದಾರೆ. ಗೊಬ್ಬರದ ಬೆಲೆ ಜಾಸ್ತಿ ಆಗುವ ಮುನ್ಸೂಚನೆ ಬಜೆಟ್‍ನಲ್ಲಿ ಕಾಣುತ್ತಿದೆ. ವಾಜಪೇಯಿ ಕಾಲದಲ್ಲಿ ನದಿ ಜೋಡಣೆ ಮಾಡುತ್ತೇವೆ ಅಂತಾ ಹೇಳಿದ್ದರು, ಈಗ ಮತ್ತೆ ಅದನ್ನೆ ಹೇಳುತ್ತಿದ್ದಾರೆ. ಕರ್ನಾಟಕದ ನೀರಾವರಿ ಯೋಜನೆಗಳು ಹಾಗೇ ನೆನೆಗುದಿಗೆ ಬಿದ್ದಿವೆ. ಕರ್ನಾಟಕದ ನೀರಾವರಿ ಯೋಜನೆಗಳು ಹಾಗೇ ನೆನೆಗುದಿಗೆ ಬಿದ್ದಿವೆ. ಬಜೆಟ್ ಅಂದರೆ ದೇಶದ ಆದ್ಯತೆಗಳೇನೂ ಎಂಬುದು ಸ್ಪಷ್ಟವಾಗಿರಬೇಕು. ಆದರೆ ಆದ್ಯತೆಯೆ ಕಾಣುತ್ತಿಲ್ಲ ಎಂದಿದ್ದಾರೆ.

ಕರ್ನಾಟಕದ 25 ಸಂಸದರು ಹಾಗೂ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಬಜೆಟ್​ನಲ್ಲಿ ರಾಜ್ಯಕ್ಕೆ ಸುರಿಮಳೆಯನ್ನೇ ಸುರಿಸಿದ್ದಾರೆ. ರಾಜ್ಯಕ್ಕೆ ಹೆಸರೇ ಇಲ್ಲದಂತ ಬಜೆಟ್ ಕೊಡಿಸಿದ್ದಾರೆ ಅದಕ್ಕೆ ನಾವು ಅವರನ್ನ ಅಭಿನಂದಿಸ್ತೇನೆ ಎಂದು ಲೇವಡಿ ಮಾಡಿದರು.

ನಿರ್ಮಲಾ ಸೀತಾರಾಮ್ ನಮ್ಮ ರಾಜ್ಯದಿಂದ ಹೋಗಿದ್ದಾರೆ. ಇಲ್ಲಿನ ಋಣ ತೀರಿಸಬೇಕೆಂದು ಕಾರ್ಯಕ್ರಮ ಕೊಡಬೇಕಿತ್ತು. ಇದು ಕೇಂದ್ರದ ಬಜೆಟ್ ಅಲ್ಲ. ಇದೊಂದು ಕೋವಿಡ್ ಬಜೆಟ್ ಆಗಿದೆ. ಕೋವಿಡ್ ನಿಂದ ಜನಸಾಮಾನ್ಯರು ನರಳುತ್ತಿದ್ದಾರೆ. ಈ ಬಜೆಟ್​ ಕೂಡ ಇದೇ ರೀತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನರೇಗಾ ಹಣವನ್ನೂ ಕಡಿಮೆ ಮಾಡಿದರು. 2 ಕೋಟಿ ಉದ್ಯೋಗ ಕೊಡ್ತೇವೆ ಎಂದಿದ್ದರು. ಅದನ್ನು ಈಗ 60 ಲಕ್ಷಕ್ಕೆ ಇಳಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ರೈತರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಬಜೆಟ್​ನಿಂದ ರೈತರಿಗೆ ಏನಾದರೂ ಸಹಾಯವಾಗಿದೆಯಾ.? ವೇತನದವರಿಗೂ ರಿಲೀಫ್ ಇಲ್ಲ. 40 ವರ್ಷದಿಂದ ಇಂತಹ ರೋಗಿಷ್ಟ ಬಜೆಟ್ ನೋಡಿಲ್ಲ ಎಂದು ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com