2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮುಕ್ತಾಯ: ಸೋಮವಾರಕ್ಕೆ ಕಲಾಪ ಮುಂದೂಡಿಕೆ

2023-2024ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮುಕ್ತಾಯಗೊಂಡಿದ್ದು, ವಿಧಾನಮಂಡಲ ಜಂಟಿ ಅಧಿವೇಶನವನ್ನು ಸೋಮವಾರ ಬೆಳಗ್ಗೆಗೆ ಮುಂದೂಡಲಾಗಿದೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: 2023-2024ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮುಕ್ತಾಯಗೊಂಡಿದ್ದು, ವಿಧಾನಮಂಡಲ ಜಂಟಿ ಅಧಿವೇಶನವನ್ನು ಸೋಮವಾರ ಬೆಳಗ್ಗೆಗೆ ಮುಂದೂಡಲಾಗಿದೆ.

ಪ್ರಸಕ್ತ ಸಾಲಿನ ಬಜೆಟ್ ಮಂಡನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಕ್ತಾಯಗೊಳಿಸಿದ ಬಳಿಕ ಮಾತನಾಡಿದ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದರು.

ಈ ಬಾರಿಯ ಬಜೆಟ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸುಮಾರು 2.35 ಗಂಟೆಗಳ ಕಾಲ ಓದಿದರು. ಬಜೆಟ್'ನ ಮುಖ್ಯಾಂಶಗಳು ಇಂತಿದೆ...

ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲ ರಕ್ಷಣೆ ಒತ್ತು. ಭುವನೇಶ್ವರಿ ತಾಯಿಯ ಬೃಹತ್​ ಮೂರ್ತಿ ಮತ್ತು ಥೀಮ್​ ಪಾರ್ಕ್​ ಬೆಂಗಳೂರು ನಗರದಲ್ಲಿ ಅಭಿವೃದ್ಧಿ. ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ ಕಾರ್ಯಕ್ರಮದ ಅಡಿ ಪ್ರತಿ ಜಿಲ್ಲೆಯಲ್ಲಿ ಜನಪದ ಹಬ್ಬ ಆಯೋಜನೆ.

ಗಡಿ ಪ್ರದೇಶ ರಸ್ತೆ ಹಾಗೂ ಸಮಗ್ರ ಅಭಿವೃದ್ಧಿಗೆ 150 ಕೋಟಿ ಅನುದಾನ - 3ನೇ ವಿಶ್ವಕನ್ನಡ ಸಮ್ಮೇಳನ ದಾವಣೆಗೆರೆಯಲ್ಲಿ ಆಯೋಜನೆ - ಬೆಂಗಳೂರು ಕರಗ ಉತ್ಸವ ಆಚರಣೆಗೆ ಸರ್ಕಾರದಿಂದ ವಿಶೇಷ ಅನುದಾನ. - ಕೈಗಾರಿಕೋದ್ಯಮ ಆಡಳಿತ, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ರಕ್ಷಣೆಗಾಗಿ ಕನ್ನಡ ಭಾಷೆ ಸಮಗ್ರ ಅಭಿವೃದ್ದಿ ಅಧಿನಿಯಮ ಜಾರಿ.

ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಸಾಧಕರ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸಲು ಅವರ ಯಶೋಗಾಥೆಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಕೆ.  ಕನ್ನಡ ಪುಸ್ತಕ ಪ್ರಾಧಿಕಾರದ ಚಟುವಟಿಕೆಗಳಿಗೆ ಎರಡು ಕೋಟಿ ನೆರವು - ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ಅಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿವೇಕಾನಾಂದ ಜಂಟಿ ಬಾಧ್ಯತ ಗುಂಪುಗಳಿಗೆ ತಲಾ 10 ಸಾವಿರನಂತೆ ಸುತ್ತು ನಿಧಿ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು 1 ಲಕ್ಷದಿಂದ 5 ಲಕ್ಷದವರೆಗೆ ಸಹಾಯಧನ.

ಬದುಕು ದಾರಿ ಹೊಸ ಯೋಜನೆ ಅಡಿ, ವಿವಿಧ ಕಾರಣಗಳಿಂದ ವಿದ್ಯಾಭ್ಯಾಸ ತೊರೆದ ಯುವಜನರಿಗೆ ಐಟಿಐಗಳಲ್ಲಿ 3 ತಿಂಗಳ ವೃತ್ತಿಪರ ಸರ್ಟಿಫಿಕೇಟ್​ ತರಬೇತಿ ಪಡೆಯಲು ಮಾಸಿಕ 15000 ಶಿಷ್ಯವೇತನ ಒದಗಿಸುವುದು. -ಪದವಿ ಮುಗಿದ ಮೂರು ವರ್ಷದ ಬಳಿಕವೂ ಉದ್ಯೋಗ ದೊರೆಯದ ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು, ಯುವ ಸ್ನೇಹಿ ಹೊಸ ಯೋಜನೆ ಅಡಿ ತಲಾ 2000 ರೂ ಒಂದು ಬಾರಿ ಆರ್ಥಿಕ ನೆರವು.

ಕ್ರೀಡಾಂಗಣದಲ್ಲಿ ಮಹಿಳೆಯರು ಮತ್ತು ವಿಶೇಷ ಚೇತನರಿಗೆ ಸೂಕ್ತ ಸೌಕರ್ಯ ಹಾಗೂ ಹೊರಾಂಗಣ ಜಿಮ್​ ಸೌಲಭ್ಯಕ್ಕಾಗಿ 100 ಕೋಟಿ ಮೀಸಲು- ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸುವ ಖಾಸಗಿ ಕ್ರೀಡಾ ಸಂಸ್ಥೆಗಳಿಗೆ, 25 ಲಕ್ಷ ರೂ ಪ್ರೋತ್ಸಾಹ ಧನ - ಸಂಪ್ರದಾಯಿಕ ಕ್ರೀಡೆಗಳಾದ ಖೋಖೋ, ಕಬ್ಬಡಿ, ಕಂಬಳ, ಕುಸ್ತಿ, ಎತ್ತಿನಗಾಡಿ ಓಟ, ಉತ್ತೇಜಿಸಲು ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರಿಗೆ ಗ್ರಾಮೀಣ ಮಟ್ಟದ ಕ್ರೀಡಾಕೂಟ ಆಯೋಜನೆ.

ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗಳಿಗೆ ಮೂಲ ಸೌಕರ್ಯ ಒದಗಿಸಲು 100 ಕೋಟಿ- ರಾಮನಗರದ ರಾಮದೇವರ ಬೆಟ್ಟದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ -ನಾಡ ಪ್ರಭು ಕೆಂಪೇಗೌಡರ ಐತಿಜಾಸಿಕ ಕುರುಹುಗಳಿರುವ ತಾಣಗಳ ಪ್ರವಾಸಿ ಸರ್ಕಿಟ್​ ಒಂದನ್ನು ಈ ವರ್ಷ ಪ್ರಾರಂಭ -ಸಂತ ಸೇವಾಲಾಲ್​ ಜನ್ಮ ಸ್ಥಳ ದಾವಣೆಗೆರೆಯ ಸುರಗೊಂಡ ಕೊಪ್ಪವನ್ನು ಅಭಿವೃದ್ಧಿಗಾಗಿ 5 ಕೋಟಿ ಅನುದಾನ.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತ ಕ್ರೀಡಾಂಗಣವನ್ನು ನರೇಗಾ ಯೋಜನೆಯಲ್ಲಿ 5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ - ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಯುವ ಜನರಿಗೆ ಈ ಸಾಲಿನಿಂದ ಸ್ವಾಮಿ ವಿವೇಕನಾಂದ ಯುವ ಪ್ರಶಸ್ತಿ ಘೋಷಣೆ -ಒಲಂಪಿಕ್ಸ್​ ಹಾಗೂ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕ ಪಡೆಯುವ ಉದ್ದೇಶಕ್ಕೆ ಅತ್ಯುನ್ನತ ತರಬೇತಿ ಹಾಗೂ ಸಲಕರಣೆಗಾಗಿ 50 ಕೋಟಿ ವೆಚ್ಚದಲ್ಲಿ ಕರ್ನಾಟಕ ಒಲಂಪಿಕ್ಸ್​ ಕನಸಿನ ಯೋಜನಾ ನಿಧಿ ಸ್ಥಾಪನೆ.

ಹಂಪಿಯ ವಿಜಯ ವಿಠ್ಠಲ ದೇವಾಲಯ, ಪುರಂದರ ಮಂಟಪ, ವಿಜಯಪುರದ ಗೋಲ್​ಗುಂಬಜ್​, ಚಿಕ್ಕಬಳ್ಳಾಪುರದ ಭೋಗ ನಂದೀಶ್ವರ ದೇವಾಲಯ, ಬಾದಾಮಿ ಗುಹೆಗಳು, ಕಿತ್ತೂರು ಹಾಗೂ ಬೀದರ್​ ಕೋಟೆ ಅಭಿವೃದ್ಧಿ. ಈ ಸ್ಥಳಗಳಲ್ಲಿ ಅತ್ಯಾಧುನಿಕ ಬೆಳಕಿನ ವ್ಯವಸ್ಥೆಯ 3ಡಿ ಪ್ರೊಜೆಕ್ಷನ್​ ಮ್ಯಾಪಿಂಗ್​​, ಧ್ವನಿ ಮತ್ತು ಬೆಳಕು ಪ್ರದರ್ಶನಕ್ಕೆ 60 ಕೋಟಿ ಅನುದಾನ.

ದಾವಣಗೆರೆಯ ಚನ್ನಗಿರಿಯ ಹೊದಿಗೆರೆಯಲ್ಲಿರುವ ಷಹಾದಿ ಮಹಾರಾಜ್​ ಸಮಾಧಿ ಅಭಿವೃದ್ಧಿಗೆ 5 ಕೋಟಿ ಮೀಸಲು - ಹಾವೇರಿಯ ಬಂಕಾಪೂರದಲ್ಲಿ ಐತಿಹಾಸಿಕ 101 ಕಂಬಗಳ ನಗರೇಶ್ವರ ದೇವಸ್ಥಾನ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ -ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ರೋಪ್​ ವೇ ನಿರ್ಮಾಣ ಕಾಮಗಾರಿ ಈ ವರ್ಷ ಪೂರ್ಣಕ್ಕೆ ನಿರ್ಧಾರ.

ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿ ಹಾಗೂ ಎವಿಜಿಸಿ ನೀತಿ ಪರಿಷ್ಕರಣೆ -ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಟಾರ್ಟ್ ಅಪ್ ಪಾರ್ಕ್ ನ್ನು 30 ಕೋಟಿ ವೆಚ್ಚದಲ್ಲಿ ಸ್ಥಾಪನೆ -ಸಾಂಕ್ರಾಮಿಕ ಸನ್ನದ್ದತೆ ಕೇಂದ್ರ ಸ್ಥಪಾನೆಗೆ ಮೊದಲ ಹಂತದಲ್ಲಿ 10 ಕೋಟಿ ರೂ‌‌. - ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಸಲುವಾಗಿ 2023-24 ಸಾಲಿನಲ್ಲಿ ಒಟ್ಟು 61,488 ಕೋಟಿ ರೂ. ಅನುದಾನ.

ಹಂಪಿಯ ವಿಜಯ ವಿಠ್ಠಲ ದೇವಾಲಯ, ಪುರಂದರ ಮಂಟಪ, ವಿಜಯಪುರದ ಗೋಲ್​ಗುಂಬಜ್​, ಚಿಕ್ಕಬಳ್ಳಾಪುರದ ಭೋಗ ನಂದೀಶ್ವರ ದೇವಾಲಯ, ಬಾದಾಮಿ ಗುಹೆಗಳು, ಕಿತ್ತೂರು ಹಾಗೂ ಬೀದರ್​ ಕೋಟೆ ಅಭಿವೃದ್ಧಿ. ಈ ಸ್ಥಳಗಳಲ್ಲಿ ಅತ್ಯಾಧುನಿಕ ಬೆಳಕಿನ ವ್ಯವಸ್ಥೆಯ 3ಡಿ ಪ್ರೊಜೆಕ್ಷನ್​ ಮ್ಯಾಪಿಂಗ್​​, ಧ್ವನಿ ಮತ್ತು ಬೆಳಕು ಪ್ರದರ್ಶನಕ್ಕೆ 60 ಕೋಟಿ ಅನುದಾನ.

ಮೈಸೂರಿನ ಚಾಮುಂಡಿ ವಿಹಾರದ ಕ್ರೀಡಾಂಗಣದಲ್ಲಿ 2ವರೆ ಎಕರೆ ಜಾಗದಲ್ಲಿ ಅಂತರಾಷ್ಟ್ರೀಯ ಮಟ್ಟದ ಅಂತರಾಷ್ಟ್ರೀಯ ಮಟ್ಟದ ರಾಜ್ಯ ವಸ್ತು ಸಂಗ್ರಹಾಲಯ, ಕಲಾ ಗ್ಯಾಲರಿ ನಿರ್ಮಾಣಕ್ಕೆ 10 ಕೋಟಿ ವ್ಯಯ -ರಾಣಿ ಚೆನ್ನಭೈರದೇವಿ ಅವರ ಹೆಸರನ್ನು ಶಾಶ್ವತಗೊಳಿಸಲು ಹೊನ್ನಾವರದಲ್ಲಿ ಚೆನ್ನಭೈರ ದೇವಿ ಸ್ಮಾರಕ ಉದ್ಯಾನವನ.

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮನದಿಂದ ರೋರಿಚ್​ ಹಾಗೂ ದೇವಿಕ ರಾಣಿ ಎಸ್ಟೇಟ್​ನಲ್ಲಿ ವಿವಿಧ ಮೂಲಭೂತ ಸೌಕರ್ಯ ಒದಗಿಸಲು ಕ್ರಮ -ಮಂಚನಬೆಲೆ ಜಲಾಶಯದ ಹಿನ್ನೀರಿನ ಸ್ಥಳದಲ್ಲಿ 10 ಕೋಟಿ ವೆಚ್ಚದಲ್ಲಿ ಜಂಗಲ್​ ಲಾಡ್ಜ್ಸ್​ ಅಂಡ್​ ರೆಸಾರ್ಟ್​ ಲಿ ಮೂಲಕ ರೆಸಾರ್ಟ್​ ನಿರ್ಮಾಣ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಜ್ಯದ ಪ್ರಥಮ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ನಿರ್ಮಾಣ -ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲ ರಕ್ಷಣಾ ವಲಯಕ್ಕೆ ಪ್ರಸಕ್ತ ಸಾಲಿನಲ್ಲಿ 3,458 ಕೋಟಿ ಅನುದಾನ -5 ಹೆಚ್'ಪಿ ವರೆಗಿನ ವಿದ್ಯುತ್ ಸಂಪರ್ಕ ಹೊಂದಿದ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ಉಚಿತ ವಿದ್ಯುತ್, ಫಿಕ್ಸ್ಡ್ ಚಾರ್ಜ್ ನಲ್ಲಿ ಶೇ.50% ರಿಯಾಯಿತಿ.

ಕಲಬುರಗಿಯ ಸನ್ನತಿ ಚಂದ್ರಲಾಂಬಾ ಹಾಗೂ ಗಾಣಗಾಪುರ ದತ್ತಾತ್ರೇಯ ದೇವಾಲಯ, ಬನವಾಸಿಯ ಮಧುಕೇಶ್ವರ ದೇವಾಲಯಗಳ ಸಂಕೀರ್ಣ ಸಮಗ್ರ ಅಭಿವೃದ್ಧಿಗೆ ಅನುದಾನ - ಮಾನವ -ಆನೆ ಸಂಘರ್ಷ ತಡೆಯುವ ಸಲುವಾಗಿ ವಿವಿಧ ಕಾಮಗಾರಿಗಳಿಗೆ 155 ಕೋಟಿ ಅನುದಾನ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com