ಬಜೆಟ್ 2023: ಸರ್ಕಾರಿ ಸಂಸ್ಥೆಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ಸಾಮಾನ್ಯ ಗುರುತಿನ ಚೀಟಿಯಾಗಿ ‘ಪ್ಯಾನ್ ಕಾರ್ಡ್’ ಪರಿಗಣನೆ!
ಇನ್ನು ಮುಂದೆ ವ್ಯಾಪಾರಸ್ಥರು ಡಿಜಿಟಲ್ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ನ್ನು ಸಾಮಾನ್ಯ ಗುರುತಿನ ಚೀಟಿಯಾಗಿ ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಹೇಳಿದ್ದಾರೆ.
Published: 01st February 2023 01:13 PM | Last Updated: 01st February 2023 07:39 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಇನ್ನು ಮುಂದೆ ವ್ಯಾಪಾರಸ್ಥರು ಡಿಜಿಟಲ್ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ನ್ನು ಸಾಮಾನ್ಯ ಗುರುತಿನ ಚೀಟಿ ಆಗಿ ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಅವರು, ಸರ್ಕಾರಿ ಸಂಸ್ಥೆಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ಸಾಮಾನ್ಯ ಗುರುತಿನ ಚೀಟಿಯಾಗಿ ‘ಪ್ಯಾನ್ ಕಾರ್ಡ್’ ಪರಿಗಣನೆ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದರು.
ಪ್ಯಾನ್ ಕಾರ್ಡ್ನ್ನು ಸಾಮಾನ್ಯ ಕಾರ್ಡ್ ಆಗಿ ಬಳಕೆ ಮಾಡುವುದರಿಂದ ಬಂಡವಾಳದಾರರಿಗೆ ಮತ್ತಷ್ಟು ಸಹಕಾರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸರಕು ಮತ್ತು ಸೇವಾ ತೆರಿಗೆ ಗುರುತಿನ ಸಂಖ್ಯೆ (GSTIN), ತೆರಿಗೆದಾರರ ಗುರುತಿನ ಸಂಖ್ಯೆ (TIN), ತೆರಿಗೆ ಕಡಿತ ಖಾತೆ ಸಂಖ್ಯೆ (TDA), ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನಂತಹ ಗುರುತಿನ ಚೀಟಿಗಳನ್ನು ಬಳಸಲಾಗುತ್ತದೆ. ಇದೆಲ್ಲವನ್ನು ಸರಳೀಕೃತಗೊಳಿಸುವ ಉದ್ಧೇಶದಿಂದ ಪ್ಯಾನ್ಕಾರ್ಡ್ನ್ನು ಸಾಮಾನ್ಯ ಗುರುತಿನ ಚೀಟಿಯಾಗಿ ಬಳಸಬಹುದು ಎಂದು ಹೇಳಿದರು.