ತೈಲ ಖರೀದಿಗೆ ಇನ್ಮುಂದೆ ರೂಪಾಯಿಯಲ್ಲೇ ಪಾವತಿ: ಇರಾನ್ ಜೊತೆ ಭಾರತದ ಒಪ್ಪಂದ!

ಆಮದು ಮಾಡಿಕೊಳ್ಳುವ ಕಚ್ಚಾ ತೈಲಕ್ಕೆ ರೂಪಾಯಿಯಲ್ಲೇ ಪಾವತಿ ಮಾಡಲು ಭಾರತ ಇರಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

Published: 06th December 2018 12:00 PM  |   Last Updated: 06th December 2018 07:14 AM   |  A+A-


ಇನ್ನು ಮುಂದೆ ರೂಪಾಯಿಯಲ್ಲೇ  ತೈಲ ಖರೀದಿಗೆ ಪಾವತಿ: ಇರಾನ್ ಜೊತೆ ಭಾರತದ ಒಪ್ಪಂದ!

India inks Pact with Iran to pay crude bill in rupee

Posted By : SBV
Source : PTI
ನವದೆಹಲಿ: ಆಮದು ಮಾಡಿಕೊಳ್ಳುವ ಕಚ್ಚಾ ತೈಲಕ್ಕೆ ರೂಪಾಯಿಯಲ್ಲೇ ಪಾವತಿ ಮಾಡಲು ಭಾರತ ಇರಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
 
ಇರಾನ್ ಮೇಲೆ ನಿರ್ಬಂಧ ವಿಧಿಸಲಾಗಿದ್ದರೂ ಸಹ ಭಾರವೂ ಸೇರಿದಂತೆ 7 ರಾಷ್ಟ್ರಗಳಿಗೆ ಇರಾನ್ ನಿಂದಲೇ ತೈಲ ಆಮದು ಮಾಡಿಕೊಳ್ಳುವುದಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಭಾರತ-ಇರಾನ್ ಎಂಒಯುಗೆ ಸಹಿಹಾಕಿದೆ. 

ಇನ್ನು ಮುಂದಿನ ದಿನಗಳಲ್ಲಿ ಇರಾನ್ ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಭಾರತ ಇರಾನ್ ನ ನ್ಯಾಷನಲ್ ಇರಾನಿಯನ್ ಆಯಿಲ್ ಕೋ (ಎನ್ಐಒಸಿ) ಯ ಯುಸಿಒ ಬ್ಯಾಂಕ್ ಖಾತೆಗೆ ರೂಪಾಯಿಯಲ್ಲೇ ಪಾವತಿ ಮಾಡಲಿದೆ. ಅಮೆರಿಕ ನಿರ್ಬಂಧದ ಹೊರತಾಗಿಯೂ ಭಾರತ ಇರಾನ್ ಗೆ ಆಹಾರ ಧಾನ್ಯಗಳು, ಔಷಧ, ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡಬಹುದಾಗಿದೆ. 

ತೈಲ ಬೆಲೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಭಾರತ ಇರಾನ್ ನೊಂದಿಗೆ ತೈಲ ಆಮದಿಗೆ ರೂಪಾಯಿಯಲ್ಲೇ ಪಾವತಿ ಮಾಡಲು ಒಪ್ಪಿಗೆ ಸೂಚಿಸಿರುವುದು ಮಹತ್ವದ ನಡೆಯಾಗಿದೆ.
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp