ಈರುಳ್ಳಿ ಬೆಳೆಗಾರರಿಗೆ ಸಿಹಿ ಸುದ್ದಿ: ರಫ್ತು ಪ್ರೋತ್ಸಾಹ ಧನ ದ್ವಿಗುಣಗೊಳಿಸಿದ ಸರ್ಕಾರ

ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ಉತ್ತಮ ಬೆಲೆ ದೊರೆತು ಆದಾಯ ಹೆಚ್ಚುವಂತೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ಪ್ರೋತ್ಸಾಹಧನವನ್ನು ದ್ವಿಗುಣಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ಉತ್ತಮ ಬೆಲೆ ದೊರೆತು  ಆದಾಯ ಹೆಚ್ಚುವಂತೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಈರುಳ್ಳಿ  ರಫ್ತು ಪ್ರೋತ್ಸಾಹಧನವನ್ನು ದ್ವಿಗುಣಗೊಳಿಸಿದೆ.
ಪ್ರಸ್ತುತ, ಈರುಳ್ಳಿ ವ್ಯಾಪಾರಿಗಳು ಭಾರತದ ವ್ಯಾಪಾರಿಗಳ ರಫ್ತು ಯೋಜನೆ (ಎಂಇಐಎಸ್) ಅಡಿಯಲ್ಲಿ ತಾಜಾ ಬೆಳೆಗೆ 5 ಶೇಕಡಾ ರಫ್ತು ಪ್ರೋತ್ಸಾಹವಧನ ಪಡೆಯುತ್ತಿದ್ದಾರೆ.
ರೈತರ ಹಿತಾಸಕ್ತಿಯಿಂದ 5 ಶೇ.. ಬದಲಿಗೆ 10 ಶೇ. ಗೆ ಏರಿಸಲಾಗಿದೆ ಎಂದು ಅಧಿಕೃತ ಮೂಲಗಳುಇ ತಿಳಿಸಿದೆ. ಇದು ಸ್ಥಳೀಯ ಮಾರುಕಟ್ಟೆಗಳಲ್ಲಿ ಈರುಳ್ಳಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಲಿದೆ.
ಮಂಡಿಯಲ್ಲಿ  ಈರುಳ್ಳಿ ಸಗಟು ಬೆಲೆಗಳು ಕುಸಿದಿದ್ದು 'ಪರಿಸ್ಥಿತಿಯನ್ನು ನಿಯಂತ್ರಿಸಲು, ಈರುಳ್ಳಿ ರಫ್ತು ಉತ್ತೇಜಿಸಲು ಸರ್ಕಾರವು ನಿರ್ಧರಿಸಿದೆ. ಇದರಿಂದಾಗಿ ದೇಶೀಯ ಬೆಲೆ ಸ್ಥಿರವಾಗಿದೆ' ಎಂದು ಹೇಳಿಕೆ ತಿಳಿಸಿದೆ.
ಇತ್ತೀಚೆಗೆ ತಮ್ಮನ್ಬೆಳೆಗಳನ್ನು ಕಟಾವು ಮಾಡಿದ್ದ ರೈತರಿಗೆ ಹಾಗೂ ಇತ್ತೀಚೆಗೆ ತಮ್ಮ ಬೀಜಗಳನ್ನು ಬಿತ್ತಿದವರಿಗೆ ಸರ್ಕಾರದ ಕ್ರಮದಿಂದ ಅನುಕೂಲವಾಗಲಿದೆ.
ಜುಲೈನಲ್ಲಿ 2018 ರಲ್ಲಿ ಸರ್ಕಾರ ಈರುಳ್ಳಿ ಬೆಳೆಗೆ 5 ಶೇಕಡಾ ರಫ್ತು ಪ್ರೋತ್ಸಾಹವನ್ನು ಪರಿಚಯಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com