ಫ್ರಾನ್ಸ್ ಹಿಂದಿಕ್ಕಿದ ಭಾರತ, ಈಗ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರ

2017 ರ ವರ್ಷಾಂತ್ಯಕ್ಕೆ ಭಾರತದ ಜಿಡಿಪಿ 2.597 ಟ್ರಿಲಿಯನ್ ಡಾಲರ್ ನಷ್ಟಾಗಿದ್ದು, 2.582 ಟ್ರಿಲಿಯನ್ ಜಿಡಿಪಿ ಹೊಂದಿರುವ ಫ್ರಾನ್ಸ್ ನ್ನು ಹಿಂದಿಕ್ಕುವ ಮೂಲಕ ವಿಶ್ವದ 6 ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.

Published: 11th July 2018 12:00 PM  |   Last Updated: 11th July 2018 12:31 PM   |  A+A-


India Becomes World's 6th largest Economy

ಫ್ರಾನ್ಸ್ ನ್ನು ಹಿಂದಿಕ್ಕಿದ ಭಾರತ ಈಗ ವಿಶ್ವದ 6 ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರ

Posted By : SBV
Source : Online Desk
ಪ್ಯಾರಿಸ್: 2017 ರ ವರ್ಷಾಂತ್ಯಕ್ಕೆ ಭಾರತದ ಜಿಡಿಪಿ 2.597 ಟ್ರಿಲಿಯನ್ ಡಾಲರ್ ನಷ್ಟಾಗಿದ್ದು, 2.582 ಟ್ರಿಲಿಯನ್ ಜಿಡಿಪಿ ಹೊಂದಿರುವ ಫ್ರಾನ್ಸ್ ನ್ನು ಹಿಂದಿಕ್ಕುವ ಮೂಲಕ ವಿಶ್ವದ 6 ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.  

ವಿಶ್ವ ಬ್ಯಾಂಕ್ ನ ಅಪ್ಡೇಟೆಡ್ ಅಂಕಿ ಅಂಶಗಳ ಪ್ರಕಾರ ಜಿಡಿಪಿ ಲೆಕ್ಕದಲ್ಲಿ ಫ್ರಾನ್ಸ್ ನ್ನು ಹಿಂದಿಕ್ಕಿರುವ ಭಾರತದ ಜಗತ್ತಿನ 6 ನೇ ಬಲಿಷ್ಠ ಆರ್ಥಿಕತೆಯಾಗಿ ಹೊರಹೊಮ್ಮಿದ್ದರೆ, ನಂತರದ ಸ್ಥಾನದಲ್ಲಿ ಫ್ರಾನ್ಸ್ ಇದೆ. 

ಹಲವು ತ್ರೈಮಾಸಿಕಗಳಲ್ಲಿ ಕುಂಠಿತವಾಗಿದ್ದ ಭಾರತದ ಜಿಡಿಪಿ 2017 ರ ಜುಲೈ ನಂತರ ಚೇತರಿಕೆ ಕಂಡಿದೆ.  ಕೇವಾ 67 ಮಿಲಿಯನ್ ಜನಸಂಖ್ಯೆಯುಳ್ಳ ಫ್ರಾನ್ಸ್ ನ ಜಿಡಿಪಿ 2.582 ಟ್ರಿಲಿಯನ್ ಡಾಲರ್ ನಷ್ಟಿತ್ತು, ಭಾರತದ ತಲಾದಾಯಕ್ಕಿಂತ 20 ರಷ್ಟು ಹೆಚ್ಚಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಕಳೆದ ವರ್ಷ ಜಿಡಿಪಿಗೆ ಉತ್ಪಾದನಾ ವಲಯ ಹಾಗೂ ಕನ್ಸೂಮರ್ ಸ್ಪೆಂಡಿಂಗ್ (ಗ್ರಾಹಕ ಖರ್ಚು) ಹೆಚ್ಚು ಪರಿಣಾಮ ಬೀರಿದ್ದು,  ಜಿಎಸ್ ಟಿ ಹಾಗೂ ನೋಟು ನಿಷೇಧವನ್ನು ದೂಷಿಸಲಾಗಿತ್ತು.

ಕಳೆದ 10 ವರ್ಷಗಳಲ್ಲಿ ಭಾರತ ಜಿಡಿಪಿ ದ್ವಿಗುಣಗೊಂಡಿದ್ದು, ಏಷ್ಯಾದಲ್ಲಿ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಸಾಮರ್ಥ್ಯವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
Stay up to date on all the latest ವಾಣಿಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp