ದಾವೂದ್ ಸೋದರಿಯ ಮುಂಬೈ ಫ್ಲ್ಯಾಟ್ 1.80 ಕೋಟಿಗೆ ಮಾರಾಟ

ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂ ಸೊದರಿ ಹಸೀನಾ ಪಾರ್ಕರ್ ಗೆ ಸೇರಿದ್ದ ಮುಂಬೈನ ನಾಗ್ಪಾಡಾದಲ್ಲಿನ ಫ್ಲ್ಯಾಟ್ 1.80 ಕೋಟಿ ರು. ಗೆ ಮಾರಾಟವಾಗಿದೆ.

Published: 01st April 2019 12:00 PM  |   Last Updated: 01st April 2019 01:23 AM   |  A+A-


Dawood's sister's Mumbai flat sold for Rs 1.80 crore

ದಾವೂದ್ ಸೋದರಿಯ ಮುಂಬೈ ಫ್ಲ್ಯಾಟ್ 1.80 ಕೋಟಿಗೆ ಮಾರಾಟ

Posted By : RHN RHN
Source : ANI
ಮುಂಬೈ: ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂ ಸೊದರಿ ಹಸೀನಾ ಪಾರ್ಕರ್ ಗೆ ಸೇರಿದ್ದ ಮುಂಬೈನ ನಾಗ್ಪಾಡಾದಲ್ಲಿನ ಫ್ಲ್ಯಾಟ್ 1.80 ಕೋಟಿ ರು. ಗೆ ಮಾರಾಟವಾಗಿದೆ. ಇಂದು ಸ್ಮಗ್ಲಿಂಗ್ ಆಂಡ್ ಫಾರಿನ್ ಎಕ್ಸ್ ಚೇಂಜ್ ಮಲ್ಟಿಪ್ಯುಲೇಷನ್ಸ್ ಆಕ್ಟ್ (ಸಫೇಮಾ) ಅಡಿಯಲ್ಲಿ ಪ್ಲ್ಯಾಟ್ ಅನ್ನು ಹರಾಜು ಹಾಕಲಾಗಿದೆ.

ದಾವೂದ್ ಇಬ್ರಾಹಿಂನ ಕಿರಿಯ ಸಹೋದರಿ ಹಸೀನಾ ಪಾರ್ಕರ್ ಹೃದಯಾಘಾತದಿಂದಾಗಿ 2014 ರಲ್ಲಿ ನಿಧನರಾಗಿದ್ದರು. ಪಾರ್ಕರ್ ತಾವು ನಾಗ್ಪಾಡ್ ನಲ್ಲಿನ ಇದೇ ಫ್ಲ್ಯಾಟ್ ನಲ್ಲಿ ಕೊನೆಯುಸಿರೆಳಿದಿದ್ದರು. ಅ;;ಅದೆ ದಾವೂದ್ ಸೋದರ ಇಕ್ಬಾಲ್ ಕನ್ವರ್ ಅವರನ್ನು ಇದೇ ಫ್ಲ್ಯಾಟ್ ನಿಂದ ಎನ್ ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿ ಪ್ರದೀಪ್ ಶರ್ಮಾ 2017ರಲ್ಲಿ ಬಂಧಿಸಿದ್ದರು

ಸಫೇಮಾ ಕಾಯ್ದೆಯ  68-ಎಫ್ ವಿಭಾಗದಡಿಯಲ್ಲಿ ದೇಶಭ್ರಷ್ಟರ ಸಂಬಂಧಿಗಳಿಗೆ ಸೇರಿದ ಆಸ್ತಿಗಳನ್ನು ಸಹ ವಶಕ್ಕೆ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಹಾಗಾಗಿ ಇದೇ ಕಾನೂನಿನನ್ವಯ ವಶಕ್ಕೆ ಪಡೆಯಲಾದ ಫ್ಲ್ಯಾಟ್ ಅನ್ನು ಇಂದು ಹರಾಜಿಗಿಡಲಾಗಿತ್ತು.
Stay up to date on all the latest ವಾಣಿಜ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp