ಬರೋಡಾ ಬ್ಯಾಂಕ್ ನೊಂದಿಗೆ ವಿಜಯ, ದೇನಾ ಬ್ಯಾಂಕ್ ಗಳ ವಿಲೀನ: ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ಎಂಬ ಖ್ಯಾತಿ

ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ಇಂದು ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನೊಂದಿಗೆ ವಿಲೀನಗೊಳ್ಳುವ ಮೂಲಕ ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ...
ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಜಯ, ದೇನಾ ಬ್ಯಾಂಕ್ ಗಳ ವಿಲೀನ
ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಜಯ, ದೇನಾ ಬ್ಯಾಂಕ್ ಗಳ ವಿಲೀನ
ನವದೆಹಲಿ: ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ಇಂದು ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನೊಂದಿಗೆ ವಿಲೀನಗೊಳ್ಳುವ ಮೂಲಕ ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ಆಗಲಿದೆ.
ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ಗಳ ಠೇವಣಿದಾರರು ಸೇರಿದಂತೆ ಗ್ರಾಹಕರನ್ನು ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಬ್ಯಾಂಕ್ ಆಫ್ ಬರೋಡಾ ಗ್ರಾಹಕರೆಂದು ಪರಿಗಣಿಸಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದೆ.
ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕೇಂದ್ರ ಸರ್ಕಾರ ಕಳೆದ ವಾರ ಹೆಚ್ಚುವರಿ ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗಿಸಲು ಬ್ಯಾಂಕ್ ಆಫ್ ಬರೋಡಾದ ಬಂಡವಾಳ ಬುನಾದಿ ಹೆಚ್ಚಿಸಲು 5,042 ಕೋಟಿ ರೂಪಾಯಿ ಪೂರೈಸಲು ನಿರ್ಧರಿಸಿತ್ತು.
ಬ್ಯಾಂಕುಗಳ ವಿಲೀನ ಯೋಜನೆಯಂತೆ, ವಿಜಯ ಬ್ಯಾಂಕ್ ಶೇರುದಾರರು, ಹೊಂದಿರುವ ಪ್ರತಿ ಸಾವಿರ ಶೇರುಗಳಿಗೆ ಬ್ಯಾಂಕ್ ಆಫ್ ಬರೋಡಾದ 402 ಈಕ್ವಿಟಿ ಶೇರುಗಳನ್ನು ಪಡೆಯಲಿದ್ದಾರೆ. ದೇನಾ ಬ್ಯಾಂಕ್ ವಿಷಯದಲ್ಲೂ ಪ್ರತಿ 1000 ಶೇರು ಹೊಂದಿದವರಿಗೆ ಬ್ಯಾಂಕ್ ಆಫ್ ಬರೋಡಾದ 110 ಈಕ್ವಿಟಿ ಶೇರುಗಳನ್ನು ಪಡೆಯಲಿದ್ದಾರೆ. 
ಸರ್ಕಾರ ಕಳೆದ ವರ್ಷದ ಸೆಪ್ಟಂಬರ್ ನಲ್ಲಿ ಮೊಟ್ಟ ಮೊದಲ ಬಾರಿಗೆ ದೇಶದ ಮೂರು ಬ್ಯಾಂಕುಗಳ ವಿಲೀನ ಪ್ರಕ್ರಿಯೆಯ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಈ ಮೂರು ಬ್ಯಾಂಕುಗಳ ಒಟ್ಟು ವಹಿವಾಟು 14.8 ಲಕ್ಷ ಕೋಟಿರೂಪಾಯಿಯಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಐಸಿಐಸಿಐ ಬ್ಯಾಂಕ್ ನಂತರ ಮೂರನೇ ಅತಿದೊಡ್ಡ ಬ್ಯಾಂಕ್ ಇದಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com