ಜೆಟ್‌ ಏರ್‌ವೇಸ್ ಅಂತಾರಾಷ್ಟ್ರೀಯ ಹಾರಾಟ ಅರ್ಹತೆ ಕುರಿತು ಸರ್ಕಾರ ಪರಿಶೀಲನೆ

ಅಂತಾರಾಷ್ಟ್ರೀಯ ಹಾರಾಟಕ್ಕೆ ಜೆಟ್‌ ಏರ್‌ವೇಸ್‌ ಸಮಕಾಲೀನ ಅರ್ಹತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಅಂತಾರಾಷ್ಟ್ರೀಯ ಹಾರಾಟಕ್ಕೆ ಜೆಟ್‌ ಏರ್‌ವೇಸ್‌ ಸಮಕಾಲೀನ ಅರ್ಹತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಬುಧವಾರ ಹೇಳಿದ್ದಾರೆ. 
ಈ ವಿಮಾನಯಾನ ಸಂಸ್ಥೆ ಪ್ರಸ್ತುತ 15ಕ್ಕಿಂತ ಕಡಿಮೆ ವಿಮಾನಗಳ ಹಾರಾಟ ನಡೆಸುತ್ತಿದೆ. ಅಂತಾರಾಷ್ಟ್ರೀಯ ಹಾರಾಟಕ್ಕೆ ಅರ್ಹತೆಯನ್ನು ಸಚಿವಾಲಯ ಪರಿಶೀಲಿಸುತ್ತಿದೆ ಎಂದು ಖರೋಲಾ ತಿಳಿಸಿದ್ದಾರೆ.
ಈ ಮಧ್ಯೆ ಋಣದಲ್ಲಿರುವ ವಿಮಾನಯಾನ ಸಂಸ್ಥೆ ಪ್ರಸ್ತುತ 28 ವಿಮಾನಗಳ ಕಾರ್ಯಾಚರಣೆ ನಡೆಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಅಗತ್ಯ ವಿಮಾನಗಳೊಂದಿಗೆ ಸಂಬಂಧಿತ ಮಾರ್ಗಸೂಚಿ ಅನುಸಾರ ವಿಮಾನಯಾನ ಸಂಸ್ಥೆ ಕಾರ್ಯಚಾರಣೆ ನಡೆಸುತ್ತಿದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಒಪ್ಪಂದದನ್ವಯ ಪಾವತಿ ಸಾಧ್ಯವಾಗದ ಹಿನ್ನೆಲೆಯಲ್ಲಿ 15 ಹೆಚ್ಚುವರಿ ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಜೆಟ್ ಏರ್‌ವೇಸ್‌ ತಿಳಿಸಿದೆ.
ಒಪ್ಪಂದದನ್ವಯ ಪಾವತಿ ಮಾಡದ ಕಾರಣ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಜೊತೆಗೆ ಪೈಲಟ್ ಹಾಗೂ ಸಿಬ್ಬಂದಿಯ ದೀರ್ಘಾವಧಿ ವೇತನ ಪಾವತಿ ಕೂಡ ಬಾಕಿ ಇದೆ.
ಅಂತಾರಾಷ್ಟ್ರೀಯ ಹಾರಾಟಕ್ಕೆ ಅನುಮತಿ ಪಡೆಯಲು ವಿಮಾನಯಾನ ಸಂಸ್ಥೆ 20 ಕ್ಕೂ ಹೆಚ್ಚು ವಿಮಾನಗಳ ಹಾರಾಟ ನಡೆಸಬೇಕಿದೆ. ಒಪ್ಪಂದ ಪಾವತಿ ಮಾಡದ ಕಾರಣ ಪ್ರಸ್ತುತ ಜೆಟ್ ಏರ್‌ವೇಸ್ ನ ಅಗತ್ಯ ಸಂಖ್ಯೆಗಳ ವಿಮಾನಗಳ ಹಾರಾಟವಿಲ್ಲ. 
ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಇತರ ಬ್ಯಾಂಕ್‌ ಗಳು ವಿಮಾನಯಾನ ಸಂಸ್ಥೆಯ ನಿಯಂತ್ರಣ ಪಡೆದು 1,500 ಕೋಟಿ ಬಂಡವಾಳ ಹೂಡುವ ಒಪ್ಪಂದಕ್ಕೆ ಮಾರ್ಚ್ 25 ರಂದು ಜೆಟ್‌ ಏರ್‌ವೇಸ್‌ ಮಂಡಳಿ ಅನುಮೋದನೆ ನೀಡಿದೆ. 
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಚುನಾವಣಾ ಆಯೋಗ ಏರ್ ಇಂಡಿಯಾಗೆ ನೀಡಿರುವ ನೊಟೀಸ್ ಗೆ ಪ್ರತಿಕ್ರಯಿಸಿರುವ ಖರೋಲಾ, ಬೋರ್ಡಿಂಗ್ ಪಾಸ್ ಅನ್ನು ಹಿಂಪಡೆದಿದ್ದು ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಮಾದರಿ ನೀತಿ ಸಂಹಿತೆ ಜಾರಿ ಹಾಗೂ ಕಾನೂನು ನಿಯಮಾವಳಿಗಳ ಪಾಲನೆ ಮಾಡದಿರುವ ಸಂಬಂಧ ಖರೋಲಾ ಮತ್ತು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com