ಅನುಮತಿ ಇಲ್ಲದೆ ಗೂಗಲ್ ಪೇ ಹೇಗೆ ಕಾರ್ಯನಿರ್ವಹಿಸುತ್ತಿದೆ?: ಆರ್ ಬಿಐಗೆ ದೆಹಲಿ ಹೈಕೋರ್ಟ್ ಪ್ರಶ್ನೆ

ಯಾವುದೇ ಅನುಮತಿ ಇಲ್ಲದೆ ಗೂಗಲ್ ಮೊಬೈಲ್ ಪೇಮೆಂಟ್ ಆ್ಯಪ್. ಜಿಪೇ ಕಾರ್ಯನಿರ್ವಹಿಸುವುದಾದರು ಹೇಗೆ? ಎಂದು ದೆಹಲಿ ಹೈಕೋರ್ಟ್...

Published: 10th April 2019 12:00 PM  |   Last Updated: 10th April 2019 07:27 AM   |  A+A-


How is Google's GPay operating without authorisation: Delhi  HC asks RBI

ಸಾಂದರ್ಭಿಕ ಚಿತ್ರ

Posted By : LSB LSB
Source : PTI
ನವದೆಹಲಿ: ಯಾವುದೇ ಅನುಮತಿ ಇಲ್ಲದೆ ಗೂಗಲ್ ಮೊಬೈಲ್ ಪೇಮೆಂಟ್ ಆ್ಯಪ್. ಜಿಪೇ ಕಾರ್ಯನಿರ್ವಹಿಸುವುದಾದರು ಹೇಗೆ? ಎಂದು ದೆಹಲಿ ಹೈಕೋರ್ಟ್ ಬುಧವಾರ ಆರ್ ಬಿಐ ಗೆ ಪ್ರಶ್ನಿಸಿದೆ.

ಗೂಗಲ್ ಪೇ ಅಧಿಕೃತ ಮಾನ್ಯತೆ ಹೊಂದಿಲ್ಲ ಮತ್ತು ಪಾವತಿ ಹಾಗೂ ಸೆಟಲ್ಮೆಂಟ್ ಕಾಯ್ದೆ ಉಲ್ಲಂಘಿಸಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಮತ್ತು ನ್ಯಾಯಮೂರ್ತಿ ಎಜೆ ಬಂಬಾನಿ ಅವರನ್ನೊಳಗೊಂಡ ಪೀಠ, ಅನುಮತಿ ಇಲ್ಲದೆ ಹಣ ವರ್ಗಾವಣೆ ಸೌಲಭ್ಯ ನೀಡುತ್ತಿರುವುದು ಹೇಗೆ? ಎಂದು ಪ್ರಶ್ನಿಸಿದೆ.

ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಆರ್ ಬಿಐ ಹಾಗೂ ಗೂಗಲ್ ಇಂಡಿಯಾಗೆ ಕೋರ್ಟ್ ನೋಟಿಸ್ ನೀಡಿ, ವಿಚಾರಣೆಯನ್ನು ಮುಂದೂಡಿದೆ.

ರಿಸರ್ವ್ ಬ್ಯಾಂಕ್ ಮಾರ್ಚ್ 20, 2019ರಂದು ಬಿಡುಗಡೆ ಮಾಡಿದ ಅಧಿಕೃತ ಪಾವತಿ ಸಿಸ್ಟಂ ಆಪರೇಟರ್ ಪಟ್ಟಿಯಲ್ಲಿ ಗೂಗಲ್ ಪೇ ಸ್ಥಾನ ಪಡೆಯದಿರುವ ಅಭಿಜಿತ್ ಮಿಶ್ರಾ ಎಂಬುವವರು ಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದರು.
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp