ಜೆಟ್ ಏರ್ವೇಸ್ ನ ಎಲ್ಲಾ ವಿಮಾನಗಳು ತಾತ್ಕಾಲಿಕ ಸ್ಥಗಿತ?!

ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್ವೇಸ್ ನ ಎಲ್ಲಾ ವಿಮಾನಗಳೂ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

Published: 16th April 2019 12:00 PM  |   Last Updated: 16th April 2019 02:26 AM   |  A+A-


Jet Airways likely to cancel all flights temporarily

ಜೆಟ್ ಏರ್ವೇಸ್ ನ ಎಲ್ಲಾ ವಿಮಾನಗಳು ತಾತ್ಕಾಲಿಕ ಸ್ಥಗಿತ?!

Posted By : SBV SBV
Source : Online Desk
ಮುಂಬೈ: ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್ವೇಸ್ ನ ಎಲ್ಲಾ ವಿಮಾನಗಳೂ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. 

ಆಂಗ್ಲ ಖಾಸಗಿ ಮಾಧ್ಯಮವೊಂದು ಈ ಬಗ್ಗೆ ವರದಿ ಪ್ರಕಟಿಸಿದೆ. ಈಗಾಗಲೇ 8,000 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್ವೇಸ್, ಪ್ರಸ್ತುತ 10 ಕ್ಕಿಂತಲೂ ಕಡಿಮೆ ವಿಮಾನಗಳನ್ನು ಕಾರ್ಯಾಚರಣೆಯಲ್ಲಿಟ್ಟಿದೆ. ಈಗ ಜೆಟ್ ಏರ್ವೇಸ್ ನ ಎಲ್ಲಾ ವಿಮಾನಗಳು ತಾತ್ಕಾಲಿಕವಗಿ ಸ್ಥಗಿತಗೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಜೆಟ್ ಏರ್ವೇಸ್ ವಿಮಾನಗಳ ಕಾರ್ಯಾಚರಣೆಗೂ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಇದೇ ವೇಳೆ ಜೆಟ್ ಏರ್ವೇಸ್ ನ್ನು ಸಾಲದ ಸುಳಿಯಿಂದ ಹೊರತರಲು ಯೋಜನೆ ರೂಪಿಸಲಾಗುತ್ತಿದೆ. 
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp