ಜೇಟ್ ಏರ್ ವೇಸ್ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಅರುಣ್ ಜೇಟ್ಲಿ ಭರವಸೆ- ಸಿಇಒ ವಿನಯ್ ದುಬೆ

ಆರ್ಥಿಕ ಸಮಸ್ಯೆಯಿಂದಾಗಿ ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವ ಜೇಟ್ ಏರ್ ವೇಸ್ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ ಎಂದು ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್ ದುಬೆ ಹೇಳಿದ್ದಾರೆ.
ಅರುಣ್ ಜೇಟ್ಲಿ ಭೇಟಿ ಮಾಡಿದ ನಿಯೋಗ
ಅರುಣ್ ಜೇಟ್ಲಿ ಭೇಟಿ ಮಾಡಿದ ನಿಯೋಗ

ನವದೆಹಲಿ: ಆರ್ಥಿಕ ಸಮಸ್ಯೆಯಿಂದಾಗಿ ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವ  ಜೇಟ್ ಏರ್ ವೇಸ್ ಸಮಸ್ಯೆ ಪರಿಹಾರಕ್ಕೆ  ಸೂಕ್ತ ಕ್ರಮ ಕೈಗೊಳ್ಳುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ ಎಂದು ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್ ದುಬೆ ಹೇಳಿದ್ದಾರೆ.

ಮಹಾರಾಷ್ಟ್ರ ಹಣಕಾಸು ಸಚಿವ ಸುದೀರ್ ಮುಂಗಟ್ಟಿವಾರ್, ನಾಗರಿಕ ವಿಮಾನಯಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ, ಏರ್ ಲೈನ್ಸ್ ಮುಖ್ಯ ಹಣಕಾಸು ಅಧಿಕಾರಿ ಅಮಿತ್ ಅಗರ್ ವಾಲ್  , ಪೈಲಟ್ಸ್ ಗಳ ಪ್ರತಿನಿಧಿಗಲು , ಎಂಜಿನಿಯರ್ ಗಳು ಹಾಗೂ ಕ್ಯಾಬಿನ್ ಸಿಬ್ಬಂದಿ ಮತ್ತು ಗ್ರೌಂಡ್ ಸಿಬ್ಬಂದಿಯ ಒಕ್ಕೂಟದೊಂದಿಗೆ ವಿನಯ್ ದುಬೆ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದುಬೆ,  ಸಿಬ್ಬಂದಿಗಳಿಗೆ ಕನಿಷ್ಠ  ಒಂದು ತಿಂಗಳ ವೇತನವಾದರೂ ಪಾವತಿಸಬೇಕಾದ ಅಗತ್ಯವಿದೆ. ಒಂದು ಅಥವಾ ಅದಕ್ಕಿಂತಲೂ ಹೆಚ್ಚಿನ ತಿಂಗಳ ವೇತನವನ್ನು ಪಾವಸುವ ಬಗ್ಗೆ ವಿಶ್ವಾಸವಿದೆ. ಈ ಸಮಸ್ಯೆ ಪರಿಹಾರಕ್ಕೆ ಗಮನ ಹರಿಸುವುದಾಗಿ ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಬುಧವಾರದಿಂದ ಜೇಟ್ ಏರ್ ವೇಸ್ ಎಲ್ಲಾ ಕಾರ್ಯಾಚಾರಣೆಯನ್ನು ಸ್ಥಗಿತಗೊಳಿಸಿದ್ದು, ಯಾವುದೇ ಸಿಬ್ಬಂದಿಗೂ ಮಾರ್ಚ್ ತಿಂಗಳ ವೇತನವನ್ನು ಪಾವತಿಸಿಲ್ಲ. ಸಿಬ್ಬಂದಿಗೆ ಒಂದು ತಿಂಗಳ ವೇತನಕ್ಕೆ 170 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ದುಬೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com