ಟಿಕ್ ಟಾಕ್ ಬ್ಯಾನ್: ಚೀನಾ ಮೂಲದ ಬೈಟ್ ಡ್ಯಾನ್ಸ್ ಕಂಪನಿಗೆ ದಿನಕ್ಕೆ 4.5 ಕೋಟಿ ರೂ ನಷ್ಟ!

ಚೀನಾ ಮೂಲದ ಖ್ಯಾತ ವಿಡಿಯೋ ಆ್ಯಪ್ ಟಿಕ್ ಟಾಕ್ ನಿಷೇಧದಿಂದಾಗಿ ಮಾಲೀಕತ್ವ ಸಂಸ್ಥೆ ಬೈಟ್ ಡ್ಯಾನ್ಸ್ ಗೆ ಈ ವರೆಗೂ 4.5 ಕೋಟಿ ರೂ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಚೀನಾ ಮೂಲದ ಖ್ಯಾತ ವಿಡಿಯೋ ಆ್ಯಪ್ ಟಿಕ್ ಟಾಕ್ ನಿಷೇಧದಿಂದಾಗಿ ಮಾಲೀಕತ್ವ ಸಂಸ್ಥೆ ಬೈಟ್ ಡ್ಯಾನ್ಸ್ ಗೆ ಈ ವರೆಗೂ 4.5 ಕೋಟಿ ರೂ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಟಿಕ್ ಟಾಕ್ ನಿಷೇಧ ಸಂಬಂಧ ಕೋರ್ಟ್ ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಈ ಕುರಿತು ವಾದ ಮಂಡಿಸಿರುವ ಬೈಟ್ ಡ್ಯಾನ್ಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಆ್ಯಪ್ ನಿಷೇಧದ ಬಳಿಕ ಕೇವಲ ಬೈಟ್ ಡ್ಯಾನ್ಸ್ ಗೆ ಮಾತ್ರವಲ್ಲ, ಈ ಆ್ಯಪ್ ಬಳಕೆ ಮಾಡುತ್ತಿದ್ದ ಸುಮಾರು 2 ಮಿಲಿಯನ್ ಗ್ರಾಹಕರಿಗೂ ತೊಂದರೆಯಾಗುತ್ತಿದೆ. ಆ್ಯಪ್ ನ ಸುರಕ್ಷತೆ ಕುರಿತಂತೆ ಬೈಟ್ ಡ್ಯಾನ್ಸ್ ಸಂಸ್ಥೆ ಸಾಕಷ್ಟು ಹಣ ಸುರಿದಿದ್ದು, ಆ್ಯಪ್ ನಿಷೇಧದಿಂದಾಗಿ ಅದರ ಮಾಲೀಕತ್ವ ಸಂಸ್ಥೆ ಬೈಟ್ ಡ್ಯಾನ್ಸ್ ಗೆ 4.5 ಕೋಟಿ ರೂ ನಷ್ಟವಾಗಿದೆ ಎಂದು ವಾದ ಮಂಡಿಸಿದ್ದಾರೆ.
ಈ ಹಿಂದೆ ಟಿಕ್ ಟಾಕ್ ಆ್ಯಪ್ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್ ಗೆ ಒಪ್ಪಿಸಿತ್ತು. ಅಲ್ಲದೆ ಏಪ್ರಿಲ್ 24ರಂದು ಈ ಕುರಿತು ನಿರ್ಧಾರ ಕೈಗೊಳ್ಳುವಂತೆ ನಿರ್ದೇಶ ನೀಡಿತ್ತು. 
ಪ್ರಕರಣದ ವಿಚಾರಣೆ ನಡೆಸಿದ್ದ, ಸಿಜೆಐ ರಂಜನ್ ಗಗೋಯ್, ಜಸ್ಟಿಸ್ ದೀಪಕ್ ಗುಪ್ತಾ, ಸಂಜೀವ್ ಖನ್ನಾ ಅವರ ನೇತೃತ್ವದ ಪೀಠ ವಿಚಾರಣೆ ನಡೆಸಿತು. ಈ ವೇಳೆ ಟಿಕ್ ಟಾಕ್ ಆ್ಯಪ್ ನಿಷೇಧ ಮಾಡುವಂತೆ ಸಲ್ಲಿಸಲಾಗಿರುವ ಅರ್ಜಿಯಲ್ಲಿರುವ ತಕರಾರುಗಳನ್ನು ಬೈಟ್ ಡ್ಯಾನ್ಸ್ ಸಂಸ್ಥೆ ಕೂಡ ಕೋರ್ಟ್ ನಲ್ಲಿ ಪ್ರಶ್ನಿಸಬಹುದು. ಒಂದು ವೇಳೆ 24ರಂದು ಕುರಿತು ನಿರ್ಧಾರ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ವಿಫಲವಾದರೆ, ಆಗ ಆ್ಯಪ್ ಬ್ಯಾನ್ ಕುರಿತಂತೆ ನೀಡಿದ್ದ ಆದೇಶ ರದ್ದುಗೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com