ಚೀನಾದಿಂದ ಹಾಲು, ಹಾಲು ಉತ್ಪನ್ನಗಳ ಆಮದು ಮೇಲೆ ನಿಷೇಧ

ಚೀನಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದು ಮೇಲೆ ಮುಂದಿನ ಮೂರು ತಿಂಗಳ ವರೆಗೆ ಭಾರತ ಸರ್ಕಾರ ನಿಷೇಧ ಹೇರಿದೆ.
ಚೀನಾದಿಂದ ಹಾಲು, ಹಾಲು ಉತ್ಪನ್ನಗಳ ಆಮದು ಮೇಲೆ ನಿಷೇಧ
ಚೀನಾದಿಂದ ಹಾಲು, ಹಾಲು ಉತ್ಪನ್ನಗಳ ಆಮದು ಮೇಲೆ ನಿಷೇಧ
ನವದೆಹಲಿ: ಚೀನಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದು ಮೇಲೆ ಮುಂದಿನ ಮೂರು ತಿಂಗಳ ವರೆಗೆ ಭಾರತ ಸರ್ಕಾರ ನಿಷೇಧ ಹೇರಿದೆ.
ಚೀನಾದಿಂದ ಆಮದಾಗುವ ಕ್ಷೀರ ಉತ್ಪನ್ನಗಳಲ್ಲಿ ಪ್ಲಾಸ್ಟಿಕ್‌ ಹಾಗೂ ರಸಗೊಬ್ಬರಗಳ ತಯಾರಿಕೆಗೆ ಬಳಸುವ ಮೆಲಾಮೈನ್‌ ಎಂಬ ಹಾನಿಕಾರಕ ರಾಸಾಯನಿಕ ಅಂಶ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ನಿಷೇಧ ಬುಧವಾರ ಸಂಜೆಯಿಂದಲೇ ಜಾರಿಗೆ ಬರಲಿದೆ ಎಂದು ವಿದೇಶಾಂಗ ವಾಣಿಜ್ಯ ವಹಿವಾಟು ಮಹಾ ನಿರ್ದೇಶನಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.
ಚೀನಾದಿಂದ ಆಮದಾಗುವ ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಮೆಲಾಮೈನ್‌  ಕಂಡು ಬಂದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ 2008ರ ಅಕ್ಟೋಬರ್ 24ರಂದು ಭಾರತ ನಿಷೇಧ ಹೇರಿತ್ತು. ಈ ನಿಷೇಧ ಆಗಿಂದಾಗ್ಗೆ ವಿಸ್ತರಣೆಯಾಗುತ್ತಿತ್ತು. ಈ ಉತ್ಪನ್ನಗಳ ಮೇಲಿನ ನಿರ್ಬಂಧಗಳನ್ನು 2018ರ ಡಿಸೆಂಬರ್ 24ರಂದು ಮಾರ್ಪಾಡು ಮಾಡಲಾಗಿತ್ತು. ಇದು ಏಪ್ರಿಲ್‌ 23ಕ್ಕೆ ಕೊನೆಗೊಂಡಿತ್ತು.
ಚೀನಾದಿಂದ ಆಮದಾಗುವ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ನಿರ್ಬಂಧಗಳನ್ನು ಹೇರುವ ಮುನ್ನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸಂಬಂಧಿಸಿದ ಇಲಾಖೆಯೊಂದಿಗೆ ಸಭೆ ನಡೆಸಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.
ಆಮದು ನಿಷೇಧಕ್ಕೆ ಒಳಪಟ್ಟಿರುವ ಹಾಲಿನ ಉತ್ಪನ್ನಗಳಲ್ಲಿ ಚಾಕೊಲೇಟ್‌ಗಳು, ಕ್ಯಾಂಡಿಗಳು, ಕನ್ಫೆಕ್ಷನರಿ ಮತ್ತಿತರ ಪದಾರ್ಥಗಳು ಸೇರಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com