ಆಪಲ್, ಅಮೇಜಾನ್ ನಂತರ 1 ಟ್ರಿಲಿಯನ್ ಡಾಲರ್ ಹೊಂದಿರುವ ಕಂಪನಿಗಳ ಪಟ್ಟಿಯಲ್ಲಿ ದಾಖಲಾಗಿದ್ದು, 2014 ರಲ್ಲಿ ಸತ್ಯ ನಾದೆಳ್ಲ ಸಿಇಒ ಆಗಿ ನೇಮಕಗೊಂಡ ಬಳಿಕ ಸಂಸ್ಥೆ ಅದ್ಭುತ ಬೆಳವಣಿಗೆ ಕಂಡಿದೆ. "ಇಡೀ ಜಗತ್ತು, ಕ್ಲೌಡ್ ಫಸ್ಟ್, ಮೊಬೈಲ್ ಫಸ್ಟ್ ಟ್ರೆಂಡ್ ನದ್ದಾಗಿದೆ. ಗ್ರಾಹಕರು ಕೇಳುವ ಮುನ್ನವೇ ಅವರ ಅಗತ್ಯತೆಗಳನ್ನು ಪೂರೈಸುವುದು ಸಂಸ್ಥೆಯ ಅಭೂತಪೂರ್ವ ಯಶಸ್ಸಿನ ಹಿಂದಿನ ಗುಟ್ಟು" ಎನ್ನುತ್ತಾರೆ ಸಿಇಒ ಸತ್ಯ ನಾದೆಳ್ಲ. ಸತ್ಯ ನಾದೆಳ್ಲ ಮುನ್ನ ಸ್ಟೀವ್ ಬಾಲ್ಮರ್ ಸಿಇಒ ಆಗಿದ್ದಾಗ ಮೈಕ್ರೋಸಾಫ್ಟ್ ಷೇರುಗಳು ಕುಸಿತ ಕಂಡಿದ್ದವು. ಆದರೆ ಸತ್ಯ ನಾದೆಳ್ಲ ಅಧಿಕಾರ ವಹಿಸಿಕೊಂಡ ವರ್ಷದಲ್ಲಿ ಮೈಕ್ರೋ ಸಾಫ್ಟ್ ಷೇರುಗಳು ಶೇ.14 ರಷ್ಟು ಏರಿಕೆಯಾಗಿತ್ತು. 2015 ರಲ್ಲಿ ಶೇ.21 ರಷ್ಟು ಏರಿಕೆಯಾಗಿತ್ತು.